ನಮಸ್ಕಾರ ವೀಕ್ಷಕರೇ ಕರುನಾಡ ರಿಯಲ್ ಹೀರೋ ಸರಳತೆಯ ಸಾಮ್ರಾಟ ನಗುವಿನ ಸರದಾರ ಅಭಿಮಾನಿಗಳ ದೇವರು ಪ್ರತಿಯೊಬ್ಬರು ಕಷ್ಟಕ್ಕೂ ಮಿಡಿ ದಂತಹ ಹೃದಯವಂತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಮೀಟ್ ಮಾಡಲೆಂದು ಒಂದು ಫ್ಯಾಮಿಲಿ ಬರುತ್ತೆ ಗಂಡ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳು ಒಂದು ಮುದ್ದಾಗಿರುವ ಅಂತಹ ಗಂಡು ಮಗು ಇನ್ನೊಂದು ಮುದ್ದಾಗಿರುವಂತಹ ಹೆಣ್ಣು ಮಗು ಮೊದಲು ಅವರ ಪತ್ನಿ ಯವರು ಪುನೀತ್ ರಾಜ್ ಕುಮಾರ್ ಅವರ ಜೊತೆ ಒಂದು ಫೋಟೋವನ್ನು ತೆಗೆಸಿ ಕೊಳ್ಳುತ್ತಾರೆ. ಆ ಸಮಯದಲ್ಲಿ ಪತ್ನಿ ಅವರೇ ಮಗುವನ್ನು ಎತ್ಕೊಂಡು ಇರುತ್ತಾರೆ. ಸರಳತೆಗೆ ಇನ್ನೊಂದು ಹೆಸರೇ ಪುನೀತ್ ರಾಜ್ ಕುಮಾರ್ ಅನ್ನೋದಕ್ಕೆ ಇದೊಂದು ದೊಡ್ಡ ಉದಾಹರಣೆ ಮತ್ತು ದೊಡ್ಡ ಸಾಕ್ಷಿ ಎನ್ನಬಹುದು ವಿಶೇಷ ಏನಪ್ಪಾ ಅಂದರೆ ಇವರ ಇಬ್ಬರ ಸಣ್ಣ ಮಕ್ಕಳಿಗೂ ಕೂಡ ಅಪ್ಪು ಅವರು ಎಂದರೆ ಹಾಟ್ ಫೇವರೇಟ್ ಅಂತೆ, ಪುನೀತ್ ರಾಜಕುಮಾರ್ ಅವರ ಹಾಡುಗಳು ಬಂದರೆ ಸಾಕು ಟಿವಿಯಲ್ಲಿ ನೋಡಿ ಮಕ್ಕಳು ಡ್ಯಾನ್ಸ್ ಮಾಡಿ ಹುಚ್ಚೆದ್ದು ಕುಣಿಯುತ್ತಾರಂತೆ.

ಆ ಪುಟ್ಟ ಮಕ್ಕಳ ತಂದೆ ಪುನೀತ್ ಅವರ ಹತ್ತಿರ ವಿವರಿಸುತ್ತಾರೆ. ಫೋಟೋ ತೆಗೆಸಿಕೊಂಡ ಬಳಿಕ ಪುಟ್ಟ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಾರೆ ಅಪ್ಪು, ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ ನಿನ್ನ ಹೆಸರೇನು ಪುಟ್ಟಿ ಅಂತ ಹಾಗೆ ಹೀಗೆ ಅಂತ ಪ್ರಶ್ನೆಗಳನ್ನು ಪ್ರೀತಿಯಿಂದ ಕೇಳುತ್ತಾರೆ.ಜೊತೆಗೆ ಇನ್ನೊಬ್ಬ ಪುಟ್ಟ ಬಾಲಕ ನಾಚಿಕೆ ಪಟ್ಟುಕೊಂಡು ಅಲ್ಲಿ ನಿಂತುಕೊಂಡಿರುತ್ತಾನೆ ಅವರ ದೊಡ್ಡ ಮಗ ಆ ಪುಟ್ಟ ಕಂದನನ್ನು ಕರೆಯುತ್ತಾರೆ ಅಪ್ಪು ತಲೆ ಸವರುತ್ತಾರೆ ಪಕ್ಕದಲ್ಲೆ ನಿಂತ್ಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಎಷ್ಟನೇ ಕ್ಲಾಸ್ ಚೆನ್ನಾಗಿ ಓದುತ್ತೀಯ ಅಂತ ಕೇಳುತ್ತಾರೆ ಆಮೇಲೆ ನಾನು ಯಾರು ಅಂತ ಆ ಪುಟ್ಟ ಮಗುವಿಗೆ ತಮಾಷೆ ಮಾಡುತ್ತಾರೆ. ಆ ಮಗು ಕೂಡ ಟಿವಿಯಲ್ಲಿ ನೋಡಿದ್ದೀವಿ ಅಪ್ಪು ಡ್ಯಾನ್ಸ್ ಅಪ್ಪು ಡ್ಯಾನ್ಸ್ ಅಂತ ಹೇಳುತ್ತದೆ ಅಪ್ಪು ಅವರು ಕೂಡ ಖುಷಿಯಿಂದ ಆ ಮಗು ಹೇಳುವ ಮಾತನ್ನು ಸಂಭ್ರಮಿಸುತ್ತಾರೆ. ಪುನೀತ್ ರಾಜಕುಮಾರ್ ಅವರನ್ನು ಮೀಟ್ ಮಾಡಲೇ ಬೇಕೆಂದು ಅಪ್ಪು ಅಭಿಮಾನಿಯ ಈ ಕುಟುಂಬ ವೊಂದು ಬಂದಿತ್ತು.

ಅದೇ ರೀತಿ ಅಪ್ಪು ಅವರು ಕೂಡ ಈ ಪ್ರೀತಿಯ ಫ್ಯಾಮಿಲಿಯನ್ನು ಮೀಟ್ ಮಾಡಿ ತುಂಬಾ ಚೆನ್ನಾಗಿ ಮಾತನಾಡಿಸಿ ಯೋಗಕ್ಷೇಮವನ್ನು ಕೂಡ ವಿಚಾರಿಸಿದರು. ನೀವು ಎಲ್ಲಿಂದ ಬಂದಿದ್ದೀರಿ ಎಲ್ಲರೂ ಹೇಗಿದ್ದೀರಾ ಮಕ್ಕಳ ವಿದ್ಯಾಭ್ಯಾಸ ಕೂಡ ಪ್ರತಿಯೊಂದು ಕೇಳುತ್ತಾ ಮಾತನಾಡಿದರು ಇದಕ್ಕೆ ಹೇಳೋದು ಅಪ್ಪು ಅವರ ಒಳ್ಳೆಯ ವ್ಯಕ್ತಿತ್ವವನ್ನು ಎಲ್ಲರೂ ಕೂಡ ಪಾಲಿಸುತ್ತಾರೆ. ಪುನೀತ್ ಅವರ ಸರಳತೆಗೆ ಇದೊಂದು ಎಲ್ಲರಿಗೂ ಜೀವನದ ಮಾದರಿಯ ವಿಷಯವಾಗಿದೆ. ಯಾರನ್ನೂ ಕೂಡ ಪುನೀತ್ ಅವರು ನೆಗ್ಲೆಟ್ ಮಾಡುವುದಿಲ್ಲ ಮನೆಯತ್ತಿರ ಬರುವವರನ್ನು ಎಲ್ಲರನ್ನೂ ಚೆನ್ನಾಗಿ ಮಾತನಾಡಿಸಿ ಬಹಳ ಪ್ರೀತಿಯಿಂದ ಕಳುಹಿಸಿಕೊಡುತ್ತಾರೆ. ಎಷ್ಟೆ ಬ್ಯುಸಿ ಇದ್ದರು ಕೂಡ ಮನೆ ಹತ್ತಿರ ನೋಡಲು ಬರುವವರಿಗೂ ಕೂಡ ಸಮಯವನ್ನು ಮೀಸಲಿಡುತ್ತಾರೆ ಅಪ್ಪು..