ನಮಸ್ತೆ ಸ್ನೇಹಿತರೆ, ಎಟಿಎಂ ಮೆಷಿನ್ ಪ್ರತಿಯೊಬ್ಬರೂ ಎಲ್ಲಿಗೆ ಹೋದರೂ ಅವರ ಬೇಡಿಕೆಗೆ ತಕ್ಕಂತೆ ಉಪಯೋಗವಾಗುತ್ತಿರುವ ಸಾಧನ. ಎಟಿಎಂ ಇಲ್ಲದೆ ನಮ್ಮ ದೈನಂದಿನ ಜೀವನ ಮುಂದಕ್ಕೆ ಸಾಗುವುದು ಕ’ಷ್ಟವಾಗಿಬಿಟ್ಟಿದೆ. ಆದರೆ ನಾವು ಉಪಯೋಗಿಸುವ ಈ ಎಟಿಎಂ ಪಿನ್ ನಂಬರ್ ಮಾತ್ರ ಕೇವಲ 4 ಡಿಜಿಟ್ ನಲ್ಲೆ ಇರುತ್ತದೆ. ಆ ಪಿನ್ ನಂಬರ್ ಯಾಕೆ 4 ಡಿಜಿಟ್ ನಲ್ಲಿ ಇರುತ್ತದೆ ಎಂದು ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ? ನಮ್ಮ ಇ-ಮೇಲ್, ಫೇಸ್ಬುಕ್, ಟ್ವಿಟರ್, ಮುಂತಾದ ಜಾಲತಾಣಗಳಿಗೆ 6 ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಗಳನ್ನು ಪಾಸ್ವರ್ಡ್ ಆಗಿ ಉಪಯೋಗಿಸುವ ಸ್ವತಂತ್ರ ನಮಗಿದೆ. ಯಾಕಂದರೆ ಸೆಕ್ಯುರಿಟಿ ಕಾರಣದಿಂದ ಈ ಪಾಸ್ವರ್ಡ್ಸ್, ಪಿನ್ ನಂಬರ್ಗಳನ್ನು ನಮ್ಮ ಖಾತೆಗಳನ್ನು ಭದ್ರಪಡಿಸಿಕೊಳ್ಳಲು ಬಳಸುತ್ತೇವೆ.

ಆ ರೀತಿ ಪ್ರತಿ ನಿತ್ಯ ಅವಸರಕ್ಕೆ ಬೇಕಾದ ಹಣಕ್ಕಾಗಿ ಇನ್ನೆಷ್ಟು ಜಾಗ್ರತೆಯಾಗಿ ಇರಬೇಕು. ಎಟಿಎಂ ಪಿನ್ ನಂಬರ್ 4 ಅಂಕೆಗಳಲ್ಲಿ ಇರಲು ಕಾರಣ ಒಂದು ಇದೆ. 1967ರಿಂದ ಬಳಸುತ್ತಿರುವ ಎಟಿಎಂ ಮೆಸೇಜ್ ಗಳನ್ನು ಸ್ಕಾಟ್ಲೆಂಡ್ ಮೂಲದ ಜಾನ್ ಆಡ್ರಿಯನ್ ಶೆಪರ್ಡ್ ಎಂಬ ವ್ಯಕ್ತಿ ಕಂಡುಹಿಡಿದ. ಈಗ ಪ್ರಪಂಚದಾದ್ಯಂತ ಪ್ರತಿಯೊಂದು ಕಡೆಯೂ ಎಟಿಎಂ ಕೇಂದ್ರಗಳಿವೆ. ಮೊದಲು ಕಂಡುಹಿಡಿದ ಎಟಿಎಂಗಳಿಗಿಂತ ಈಗ ಬಳಸುವ ಸ್ವಲ್ಪ ಅಡ್ವಾನ್ಸ್ಡ್ ಎಟಿಎಂ ಮಿಷಿನ್ ಗಳು ಬಳಕೆಯಲ್ಲಿವೆ. ಜಾನ್ ಆಡ್ರಿಯನ್ ಕಂಡುಹಿಡಿದ ಈ ಮೆಷಿನ್ನಲ್ಲಿ ಪಡೆಯುವ ಗ್ರಾಹಕರ ಖಾತೆಯ ಬಗ್ಗೆ ಇತರರಿಗೆ ತಿಳಿಯದಂತೆ ಇರಲು, ಸೆಕ್ಯೂರಿಟಿಗಾಗಿ ಪಿನ್ ನಂಬರ್ ಇಟ್ಟಿದ್ದನಂತೆ. ಮೊದಲು ಎಟಿಎಂ ಮಿಷನ್ ಗಳಲ್ಲಿ 6 ಅಂಕೆಗಳ ಪಿನ್ ನಂಬರ್ ಇರುವಂತೆ ಆತ ಮಾಡಿದ.

6 ಅಂಕೆಗಳ ಪಿಂಕ್ ನಂಬರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟ ಎಂದು, ಬಹಳಷ್ಟು ಮಂದಿ 6 ಡಿಜಿಟ್ ಗಳ ಸಂಖ್ಯೆ ಜ್ಞಾಪಕ ಇಟ್ಟುಕೊಳ್ಳುವುದಿಲ್ಲ, ಅವರಿಗೆ ಇದು ಕಷ್ಟವಾಗುತ್ತದೆ ಎಂದು ಆತನ ಹೆಂಡತಿ ವಾದಿಸಿದಳಂತೆ. ಆ ಬಳಿಕ ಆಕೆ ನಗುತ್ತಲೇ 4 ಅಂಕೆಗಳ ಪಿನ್ ನಂಬರ್ ಆದರೆ ಬೆಟರ್ ಎಂದು ಸೂಚಿಸಿದಳು. ನಂತರ ತನ್ನ ಹೆಂಡತಿಯ ಸೂಚನೆಯ ಮೇರೆಗೆ 6 ಅಂಕೆಗಳ ಪಿನ್ ಬದಲಾಗಿ 4 ಅಂಕೆಗಳಿಗೆ ಬದಲಾಯಿಸಿದನಂತೆ. ಇದನ್ನು ಕಂಡು ಆಂಡ್ರಿಯನ್ ಹೆಂಡತಿ ತುಂಬಾ ಖುಷಿಪಟ್ಟಳಂತೆ. ಬಹಳಷ್ಟು ಬ್ಯಾಂಕ್ಗಳು 4 ಅಂಕೆಗಳ ಪಿನ್ ನಂಬರ್ ಕೊಡುತ್ತಿವೆ, ಇನ್ನೂ ಕೆಲವು ಬ್ಯಾಂಕ್ಗಳು ಈಗಲೂ 6 ಅಂಕೆಗಳ ಪಿನ್ ನಂಬರ್ ಬಳಕೆ ಮಾಡುತ್ತೇವೆ. ಸಣ್ಣ ಮಾಹಿತಿ, ನಿಮ್ಮ ಎಟಿಎಂ ಪಿನ್ ಯಾರು ಕೇಳಿದರು ಕೊಡಬೇಡಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಶೇರ್ ಮಾಡಿ ಜೊತೆಗೆ ಕಾಮೆಂಟ್ ಸಹ ಮಾಡಿ. ಧನ್ಯವಾದಗಳು