Advertisements

ಅಶ್ವಿನಿ ಅವರ ಮೇಲೆ ಬಿತ್ತು ಮತ್ತೊಂದು ದೊಡ್ಡ ಜವಾಬ್ದಾರಿ.. ಎಲ್ಲರೂ ಶಾಕ್!

Cinema

ನಮ್ಮೆಲ್ಲರ ಪ್ರೀತಿಯ ಮುತ್ತುರತ್ನ ಅಪ್ಪು ಅವರು ನಿ’ಧ’ನರಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಇದೀಗ ಪುನೀತ್ ರಾಜಕುಮಾರ್ ಧರ್ಮಪತ್ನಿ ಅಶ್ವಿನಿ ಮೇಡಮ್ ಮಕ್ಕಳು ಹಾಗೂ ಇಡಿ ಡಾಕ್ಟರ್ ರಾಜಕುಮಾರ್ ಕುಟುಂಬ ಅಪ್ಪು ಅವರನ್ನು ಕಳೆದುಕೊಂಡು ತೀವ್ರ ದುಃಖ ನೋವಿನಲ್ಲಿ ಇದೆ. ಆದರೂ ಕೂಡ ಪತಿಯ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಅಶ್ವಿನಿ ಮೇಡಮ್ ಅವರಿಗೆ ಇದೀಗ ಮತ್ತೊಂದು ಬಹುದೊಡ್ಡ ಜವಾಬ್ದಾರಿ ಹೆಗಲಿಗೆ ಬಿದ್ದಿದೆ ಹೌದು ಅಶ್ವಿನಿ ಪುನೀತ್ ರಾಜಕುಮಾರ್ ಈಗ ಮತ್ತೊಂದು ಹೊಸ ಜವಾಬ್ದಾರಿಯನ್ನು ತೆಗೆದು ಕೊಂಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಸಲಹಾ ಸಮಿತಿಯ ಸದಸ್ಯೆಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಆಯ್ಕೆಯಾಗಿದ್ದಾರೆ..

[widget id=”custom_html-5″]

Advertisements
Advertisements

ಈ ವಿಷಯ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಮನೆ ಯ ಮಗ ಹಾಗೂ ಕೋಟ್ಯಂತರ ಅಭಿ ಮಾನಿಗಳ ಅಚ್ಚು ಮೆಚ್ಚಿನ ನಟನಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಕಾಲಿಕ ನಿಧನನಿಂದ ಇಡಿ ಕರುನಾಡು ಬಡವಾಗಿದೆ ಈಗಲೂ ಕೂಡಾ ಅವರ ನೆನಪು ಅವರ ಫೋಟೊಗಳನ್ನು ನೋಡಿದಾಗ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ದುಃಖವಾಗುತ್ತಿದೆ ಅವರು ಇಲ್ಲವೆಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಕೂಡ ಮುತ್ತುರಾಜನ ಕುಟುಂಬ ಆ ನೋವಿನಿಂದ ಹೊರಗಡೆ ಬಂದಿಲ್ಲ. ಪುನೀತ್ ಪತ್ನಿ ಅಶ್ವಿನಿ ನಿಧಾನವಾಗಿ ಇ ನೋವಿನಿಂದ ಹೊರಬರಲು ಪ್ರಯತ್ನ ಮಾಡುತ್ತಿದ್ದಾರೆ.

[widget id=”custom_html-5″]

ಅಪ್ಪು ಮಾಡಬೇಕಿದ್ದ ಕೆಲಸಗಳನ್ನು ಇದೀಗ ಅಶ್ವಿನಿ ಮೇಡಂ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ.ಅದ್ರಲ್ಲಿ ಅಪ್ಪು ಇಲ್ಲವಾದ ಬಳಿಕ ಅಶ್ವಿನಿ ಮೇಡಮ್ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿಕೊಟ್ಟು ಪಿಆರ್ ಕೆ ಜವಾಬ್ದಾರಿ ಜೊತೆಗೆ ಅಪ್ಪು ಕನಸುಗಳನ್ನು ನನಸು ಮಾಡಲು ಮುಂದಾಗಿದ್ದಾರೆ. ಅವರ ಬೆನ್ನೆಲುಬಾಗಿ ರಾಘಣ್ಣನು ಮತ್ತು ಶಿವಣ್ಣನು ಕೂಡ ಅಪ್ಪು ಫಿಲ್ಮ್ ಆದ ಜೇಮ್ಸ್ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ. ಆದಷ್ಟು ಬೇಗ ಜೇಮ್ಸ್ ಚಿತ್ರ ತೆರೆಮೇಲೆ ನೋಡಲು ನಮ್ಮ ಕನ್ನಡ ಚಿತ್ರರಂಗ ಕಾಯುತ್ತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..

[widget id=”custom_html-5″]