Advertisements

ಎಂತಾ ಹುಡುಗಿಗೆ ಎಂತಾ ಹುಡುಗನಪ್ಪಾ ಅಂತ ಹೀಯಾಳಿಸುತ್ತಿದ್ದವರು ಇವರ ಬಗ್ಗೆ ನಿಜ ಗೊತ್ತಾಗಿ ಒಂದು ಕ್ಷಣ ಶಾಕ್ ಆದರೂ! ನಿಜಕ್ಕೂ ಈ ಜೋಡಿ ಯಾರು ಗೊತ್ತಾ? ನೋಡಿ..

Cinema

ಕಪ್ಪು ಬಣ್ಣವನ್ನು ಹೆಚ್ಚಾಗಿ ಯಾರು ಇಷ್ಟಪಡುವುದಿಲ್ಲ. ಬಿಳಿ ಮೋಡ ಇದ್ರೆ ಮಳೆ ಬರುವುದಿಲ್ಲ. ಬಿಳಿ ಆಕಾಶದಲ್ಲಿ ಕಪ್ಪು ಮೋಡ ಬಂದರೇನು ಮಳೆಯಾಗುವುದು. ಮಳೆ ಆದರೆ ಬೆಳೆ ಬರುವುದು. ಅದೇ ರೀತಿ ಬಿಳಿಹಾಳೆಯಲ್ಲಿ ಕಪ್ಪು ಅಕ್ಷರಗಳು ಬರೆದರೆ ಆಗ ಕವನವಾಗುವುದು. ಹಾಗೆ ಈ ಇಬ್ಬರು ಜೋಡಿಗಳು. ಹುಡುಗ ಕಡು ಕಪ್ಪು ವರ್ಣ. ಹುಡುಗಿ ಬೆಳದಿಂಗಳ ಹಾಲು ಬಣ್ಣದವಳು. ಇವರಿಬ್ಬರು ಇದೀಗ ಸುಖ ಸಂಸಾರವನ್ನು ಮಾಡುತ್ತ ಬೇರೊಬ್ಬರಿಗೆ ಮಾದರಿಯಾಗಿದ್ದಾರೆ. ಇವರನ್ನು ಕಂಡ ಅದೆಷ್ಟೋ ಜನ ಹೀಯಾಳಿಸಿದ್ದು ಉಂಟು. ಆದ್ರೆ ನಿಜ ಸಂಗತಿ ತಿಳಿದಾಗ ಫೋಟೋಗ್ರಾಫ್ ಆಟೋಗ್ರಾಫ್ಗಾಗಿ ಕಾಯುವರು. ಅಷ್ಟಕ್ಕೂ ಈ ಜೋಡಿ ಯಾವುದು ಅಂತೀರಾ? ಬನ್ನಿ ತಿಳಿದುಕೊಳ್ಳಿ.
ತಮಿಳುನಾಡಿನ ಮಧುರೈನ ಅಟ್ಲಿಕುಮಾರ ಹಾಗೂ ಕೃಷ್ಣಪ್ರಿಯಾ ಜೋಡಿ ಎಲ್ಲೆಡೆ ಹೆಸರಾದ ಜೋಡಿ.

Advertisements
Advertisements

ತಮಿಳುನಾಡಿನಾದ್ಯಂತ ಅಟ್ಲಿ ಕುಮಾರ ಹೆಸರು ಬ್ರಹತ್ ಮಟ್ಟದಲ್ಲಿ ಬೆಳೆದು ಸುಪ್ರಸಿದ್ಧವಾಗಿದೆ. ಹೌದು ಈತ ಮಾಡಿದ 9 ಚಿತ್ರಗಳು ಸಹ ಸೂಪರ್ ಹಿಟ್ ಆಗಿವೆ. ಮೊದಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು. ನಂತರ ತಮಿಳಿನ ಶಂಕರ್ ಜೊತೆಗೆ 5ವರ್ಷ ಅಸಿಸ್ಟೆಂಟ್ ಆಗಿ ಅವರ ಗರಡಿಯಲ್ಲಿ ಬೆಳೆದರು. ಇವರ ಡೈರೆಕ್ಷನಲ್ಲಿ ಮೊದಲಿಗೆ ಮೂಡಿಬಂದ ಚಿತ್ರ ‘ರೋಬೋಟ್’. ಇದರಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಕೀರ್ತಿ ಆಟ್ಲಿಕುಮಾರನದು. ತದನಂತರ ‘ತ್ರೀ ಈಡಿಯಟ್ಸ್ ‘ ತಮಿಳಿಗೆ ಡಬ್ ಮಾಡಿದ್ದರು. ಇದು ಕೂಡಾ ಫೇಮಸ್ ಆಯ್ತು.
ನಂತರದ ದಿನಗಳಲ್ಲಿ ಸ್ವತಹ ತಾವೇ ತಮ್ಮ ಡೈರೆಕ್ಷನ್ ನಲ್ಲಿ ” ರಾಜ ರಾಣಿ “ ಎಂಬ ಚಿತ್ರವನ್ನು ತೆರೆಗೆ ತಂದರು. ಇದು ತಮಿಳಿನಲ್ಲಿ ಸುಮಾರು 50 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಗಳಿಸಿತು ಇದಕ್ಕೆ ‘ ಬೆಸ್ಟ್ ಡೈರೆಕ್ಟರ್ ‘ ಎಂಬ ಬಿರುದಿನ ಜೊತೆಗೆ ಪ್ರಶಸ್ತಿ ಕೂಡ ಲಭಿಸಿತು.

ಇವುಗಳನ್ನು ಅಂತರದಲ್ಲಿ ಮೂಡಿಬಂದ ಚಿತ್ರಗಳೇ ‘ತೇರಿ ‘, ‘ಪೊಲೀಸರು’, ‘ಮೇಳಸಲ್ ‘ ಚಿತ್ರಗಳು ಕೋಟಿ ಕೋಟಿ ಹಣ ಗಳಿಸಿ ಬಾಕ್ಸಾಫೀಸನ್ನು ಒಂದು ಕೊಳ್ಳೆಹೊಡೆದಿದ್ದವು. ಹೆಸರು ಹಣ ಎಲ್ಲವೂ ಆಟ್ಲಿ ಕುಮಾರನ ದಾಯಿತು. ಅವರನ್ನು ಪ್ರೀತಿಸಿ ವಿವಾಹವಾದವರೇ ಕೃಷ್ಣಪ್ರಿಯಾ. ಈಕೆ ನೋಡಲು ಹಾಲು ಬಣ್ಣದ್ದಾಗಿದ್ದವಳು.ಅಟ್ಲಿ ಕುಮಾರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿಯೇ ವಿವಾಹವಾಗಿದಳು. ಈ ಮೊದಲು ಪ್ರಿಯ ಕಿರುಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಳು. ಇದೀಗ ಇವರಿಬ್ಬರ ಜೋಡಿ ಕಂಡ ಅದೆಷ್ಟುಜನ ಟ್ರೋಲ್ ಮಾಡಿದ್ದಾರೆ. ಇಂತಹ ಸುಂದರ ಹೆಣ್ಣಿಗೆ ಈ ಕಪ್ಪುವರ್ಣದ ಪತಿ ಏಕೆ? ನಿನಗೆ ಬೇರೆ ಯಾರು ಸುಂದರವಾದ ಯುವಕ ಸಿಗಲಿಲ್ಲವೇ? ಹೀಗೆ ಅನೇಕ ರೀತಿಯ ಕಮೆಂಟ್ಗಳನ್ನು ನೀಡಿದರು.

ಇದಕ್ಕೆ ತಲೆಕೆಡಿಸಿಕೊಳ್ಳದ ಪ್ರಿಯ ಕುಮಾರ ನೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಇಂದಿಗೂ ಇವರಿಬ್ಬರು ಜೋಡಿ ಹಕ್ಕಿಗಳಾಗಿ, ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಸುಂದರ, ಸುಖಮಯ ಸಂಸಾರವನ್ನು ನಡೆಸುತ್ತಿದ್ದಾರೆ.
ಇದೀಗ ನಿಂದಿಸಿದವರ ಮುಂದೆ ಬಂದು ಆಟೋಗ್ರಾಫ್ ಕೇಳುತ್ತಿದ್ದಾರೆ.ಯಾಕೆಂದರೆ ಆಟ್ಲಿ ಕುಮಾರ್ ಇದೀಗ ತಮಿಳು- ತೆಲುಗು ಭಾಷೆಯಲ್ಲಿ ಪ್ರಸಿದ್ಧ ಡೈರೆಕ್ಟರ್. ಇವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಈಗ ಜನರು ಮುಗಿಬೀಳುತ್ತಾರೆ. ಸಾಲುಗಟ್ಟಿ ನಿಲ್ಲುತ್ತಾರೆ. ಅದಕ್ಕೆ ಹೇಳುವುದು ಓದುಗರೆ ಬಣ್ಣ ನೋಡಿ ಯಾರನ್ನು ಕೂಡ ಅಳೆಯಬಾರದು. ಮನಸ್ಸಿನ ಸೌಂದರ್ಯದ ಮುಂದೆ ದೇಹದ ಬಣ್ಣ ಯಾವ ಲೆಕ್ಕ. ಇವರಿಬ್ಬರ ಜೋಡಿ ವರ್ಣಭೇದ ಮಾಡುವವರ ಬಾಯಿಮೇಲೆ ಹೊಡೆದಂತಿದೆ.