Advertisements

ಹಾವಿನ ಕಾಟಕ್ಕೆ ಭಯ ಬಿದ್ದು ಕೋಟಿ ಕೋಟಿ ಖರ್ಚು ಮಾಡಿ ಖರೀದಿ ಮಾಡಿದ್ದ ಮನೆಯನ್ನ ಅರ್ಜುನ್ ಸರ್ಜಾ ಏನು ಮಾಡಿದ್ದಾರೆ ಗೊತ್ತೆ!

Cinema

ಹಾವಿನ ದ್ವೇಷ ಹನ್ನೆರಡು ವರುಷ ಹಾಡನ್ನು ನಾವು ಕೇಳಿದ್ದೇವೆ. ಹಾವು ದ್ವೇ’ಷ’ವನ್ನು ಸಾಧಿಸುತ್ತದೆ ಅನ್ನೋದನ್ನ ಅಲ್ಲಿ ಇಲ್ಲಿ ಕೇಳುತ್ತೇವೆ. ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ ಅದೇ ಹಾವಿನ ದ್ವೇ’ಷ’ದ ಅನುಭವ ಸಿನಿಮಾ ನಟನಿಗೆ ಎದುರಾದರೆ ಪರಿಸ್ಥಿತಿ ಏನು. ಅಂತಹ ಸಂಕಷ್ಟಕ್ಕೆ ಸಿಲುಕಿದ ನಟ ನಟಿ ಯಾರು ಎಂದು ಮುಂದೆ ನೋಡಿ. ನಟಿ ಖುಷ್ಬು ಅವರು ತುಂಬಾ ಇಷ್ಟಪಟ್ಟು ಚೆನ್ನೈನ ಸಾಲಿಗ್ರಾಮ್ ನ ಅಭುಸಲೈ ಬೀದಿಯಲ್ಲಿ ಜಾಗ ಖರೀದಿ ಮಾಡಿ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಂಡರು. ಮನೆ ಕಟ್ಟುವಾಗ ಅಲ್ಲಿ ಒಂದು ಹಾವಿನ ಹುತ್ತ ಇತ್ತು. ಅದನ್ನು ಲೆಕ್ಕಿಸದೆ. ಹುತ್ತವನ್ನು ಅಗೆದು ಮನೆ ಕಟ್ಟಿದರು ಖುಷ್ಬು ಕುಟುಂಬ ಆದರೆ ಕಾಕತಾಳಿಯ ಎಂಬಂತೆ ಆ ಮನೆಗೆ ಬಂದಮೇಲೆ ನಟಿ ಖುಷ್ಬು ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದರು.

Advertisements
Advertisements

ಯಾಕೋ ಮನೆ ನಮಗೆ ಸರಿಹೋಗುತ್ತಿಲ್ಲ ಎಂದು ಭಾವಿಸಿದ ಖುಷ್ಬು ಅವರು ಮನೆಯನ್ನು ಖಾಲಿ ಮಾಡಿದರು. ನಂತರ ಆ ಮನೆಯನ್ನು ಸೇಲ್ ಮಾಡಲು ಮುಂದಾದರು. ಆಗ ಹಾವಿನ ದ್ವೇ’ಷ’ವನ್ನೆಲ್ಲಾ ನಂಬದ ಅರ್ಜುನ್ ಸರ್ಜಾ ಅವರು ಖುಷ್ಬು ಅವರ ಮನೆಯನ್ನು ಖರೀದಿ ಮಾಡಿದರು. ತುಂಬಾ ಜನ ಆ ಮನೆಯನ್ನು ಖರೀದಿ ಮಾಡಬೇಡ ಅರ್ಜುನ್ ಸರ್ಜಾರವರಿಗೆ ಹೇಳಿದಾಗಿಯೂ ಅವರ ಮಾತಿಗೆ ಬೆಲೆ ಕೊಡದೆ ಖುಷ್ಬು ಮನೆಯನ್ನು ಕೊಂಡುಕೊಂಡರು. ಮನೆಗೆ ಹೋದ ಒಂದೆ ವಾರದಲ್ಲಿ ಹಾವುಗಳು ಕಾಣಿಸಿಕೊಂಡವು. ಹಾವುಗಳನ್ನ ನೋಡಿದ ಅರ್ಜುನ್ ಸರ್ಜಾ ಕುಟುಂಬ ಪೂಜೆಗಳನ್ನೆಲ್ಲ ಮಾಡಿಸಿದರು.

ಆದ್ರೆ ಮನೆಯೊಳಗೆ ಹಾವುಗಳು ಕಾಣಿಸಿಕೊಳ್ಳೋದು ನಿಲ್ಲಲಿಲ್ಲ. ಅದರ ಮಧ್ಯೆ ಅರ್ಜುನ್ ಸರ್ಜಾ ಕೂಡ ಆರ್ಥಿಕ ಕಷ್ಟಗಳಿಗೆ ಸಿಲುಕಿಕೊಂಡರು. ದಿನಗಳು ಕಳೆದರೆ ಎಲ್ಲೆಂದರಲ್ಲಿ ಹಾವುಗಳು ಕಾಣಿಸಿಕೊಂಡವು. ಹಾಗೆ ಹುತ್ತ ಕೂಡ ಮತ್ತೆ ಬೆಳೆಯಿತು. ಬೇರೆ ವಿಧಿಯಿಲ್ಲದೆ ಕೊನೆಗೆ ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ ಆ ಮನೆಯನ್ನು ಖಾಲಿ ಮಾಡಿದರು ಅರ್ಜುನ್ ಸರ್ಜಾ ಈಗಲೂ ಆ ಮನೆಯಲ್ಲಿ ಹಾವುಗಳು ಇವೆಯೆಂದು ಹೇಳುವ ಅಲ್ಲಿನ ಜನ ಹುತ್ತ ಇದ್ದ ಸ್ಥಳದಲ್ಲಿ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದಾರೆ. ಆದರೆ ಇದೆಲ್ಲ ಕಾಕತಾಳಿಯಾಗಿ ನಡೆದಿರಬಹುದು.ಆದರೆ ಕಾರಣ ಮಾತ್ರ ಹಾವು..