Advertisements

ಏಕಾಏಕಿ ತನ್ನನ್ನು ಮತ್ತು ಮಕ್ಕಳನ್ನು ಹೆಂಡ್ತಿ ಬಿಟ್ಟು ಹೋದಾಗ ಈ ಟಾಪ್ ನಟ ಮಾಡಿದ್ದೇನು ಗೊತ್ತಾ? ಇಂತಹ ತಂದೆ ಇರ್ತಾರ..

Cinema

ರಜನಿಕಾಂತ್ ಮತ್ತು ಮಣಿರತ್ನಂ ಕಾಂಬಿನೇಷನ್ ಅಲ್ಲಿ ಬಂದ ತಲಪತಿ ಚಿತ್ರದಲ್ಲಿ ರಜನಿಕಾಂತ್ ತಮ್ಮನಾಗಿ ನಟಿಸಿದ ಅರವಿಂದ್ ಸ್ವಾಮಿ ಆ ಚಿತ್ರದ ನಂತರ ಸರಣಿ ಸೂಪರ್ ಹಿಟ್ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ಮೆರೆದರು ನಂತರ ತಪ್ಪು ಆಯ್ಕೆಗಳಿಂದ ಸೋಲನ್ನು ಕಂಡರು. ಯಾವ ಸೋಲು ಇವರನ್ನ ಬಾಧಿಸಲಿಲ್ಲ ಆದರೆ ಹೆಂಡತಿ ಕೊಟ್ಟ ಪೆಟ್ಟು ಈ ನಟನನ್ನು ತುಂಬಾ ಕಾಡಿತ್ತು ಹಾಗೂ ಬಾಧಿಸಿತು. ಒಂದು ಕಡೆ ಮಾಡಬೇಕು. ಇನ್ನೊಂದು ಕಡೆ ಚಿಕ್ಕಮಕ್ಕಳು ಇಂತಹ ಸಂದರ್ಭದಲ್ಲಿ ನಟ ಅರವಿಂದ್ ಸ್ವಾಮಿ ಮಾಡಿದ್ದೇನು ಅಂತ ನೋಡಿ. ತಲಪತಿ ಚಿತ್ರದ ನಂತರ ಹಲವು ಹಿಟ್ ಚಿತ್ರಗಳನ್ನು ಕೊಟ್ಟ ಅರವಿಂದ್ ಸ್ವಾಮಿ ನಂತರ ಸತತವಾಗಿ ಸೋಲನ್ನು ಕಂಡರು. ಹಾಗಾಗಿ ಓದುವುದನ್ನು ಮುಂದುವರಿಸಲು ವಿದೇಶಕ್ಕೆ ಹೊರಟರು. ಓದು ಮುಗಿಸಿ ವಾಪಸ್ ಬಂದ ಅರವಿಂದ್ ಸ್ವಾಮಿ ತನ್ನ ತಂದೆಯ ಬಿಸಿನೆಸ್ ನಲ್ಲಿ ತೊಡಗಿದ್ದರು. 1994 ರಲ್ಲಿ ಗಾಯತ್ರಿ ಎಂಬ ಹುಡುಗಿಯನ್ನು ಮದುವೆಯಾದರು.

Advertisements
Advertisements

ಆನಂತರ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಹುಟ್ಟಿದರು. ವ್ಯಾಪಾರದಲ್ಲಿ ಮತ್ತು ಸಿನಿಮಾದಲ್ಲಿ ಹೆಚ್ಚು ಬ್ಯುಸಿಯಾದ ಅರವಿಂದ್ ಸ್ವಾಮಿ ಮನೆಯ ಕಡೆ ಹೆಚ್ಚು ಸಮಯ ಕೊಡಲು ಆಗಲಿಲ್ಲ ಆದರೆ ಎಲ್ಲವನ್ನೂ ಮಾಡುತ್ತಿದ್ದದ್ದು. ಮಕ್ಕಳು ಮತ್ತು ಹೆಂಡತಿಯನ್ನು ಸಂತೋಷವಾಗಿ ಇಡುವ ಸಲುವಾಗಿ ಎಂದು ಈ ನಟನ ಹೆಂಡತಿ ಗ್ರಹಿಸಲಿಲ್ಲ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಹೆಂಡತಿ ನಟ ಅರವಿಂದ್ ಸ್ವಾಮಿ ಮೇಲೆ ಅಸಹಾಯವನ್ನು ಬೆಳೆಸಿಕೊಂಡರು. ಒಂದು ದಿನ ಏಕಾಏಕಿ ಮಕ್ಕಳನ್ನು ಮನೆಯಲ್ಲೆ ಬಿಟ್ಟು ತವರು ಮನೆಗೆ ಹೋದರು ಅರವಿಂದ್ ಸ್ವಾಮಿ ಹೆಂಡತಿ. ಮತ್ತೆ ಈ ನಟನ ಹೆಂಡತಿ ವಾಪಸ್ ಬರಲೆ ಇಲ್ಲ ಹಾಗಾಗಿ ಮಕ್ಕಳನ್ನು ನೋಡುಕೊಳ್ಳುವ ಜವಾಬ್ದಾರಿ ಅರವಿಂದ್ ಸ್ವಾಮಿ ಹೆಗಲ ಮೇಲೆ ಬಿತ್ತು. ಜೀವನದಲ್ಲಿ ಸಡನ್ ಆಗಿ ಆದ ತಿರುವನ್ನು ಪ್ರೀತಿಯಿಂದ ಸ್ವೀಕರಿಸಿದ ನಟ ಅರವಿಂದ್ ಸ್ವಾಮಿ ತನ್ನ ಮಕ್ಕಳಿಗೆ ತಾಯಿಯಾಗಿ ಸ್ನಾನ ಮಾಡಿಸಿದರು.

ಆಚೆ ಕಡೆ ತಿಂದರೆ ಆರೋಗ್ಯ ಕೆ’ಡು’ತ್ತೆ ಎಂದು ಅವರೆ ಅಡುಗೆ ಮಾಡೋದು ಕಲಿತು ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದರು.ತಂದೆಯ ಸ್ಥಾನದಲ್ಲಿ ನಿಂತು ಮಕ್ಕಳನ್ನು ಮುದ್ದಾಗಿ ಸಾಕಿದ್ದರು.ಒಂದು ಬಾರಿ ಅರವಿಂದ್ ಸ್ವಾಮಿಗೆ ಆ’ಕ್ಸಿಡೆಂ’ಟ್ ಆಯ್ತು. ಆಗಲು ಮಕ್ಕಳ ಪೋಷನೆಯನ್ನು ಬೇರೆಯವರಿಗೆ ಕೊಡಲಿಲ್ಲ. ಈಗ ಮಕ್ಕಳು ಒಳ್ಳೆಯ ವಿದ್ಯಾಬ್ಯಾಸ ಮಾಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವ ಅಂತಕ್ಕೆ ಬಂದಿದ್ದಾರೆ ಇಷ್ಟೂ ಒಳ್ಳೆಯ ತಂದೆಯನ್ನು ನೋಡೋದು ತುಂಬ ಅಪರೂಪ ಎಂದು ಚಿತ್ರರಂಗದ ತುಂಬ ಜನ ಹೇಳುತ್ತಾರೆ ಅದಕ್ಕೆ ಹಿರಿಯರೂ ಹೇಳಿರೋದು ತಾಯಿ ಮಕ್ಕಳ ಭಾರವನ್ನು ಒಂಬತ್ತು ತಿಂಗಳು ಹೊತ್ತರೆ ತಂದೆ ಮಕ್ಕಳ ಭಾರವನ್ನು ಜೀವನ ಪೂರ್ತಿ ಹೊರುತ್ತಾರೆಂದು..