Advertisements

ರೈಡರ್ ಅನ್ನು ಹಿಂದಿಕ್ಕಿದ ಬಡವ ರಾಸ್ಕಲ್.. ಮೊದಲ ದಿನವೇ ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?

Cinema

ನಟ ಹಾಗೂ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಇಂದು ರಾಜ್ಯದ್ಯಂತ ಗ್ರಾಂಡ್ ಆಗಿ ಬಿಡುಗಡೆಯಾಗಿದೆ. ಹೌದು ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಮೊದಲ ದಿನವೇ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಇನ್ನು ಡಾಲಿ ಧನಂಜಯ್ ಅವರು ಮೊಟ್ಟಮೊದಲ ಬಾರಿಗೆ ನಿರ್ಮಾಣ ಮಾಡಿರುವ ಬಡವ ರಾಸ್ಕಲ್ ಚಿತ್ರ ಕೂಡ ಇಂದು ಅಷ್ಟೇ ಅದ್ದೂರಿಯಾಗಿ ತೆರೆಕಂಡಿದೆ. ಈ ಚಿತ್ರಕ್ಕೆ ಧನಂಜಯ್ ಅವರು ಹಿಂದೆಂದೂ ಮಾಡಿರದ ರೀತಿಯಲ್ಲಿ ಹಲವುದಿನಗಳಿಂದ ವಿಭಿನ್ನವಾಗಿ ಪ್ರಚಾರ ಮಾಡಿದ್ದರು. ಇದೇ ಕಾರಣಕ್ಕಾಗಿ ಈ ಚಿತ್ರ ಇಂದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

[widget id=”custom_html-5″]

Advertisements
Advertisements

ಹಾಗಾದ್ರೆ ನಟ ನಿಖಿಲ್ ಕುಮಾರಸ್ವಾಮಿ ಮತ್ತು ಡಾಲಿ ಧನಂಜಯ್ ಅವರ ಇಬ್ಬರ ಸಿನಿಮಾಗಳು ಯಾವ ರೀತಿ ಅದ್ದೂರಿಯಾಗಿ ಬಿಡುಗಡೆಗೊಂಡಿತು ಹಾಗೆ ಮೊದಲ ದಿನ ರೈಡರ್ ಮತ್ತು ಬಡವ ರಾಸ್ಕಲ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಅಂತ ನೋಡಿ ಹೌದು ನಟ ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಚಿತ್ರ ಇಂದು ರಾಜ್ಯದಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಕೂಡ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅಲ್ಲದೆ ಈ ಚಿತ್ರಕ್ಕೆ ವಿಮರ್ಶಕರು ಕೂಡ ಫುಲ್ ಮಾರ್ಕ್ಸ್ ಅನ್ನು ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಈ ಚಿತ್ರದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದಾರೆ. ಇನ್ನು ಈ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಚಿಕ್ಕಣ್ಣ ಹಾಗೂ ಶಿವರಾಜ್ ಕೆ ಆರ್ ಪೇಟೆ ಮತ್ತು ಮಂಜು ಪಾವಗಡ ಅವರ ಕಾಮಿಡಿ ಜಲಕ್ ಸಿನಿ ರಸಿಕರಿಗೆ ಕಚಗುಳಿ ಇಡುತ್ತೆ.

[widget id=”custom_html-5″]

ಇನ್ನೂ ಬಡವ ರಾಸ್ಕಲ್ ಸಿನಿಮಾ ಕೂಡ ಇಂದು ಅದ್ದೂರಿಯಾಗಿ ಬಿಡುಗಡೆಗೊಂಡಿದ್ದು ಇದು ಕೂಡ ರಾಜ್ಯದಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಲ್ಲದೆ ಎಲ್ಲ ಥಿಯೇಟರ್ ಗಳಲ್ಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇನ್ನು ಈ ಒಂದು ಚಿತ್ರಕ್ಕೂ ಕೂಡ ಎಲ್ಲರೂ ಫುಲ್ ಮಾರ್ಕ್ಸ್ ನ್ನು ಕೊಟ್ಟಿದ್ದು ಕಾಮಿಡಿ ಲವ್ ಮತ್ತು ಫ್ಯಾಮಿಲಿ ಎಲಿಮೆಂಟ್ ಇರುವ ಚಿತ್ರ ಇದಾಗಿದೆ ಅಂತ ಅಭಿಮಾನಿಗಳು ಈ ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಇನ್ನು ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ ರೈಡರ್ ಸಿನಿಮಾ ಮೊದಲ ದಿನವೇ ಬರೋಬ್ಬರಿ ನಾಲ್ಕು ಕೋಟಿ ಕಲೆಕ್ಷನ್ ಮಾಡಿದರೆ ಬಡವ ರಾಸ್ಕಲ್ ಸಿನಿಮಾ ಮೂರರಿಂದ ನಾಲ್ಕು ಕೋಟಿ ಕಲೆಕ್ಷನ್ ಮಾಡಿದೆ ಅಂತ ಗಾಂಧಿನಗರದ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.