ಸದ್ಯ ಪುನೀತ್ ರಾಜ್ ಕುಮಾರ್ ಅಗಲಿಕೆಯನ್ನು ಇನ್ನೂ ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌದು ಅಪ್ಪು ಅಗಲಿ ಎಂಟು ತಿಂಗಳು ಕಳೆದರೂ ಅಭಿಮಾನಿಗಳು ಇನ್ನೂ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು ಎಂದು ಭಿತ್ತಿ ಪತ್ರವನ್ನು ಅಂಟಿಸುತ್ತಿದ್ದಾರೆ.

ಹೌದು ಹುಡುಗನೊಬ್ಬ ಭಿತ್ತಿ ಪತ್ರವನ್ನು ಗೋಡೆಗೆ ಅಂಟಿಸಿ ಕಾಣೆಯಾಗಿರುವ ತಮ್ಮ ನೆಚ್ಚಿನ ನಟನನ್ನು ಹುಡುಕಿಕೊಡಿ ಎಂದು ಕೇಳುವ ವಿಡಿಯೋ ಕೂಡ ವೈರಲ್ ಆಗಿದೆ. ಹೌದು ಹೀಗೆ ಅಪ್ಪು ಅವರನ್ನು ಹುಡುಕುವ ಪ್ರಯತ್ನವನ್ನು ಇನ್ನೂ ಅಭಿಮಾನಿಗಳು ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಅಪ್ಪು ನಮ್ಮಿಂದ ಅಗಲಿಲ್ಲ ಅಗಲುವುದೂ ಇಲ್ಲ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಇನ್ನು ಈ ಪೋಸ್ಟರ್ ನೋಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಹೇಳಿದ್ದೇನು ಗೊತ್ತಾ?

ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ಪುನೀತ್ ಪುಣ್ಯಭೂಮಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಅಲ್ಲದೇ ಪುನೀತ್ ಅವರ ಹೆಸರಿನಲ್ಲಿ ಅಲ್ಲಲ್ಲಿ ನಿತ್ಯವೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಊರಿಗೆ ಬೀದಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನೂ ಇಟ್ಟಿದ್ದು ಹೀಗೆ ಪುನೀತ್ ಅವರನ್ನು ತಮಗಿಷ್ಟ ಬಂದಂತೆ ಆರಾಧಿಸುತ್ತಿದ್ದಾರೆ.

ಸದ್ಯ ಅಭಿಮಾನಿಗಳು ಅಪ್ಪು ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದಂತೆ ಇದನ್ನು ನೋಡಿದ ಅಶ್ವಿನಿ ಮೇಡಂ ರವರು ಬಹಳಾನೇ ಭಾವುಕರಾಗಿದ್ದಾರೆ. ಹೌದು ಅಭಿಮಾನಿಗಳ ಈ ನಿಸ್ವಾರ್ಥ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿರುವ ಅಶ್ವಿನಿ ಮೇಡಂ ಅಪ್ಪು ಎಲ್ಲೂ ಕೂಡ ಕಾಣೆಯಾಗಿಲ್ಲ. ನಿಮ್ಮ ಅಂತಹ ಅಭಿಮಾನಿಗಳ ಮನದಲ್ಲಿ ಸದಾ ಇದ್ದಾರೆ. ಡ್ಯಾನ್ಸ್ ನಲ್ಲಿ ಇದ್ದಾರೆ. ಪುಟ್ಟ ಮಕ್ಕಳ ಮುಖದಲ್ಲಿದ್ದಾರೆ. ಚಿತ್ರರಂಗದಲ್ಲಿದ್ದಾರೆ ಅವರು ಖಂಡಿತ ಕಾಣೆಯಾಗಿಲ್ಲ. ಸದಾ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳುವ ಮೂಲಕ ಬಹಳ ಭಾವುಕರಾಗಿದ್ದಾರೆ. ನಿಜಕ್ಕೂ ಪರಮಾತ್ಮ ನನ್ನು ಕಳೆದು ಕೊಂಡ ದುಃಖ ಅಶ್ವಿನ ಅವರಿಗೆ ಎಷ್ಟಿದೆ ಎಂಬುದು ಅವರ ಕಣ್ಣಿನಲ್ಲಿಯೇ ತಿಳಿಯುತ್ತದೆ.