Advertisements

ಹೊಸ ವಿಶ್ವದಾಖಲೆಯನ್ನು ನಿರ್ಮಿಸಿ, ಪುರುಷರ ತಂಡಕ್ಕೆ ಸೆ’ಡ್ಡುಹೊ’ಡೆದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ!

Sports

ನಮಸ್ತೆ ಸ್ನೇಹಿತರೆ, ಕ್ರಿಕೆಟ್ ನಲ್ಲಿ ನಾವು ಪುರುಷರ ತಂಡದ ಹಲವಾರು ದಾಖಲೆಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಪುರುಷರ ತಂಡದ ಕ್ರಿಕೆಟ್ ದಾಖಲೆಯನ್ನು ಸೆ’ಡ್ಡು ಹೊ’ಡೆದಿದೆ. ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳೆಯರ ತಂಡದ ವಿ’ರುದ್ಧ ಗೆಲುವನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ಮಹಿಳೆಯರ ತಂಡವು ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಏಕದಿನ ಪಂದ್ಯಗಳಲ್ಲಿ ಸತತ 22 ಗೆಲುವು ಸಾಧಿಸಸುವ ಮೂಲಕ ರಿಕಿ ಪಾಂಟಿಂಗ್ ಅವರ 2003 ರ ಆಸ್ಟ್ರೇಲಿಯಾದ ಪುರುಷರ ತಂಡದ ದಾಖಲೆಯನ್ನು ಸೆ’ಡ್ಡು ಹೊ’ಡೆದಿದೆ.

Advertisements
Advertisements

ಇದು ಸತತವಾಗಿ ಆಸ್ಟ್ರೇಲಿಯಾ ಮಹಿಳಾ ತಂಡವು ಸಾಧಿಸುತ್ತಿರುವ 22 ನೆ ಗೆಲುವಾಗಿದೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಕೊನೆಯ ಬಾರಿಗೆ ಸೋ’ತದ್ದು 2017 ರ ಅಕ್ಟೋಬರ್‌ ನಲ್ಲಿ ಮಾತ್ರ. ತದ ನಂತರ ಇಲ್ಲಿಯವರೆಗೂ ಒಂದು ಪಂದ್ಯದಲ್ಲೂ ಸಹ ಸೋಲನ್ನು ಆಸ್ಟ್ರೇಲಿಯಾ ತಂಡ ಕಂಡಿಲ್ಲ. 2003 ರಲ್ಲಿ, ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಪುರುಷರ ತಂಡ ಏಕದಿನ ಪಂದ್ಯಗಳಲ್ಲಿ ಸತತ 21 ಪಂದ್ಯಗಳನ್ನು ಗೆಲ್ಲುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತ್ತು. 2018 ರ ಮಾರ್ಚ್‌ನಲ್ಲಿ ತಿಂಗಳಲ್ಲಿ ಆಸ್ಟ್ರೇಲಿಯಾದ ಗೆಲುವು ಆರಂಭವಾಯಿತು.

ಭಾರತದ ವಿ’ರುದ್ಧ ಏಕದಿನ ಸರಣಿಯನ್ನು 3-0 ಅಂತರದಿಂದ ಆಸ್ಟ್ರೇಲಿಯಾ ಗೆದ್ದು ವಿಜೇತರಾಗಿದ್ದಾರೆ. ಅಂದಿನಿಂದ ಪಾಕಿಸ್ತಾನ (3-0), ನ್ಯೂಜಿಲೆಂಡ್ (3-0), ಇಂಗ್ಲೆಂಡ್ (3-0), ವೆಸ್ಟ್ ಇಂಡೀಸ್ (3-0), ಶ್ರೀಲಂಕಾ (3-0), ನ್ಯೂಜಿಲೆಂಡ್ (3-0) ) ವಿ’ರುದ್ಧ ಗೆಲುವು ಸಾಧಿಸುತ್ತ ಬಂದಿದೆ. ಸದ್ಯ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸತತವಾಗಿ 22 ಪಂದ್ಯಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಈ ಅಪರೂಪದ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ವನಿತೆಯರಿಗೆ ವಿಶ್ವದಾದ್ಯಂತ ಅಭಿನಂದನೆಗಳು ಲಭಿಸಿವೆ.