ನಮಸ್ತೆ ಸ್ನೇಹಿತರೆ, ಬಾಲಿವುಡ್ ನ ಖ್ಯಾತ ನಟ ಶಾರುಖಾನ್ ಪುತ್ರ ಆರ್ಯನ್ ಇದೀಗ ಡ್ರಕ್ಸ್ ಕೇಸ್ನಲ್ಲಿ ಸಿಲುಕಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಆರ್ಯನ್ ಖಾನ್ ಜೊತೆಗೆ ಇನ್ನಿಬ್ಬರು ಪೊಲೀಸರ ಬಲೆಗೆ ಸಿಲುಕಿಕೊಂಡಿದ್ದಾರೆ. ಇವರ ಜೊತೆ ಸಿಲುಕಿಕೊಂಡಿರುವ ಒಬ್ಬ ಯುವತಿ ಎಲ್ಲರ ಕುತೂಹಲವನ್ನು ಕೆರಳಿಸಿದ್ದಾರೆ. ಆಕೆಯ ಹೆಸರು ಮುನ್ಮುನ್ ದಮೇಚ ಅಂತ. ಈಗ ಎಲ್ಲರಿಗೂ ಮೂಡಿರುವ ಪ್ರಶ್ನೆ ಏನೆಂದರೆ ಯಾರು ಈಕೆ..? ಎಲ್ಲಿಂದ ಬಂದಿದ್ದಾಳೆ ಅಂತ.. ಪೊಲೀಸರ ಕಾರ್ಯಾಚರಣೆಯಲ್ಲಿ ಈಕೆಯ ಮಾಹಿತಿ ಹೊರಬಂದಿದೆ. ಏನು ಅಂತ ತಿಳಿಯೋಣ ಬನ್ನಿ..

ಈಕೆ ಪ್ರಸ್ತುತ ದೆಹಲಿಯಲ್ಲಿ ವಾಸವಾಗಿದ್ದಾಳೆ. ಈಕೆಯ ಮೂಲತಃ ಮಧ್ಯಪ್ರದೇಶದ ತಹಸಿಲ್ ನವಳು. ಈಕೆಯ ತಂದೆ-ತಾಯಿ ಮೃ’ತಪಟ್ಟಿದ್ದಾರೆ, ಆದ್ದರಿಂದ ಈಕೆ ತನ್ನ ಹುಟ್ಟೂರನ್ನು ಬಿಟ್ಟು ತನ್ನ ಸಹೋದರನ ಜೊತೆ ದೆಹಲಿಯಲ್ಲಿ ನೆಲೆಸಿದ್ದಾಳೆ. ಸುಮಾರು ಆರು ವರ್ಷಗಳಿಂದ ಸಹೋದರ ಪ್ರಿನ್ಸ್ ಜೊತೆ ದೆಹಲಿಯಲ್ಲಿ ನೆಲೆಸಿರುವ ಈಕೆ ಫೇಮಸ್ ಮಾಡಲ್ ಆಗಿ ಗುರುತಿಸಿಕೊಂಡಿದ್ದಾಳೆ.

ಆಗಾಗ ತನ್ನ ಕ್ಯಾಟ್ವಾಕ್ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳ ಲೈಕ್ ಗಳನ್ನು ಪಡೆಯುತ್ತಿರುತ್ತಾಳೆ. ಇದರ ಜೊತೆಗೆ ಕೆಲವು ಜಾಹೀರಾತುಗಳಲ್ಲಿಯೂ ಮುನ್ಮನ್ ಕಾಣಿಸಿಕೊಂಡಿದ್ದಾಳೆ. ಅದೇ ರೀತಿ ಬಾಲಿವುಡ್ನ ಕೆಲವು ಗಣ್ಯವ್ಯಕ್ತಿಗಳ ಮಕ್ಕಳೊಂದಿಗೆ ಉಸಹ ಸಂಪರ್ಕವನ್ನು ಹೊಂದಿದ್ದಾಳೆ. ಶ್ರೀಮಂತರ ಜೊತೆ ಹಲವಾರು ಪಾರ್ಟಿಗಳಲ್ಲಿ ತುಂಬಾ ಆಕ್ಟಿವ್ ಆಗಿ ಭಾಗವಹಿಸುತ್ತಾಳೆ. ಆದರೆ ಈ ಸಲ ಪಾರ್ಟಿಯಲ್ಲಿ ಡ್ರ’ಗ್ಸ್ ತೆಗೆದುಕೊಳ್ಳುತ್ತಾ ಆರ್ಯನ್ ಖಾನ್ ಜೊತೆ ಪೊಲೀಸರಿಗೆ ಬಲೆಗೆ ಸಿಕ್ಕಿ ಕಂಬಿ ಎಣಿಸುತ್ತಿದ್ದಾಳೆ..