ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿ’ಧ’ನದ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಏನು ಮಾಡುತ್ತಿದ್ದಾರೆ ಈಗ ಅವರು ಮನೆಯಲ್ಲಿಯೇ ಇದ್ದಾರ ಅವರ ಮನಸ್ಥಿತಿ ಹೇಗಿದೆ ಅಂತ ಹಲವರಿಗೆ ಕುತೂಹಲವಿತ್ತು. ಪುನೀತ್ ರಾಜಕುಮಾರ್ ಪ್ರೀತಿಯಿಂದ ಆರಂಭಿಸಿದ ಪ್ರೊಡಕ್ಷನ್ ಹೌಸ್ ಇನ್ಮುಂದೆ ಅದೇ ರೀತಿ ನಡೆಯುತ್ತಾ ಅಂತೆಲ್ಲ ಅಭಿಮಾನಿಗಳು ಹಾಗೂ ಜನಸಾಮಾನ್ಯರು ಕೇಳುತ್ತಿದ್ದರು. ಅದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ ಅಶ್ವಿನಿ ಪುನೀತ್ ರಾಜಕುಮಾರ್ ಈಗ ದಿನವು ಪತಿ ಆಫೀಸ್ ಗೆ ಹೋಗಿ ಅಪ್ಪು ರೀತಿಯೆ ಕಾರ್ಯನಿರ್ವಹಿಸುತ್ತಿದ್ದಾರೆ.ಜೊತೆಗೆ ಈಗ ಸ್ವಲ್ಪ ಧೈರ್ಯ ತಂದುಕೊಂಡು ಪುನೀತ್ ಅವರ ಕನಸುಗಳನ್ನು ನನಸು ಮಾಡುವಂತ ಹೆಜ್ಜೆ ಹಾಕುತ್ತಿದ್ದಾರೆ.
[widget id=”custom_html-5″]

ಅಂದಹಾಗೆ ಪುನೀತ್ ನೆನಪಿನಲ್ಲಿ ಪುನೀತ್ ಅವರ ಭಾವಚಿತ್ರದೊಂದಿಗೆ ಹಿಮಾಲಯದಿಂದ ಮೂರುವರೆ ಸಾವಿರ ಕಿಲೋಮೀಟರ್ ಸೈಕಲ್ ಸವಾರಿ ಮಾಡಿಕೊಂಡು ಬಂದಿರೋ ಪುನೀತ್ ಅಭಿಮಾನಿ ಗುರುಪ್ರಸಾದ್ ಅವರನ್ನು ಇವತ್ತು ಅಶ್ವಿನಿ ಪುನೀತ್ ರಾಜಕುಮಾರ್ ಭೇಟಿ ಮಾಡಿದ್ದಾರೆ. ಇತ್ತೀಚೆಗೆ ಎಲ್ಲೂ ಕಾಣಿಸಿಕೊಳ್ಳದ ಅಶ್ವಿನಿ ಅವರು ಇವತ್ತು ವಜ್ರೇಶ್ವರಿ ಕಂಬೈನ್ಸ್ ಆಫೀಸ್ ನಲ್ಲಿ ಅಭಿಮಾನಿಯನ್ನು ಭೇಟಿ ಯಾಗಿದ್ದಾರೆ. ಇಲ್ಲಿ ಇನ್ನೊಂದು ಸಂತೋಷದ ವಿಷಯ ಅಂದರೆ ವಜ್ರೇಶ್ವರಿ ಕಂಬೈನ್ಸ್ ಆಫೀಸ್ ನಲ್ಲಿ ತಮ್ಮ ಕ್ಯಾಬಿನೆಟ್ ನಲ್ಲಿ ಕುಳಿತಿರುವ ಅಶ್ವಿನಿ ಅವರನ್ನು ನೋಡಿದರೆ ಅಪ್ಪು ಅವರನ್ನು ನೋಡಿದಷ್ಟೇ ಸಂತೋಷವಾಗುತ್ತೆ.
[widget id=”custom_html-5″]

ಆ ಸೀಟಿನ ಹಿಂಬದಿಯಲ್ಲಿ ಪಾರ್ವತಮ್ಮ ರಾಜಕುಮಾರ್ ಅವರ ಫೋಟೋ ಕೂಡ ಇದೆ ಅದರ ಮುಂದೆ ಅಶ್ವಿನಿ ಅವರು ಕೂತು ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಇಂದು ಭೇಟಿಯಾದ ಅಭಿಮಾನಿಗೆ ಅಪ್ಪು ಬಳಸುತ್ತಿದ್ದ ಕನ್ನಡಕವೊಂದನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಶ್ವಿನಿ ಅವರು ಗುರುಪ್ರಸಾದ್ ಸೈಕಲ್ ಮತ್ತು ಸೈಕಲ್ ಮೇಲಿರುವ ಅಪ್ಪು ಭಾವಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅಂತ ಆಟೋಗ್ರಾಫ್ ಹಾಕಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಬಹಳ ದಿನಗಳ ನಂತರ ಅಶ್ವಿನಿ ಅವರು ಆ ಸೀಟಿನಲ್ಲಿ ನೋಡಿದ ಅಪ್ಪು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಅಪ್ಪುವಿನ ಎಲ್ಲ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಅಶ್ವಿನಿ ಮೇಡಂ ಅವರು..
[widget id=”custom_html-5″]