Advertisements

ಕನ್ನಡ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಮಿಂ’ಚಿದ್ದ ಬೇಬಿ ಇಂದಿರಾ ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ ಬಾಲ ನಟಿ ಬೇಬಿ ಇಂದಿರಾ ಅವರ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. 70- 80ರ ದಶಕದಲ್ಲಿ ಕನ್ನಡ ಸಿನಿ ಪರದೆಯ ಮೇಲೆ ನಟಿಸಿದ್ದ ಬೇಬಿ ಇಂದಿರಾ ತುಂಬಾ ಫೇಮಸ್ ಆಗಿದ್ದರು. ಬಾಲ ನಟಿ ಬೇಬಿ ಇಂದಿರಾ ಅವರು ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ನಂತರ ಡಾ. ರಾಜ್​ ಕುಮಾರ್​, ವಿಷ್ಣು ವರ್ಧನ್​ ಹೀಗೆ ಅನೇಕ ಮೇರು ನಟರ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ನಟಿಸಿ ಅಭಿಮಾನಿಗಳನ್ನು ಸೆಳೆದಿದ್ದರು. ಅಷ್ಟೇ ಏಕೆ ತನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ಕಣ್ಣಿನಲ್ಲಿ ನೀರನ್ನು ತರಿಸಿದ್ದ ಉದಾಹರಣೆ ಕೂಡ ಇದೆ. ಪಾತ್ರದ ಒಳಹೊಕ್ಕಿ ಅದಕ್ಕೊಂದು ಜೀ’ವ ತುಂಬುತ್ತಿದ್ದ ಬೇಬಿ ಇಂದಿರಾ ಬಾಲ ನಟಿಯಾಗಿ ಅನೇಕ ಸಿನಿಮಾದಲ್ಲಿ ನಟಿಸಿ ತುಂಬಾ ಫೇಮಸ್ ಆದರು. ಆದರೆ ಈಗ ಬೇಬಿ ಇಂದಿರಾ ಅವರು ಏನು ಮಾಡುತ್ತಿದ್ದಾರೆ.? ನೋಡೋಣ ಬನ್ನಿ.

Advertisements
Advertisements

ಬೇಬಿ ಇಂದಿರಾ ‘ಜ’ನ್ಮ ರ’ಹಸ್ಯ’ ಸಿನಿಮಾದ ಮೂಲಕ ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಡಾ. ರಾಜ್​ಕುಮಾರ್​, ವಿಷ್ಣು ವರ್ಧನ್​ ನಟನೆಯ​ ಈ ಸಿನಿಮಾ ಅಂದಿಗೆ ದೊಡ್ಡ ಹಿ’ಟ್​ ಆಗಿತ್ತು. ಬೇಬಿ ಇಂದಿರಾ ಅವರ ಪಾತ್ರ ಕೂಡ ಭಿನ್ನವಾಗಿ ಮೂಡಿಬಂದಿತ್ತು. ಈ ಸಿನಿಮಾದಿಂದ ಬೇಬಿ ಇಂದಿರಾ ಅವರಿಗೆ ತುಂಬಾ ಅವಕಾಶಗಳು ಹುಡುಕಿಕೊಂಡು ಬಂದವು. ಆನಂತರ ಬೇಬಿ ಇಂದಿರಾ ಪುಟಾಣಿ ಏ’ಜೆಂ’ಟ್​ 123, ಸಿಂಹದಮರಿ ಸೈನ್ಯ, ಮಕ್ಕಳಭಾಗ್ಯ, ರಾಮ ಲಕ್ಷಣ ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದರು. ಎಲ್ಲಾ ಸಿನಿಮಾಗಳಲ್ಲಿಯೂ ಸಹ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಕನ್ನಡ ಸಿನಿಮಾಗಳಲ್ಲಿ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲೂ ಬೇಬಿ ಇಂದಿರಾ ನಟಿಸಿದ್ದಾರೆ. 1984 ರಲ್ಲಿ ಅರ್ಜುನ್​​ ಸರ್ಜಾ ನಟನೆಯ ‘ಮಳೆ ಬಂತು ಮಳೆ’ ಸಿನಿಮಾದಲ್ಲಿ ನಾಯಕಿಯಾಗಿ ಮಿಂ’ಚಿದ್ದರು. 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬೇಬಿ ಇಂದಿರಾ ಬಣ್ಣ ಹಚ್ಚಿದ್ದಾರೆ. ಬೇಬಿ ಇಂದಿರಾ ಅವರು ತಮಿಳು ಸಿನಿಮಾಗಳಲ್ಲಿ ಬಾಲ ನಟನನಾಗಿ ಮಿಂ’ಚಿದ್ದ ಮಾಸ್ಟರ್​​ ಶ್ರೀಧರ್​​ ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಪ್ರಶಾಂತ್​ ಹಾಗೂ ರಕ್ಷಿತ್​​ ಎಂಬ ಗಂಡು ಮಕ್ಕಳು ಜನಿಸಿದ್ದಾರೆ. ಬೇಬಿ ಇಂದಿರಾ ಅವರ ಪತಿ ಮಾಸ್ಟರ್​​ ಶ್ರೀಧರ್​​ 2013ರಲ್ಲಿ ಹೃ’ದಯಾಘಾ’ತದಿಂದ ನಿ’ಧನರಾದರು. ಸದ್ಯ ಬೇಬಿ ಇಂದಿರಾ ಅವರು ತಮ್ಮ ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. ಬೇಬಿ ಇಂದಿರಾ ಅವರ ನಟನೆಯ ಬಗ್ಗೆ ನೀವೇನಂತೀರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.