Advertisements

ಮನೆ ಬಾಡಿಗೆ ಕಟ್ಟಿಲ್ಲಾ ಅಂತ ವಯಸ್ಸಾದ ವ್ಯಕ್ತಿನಾ ಆಚೆ ತಳ್ಳಿದ ಮನೆ ಮಾಲೀಕ! ಆಮೇಲೆ ನಡೆದಿದ್ದು ನೋಡಿ ಬೆಚ್ಚಿ ಬಿದ್ದ..

Inspiration

ಪ್ರಿಯಾ ಓದುಗರೇ ಈಗಿನಂತೆ ಆಗ ಬಾಡಿಗೆ ಮನೆಗಳಿಗೆ ಅಡ್ವಾನ್ಸ್ ಅನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಪ್ರತಿ ತಿಂಗಳು ಹಣ ಕಟ್ಟಬೇಕಾಗುತ್ತಿತ್ತು. ಹಣವಂತರು, ಶ್ರೀಮಂತರು ಮಾತ್ರ ಮನೆ ಬಾಡಿಗೆಗೆ ಕೊಡುತ್ತಿದ್ದರು. ವಯಸ್ಸಾದವರಿಗೆ ಆಗ ಬಾಡಿಗೆ ಮನೆ ನೀಡುವುದು ವಿರಳವಾಗಿತ್ತು. ಇಲ್ಲೊಬ್ ಮನೆಯ ಮಾಲೀಕ ವಯಸ್ಸಾದ ಅಜ್ಜನನ್ನು ಮನೆ ಬಾಡಿಗೆ ಕೊಡಲಿಲ್ಲವೆಂದು ಆತನನ್ನು ಮಾತು ಆತನ ಇತರೆ ವಸ್ತುಗಳನ್ನು ಆಚೆ ಎಸೆದು ಹೊರಹಾಕುತ್ತಾನೆ. ಆದ್ರೆ ಇದು ಭಾರಿ ಮಟ್ಟದಲ್ಲಿ ಸುದ್ದಿ ಆಗುತ್ತದೆ. ದೊಡ್ಡ ದೊಡ್ಡ ವಿಐಪಿ ಕಾರುಗಳು ಈ ಮನೆಯ ಮುಂದೆ ಬಂದು ನಿಲ್ಲುತ್ತವೆ. ಯಾಕೆ ಅಂತಾ ನೀವು ಅಚ್ಚರಿ ಪಡುತ್ತಿದ್ದೀರಾ? ಹಾಗಾದ್ರೆ ಈ ಲೇಖನವನ್ನು ಪೂರ್ಣವಾಗಿ ಓದಿ.

ವಯಸ್ಸಾದ ಅಜ್ಜನೊಬ್ಬ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ತಿಂಗಳ ಬಾಡಿಗೆಯನ್ನು ಹೇಗೋ ಕಟ್ಟುತ್ತಿದ್ದ. ಆತನ ಮನೆಯಲ್ಲಿ ಒಂದು ಚಾಪೆ, ಅಡಿಗೆ ಮಾಡಿಕೊಳ್ಳಲು ಕೆಲವು ಬಿಳಿ ಪಾತ್ರೆಗಳನ್ನು ಬಿಟ್ಟರೆ ಬೇರೆ ಯಾವ ಐಷಾರಾಮಿ ವಸ್ತುಗಳು ಇರಲಿಲ್ಲ. ಕುಳಿತುಕೊಳ್ಳಲು ಒಂದು ಕುರ್ಚಿ ಸಹ ಇರಲಿಲ್ಲ. ಜೊತೆಗೆ ಆಸರೆಯಾಗಿ ಊರುಗೋಲು ಇತ್ತಷ್ಟೇ. ಅಷ್ಟೊಂದು ಸರಳ ಜೀವನ ನಡೆಸುತ್ತಿದ್ದರು ಆ ವ್ಯಕ್ತಿ. ಆದರೆ ಒಂದು ದಿನ ಮನೆಯ ಮಾಲೀಕ ಬಂದು ಬಾಡಿಗೆ ಹಣ ನೀಡದೆ ಇದ್ದಿದ್ದಕ್ಕೆ ಅಜ್ಜನ ವಸ್ತುಗಳನ್ನು ಮನೆಯಿಂದ ಆಚೆ ಚಲ್ಲಿ, ಆತನನ್ನು ಸಹ ಮನೆಯಿಂದ ಹೊರ ದಬ್ಬುತ್ತಾನೆ. ಈ ಎಲ್ಲ ಘಟನೆಗಳನ್ನು ಪತ್ರಿಕೆಯ ವರದಿಗಾರನೊಬ್ಬ ನೋಡುತ್ತಾ ನಿಂತಿರುತ್ತಾನೆ.


ಕೊನೆಗೆ ಈ ಅಜ್ಜ ಮಾಲೀಕನ ಬಳಿ ಹೋಗಿ ಕೆಲವು ದಿನಗಳ ಸಮಯ ಕೊಡಿ. ನಾನು ನಿಮ್ಮ ಮನೆಯ ಬಾಡಿಗೆಯನ್ನು ನೀಡುತ್ತೇನೆ. ಅಲ್ಲಿಯವರೆಗೂ ಇದೇ ಮನೆಯಲ್ಲಿ ಇರಲು ನನಗೆ ಅವಕಾಶ ಮಾಡಿಕೊಡಿ ಎಂದು ಬೇಡಿಕೊಳ್ಳುತ್ತಾನೆ. ಅಜ್ಜನ ಮಾತನ್ನು ಕೇಳಿಸಿಕೊಂಡ ಮಾಲಿಕ ಆಯಿತು ಎಂದು ಮನೆಯಲ್ಲಿ ಇರಲು ಅವಕಾಶ ಮಾಡಿಕೊಡುತ್ತಾನೆ. ಆಗ ಅಜ್ಜ ಹೊರಗೆ ಎಸೆಯಲಾಗಿದ್ದ ಎಲ್ಲ ವಸ್ತುಗಳನ್ನು ಮತ್ತೆ ಮನೆಯೊಳಗೆ ತೆಗೆದುಕೊಂಡು ಹೋಗಿ ಇಡುತ್ತಾನೆ. ಇದೆಲ್ಲವನ್ನೂ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದದ್ದ ವರದಿಗಾರ. ಹಾಗೆ ಮಾಲೀಕನ ಮತ್ತು ಆ ಮನೆಯ ಕೆಲ ಫೋಟೋ, ವಸ್ತುಗಳನ್ನು ಹೊರಗೆ ಎಸೆದಾಗ ಅದರ ಫೋಟೋಗಳನ್ನು ಸೆರೆಹಿಡಿದಿದ್ದ. ಇದನ್ನು ತನ್ನ ಕಚೇರಿಗೆ ಹೋಗಿ ವರದಿ ಮಾಡಿದಾಗ ಆತನಿಗೆ ಆ ಅಜ್ಜನ ಪರಿಚಯವಿರಲಿಲ್ಲ.

ವರದಿಗಾರನ ಈ ಫೋಟೋ ನೋಡಿದ ಪತ್ರಿಕೆಯ ಸಂಪಾದಕ ಕೂಡಲೇ ಆತನನ್ನು ಕರೆದು ಇದನ್ನು ದೊಡ್ಡ ಸುದ್ದಿಯಾಗಿ ಮಾಡುವಂತೆ ಹೇಳುತ್ತಾನೆ. ವರದಿಗಾರ ಸಂಪಾದಕರು ಹೇಳಿದಂತೆ ಅಜ್ಜನ ಮನಕಲಕುವ ದೃಶ್ಯಗಳ ವರದಿಯನ್ನು ತಯಾರಿಸುತ್ತಾನೆ. ಆದ್ರೆ ಅದು ಮರುದಿನ ಬೆಳಿಗ್ಗೆ ಪ್ರಧಾನಿಯನ್ನು ಮನೆಯಿಂದ ಆಚೆ ಹಾಕಿದ ಮಾಲಿಕ ಎಂದು ಬ್ರೇಕಿಂಗ್ ನ್ಯೂಸ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಇದಾದ ಕೆಲವೇ ಗಂಟೆಗಳಲ್ಲಿ ಅಜ್ಜನಿಗೆ ಬಾಡಿಗೆ ನೀಡಿದ್ದಕ್ಕೆ ಮಾಲೀಕನ ಮನೆಯ ಮುಂದೆ ವಿಐಪಿ ಕಾರುಗಳು ಸಾಲು ಸಾಲಾಗಿ ಬಂದು ನಿಲ್ಲುತ್ತವೆ. ಇದರಿಂದ ಮಾಲೀಕ ಕೆಲಕಾಲ ದಿಗ್ಬ್ರಾಂತನಾಗುತ್ತಾನೆ.
ಹೌದು ಓದುಗರೆ…. ಯಾಕೆಂದರೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಜ್ಜ ಬೇರೆ ಯಾರು ಅಲ್ಲ, ಭಾರತ ದೇಶದ ಮಾಜಿ ಪ್ರಧಾನಮಂತ್ರಿ ಗುಲಜಾರಿಲಾಲ ನಂದ ಆಗಿದ್ದರು.

ಆದರೆ ಆ ಮನೆಮಾಲೀಕರಿಗೆ ಇವರು ಓರ್ವ ಮಾಜಿ ಪ್ರಧಾನಿ ಎಂದು ತಿಳಿಯದೆ ಈ ಅಚಾತುರ್ಯ ನಡೆದು ಹೋಗಿತ್ತು. ಮನೆಯ ಮಾಲೀಕ ಕೂಡಲೇ ಮಾಜಿ ಪ್ರಧಾನಿ ಅವರ ಕಾಲು ಹಿಡಿದುಕೊಂಡು ನನಗೆ ತಿಳಿಯದೆ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಕ್ಷಮೆಯಾಚಿಸಿದ. ನಂತರ ಅಧಿಕಾರಿಗಳು ಈ ಮನೆಯನ್ನು ಬಿಟ್ಟು ಸರ್ಕಾರದಿಂದ ನಿಮಗೆ ನಾವು ಉಚಿತವಾದ ಮನೆಯನ್ನು ನೀಡುತ್ತೇವೆ ಎನ್ನುತ್ತಾರೆ. ಆದರೆ ಮಾಜಿ ಪ್ರಧಾನಿ ನಂದ ಅವರು ನನಗೆ ಸರ್ಕಾರ ನೀಡುವ ಉಚಿತ ಮನೆ ಬೇಡ ಎಂದು ತಿರಸ್ಕರಿಸಿ ಅದೇ ಬಾಡಿಗೆ ಮನೆಯಲ್ಲಿ ವಾಸವಾಗುತ್ತಾರೆ. ನಂತರ ಅವರಿಗೆ ಬರುವ ಮಾಶಾಸನವನ್ನು ಸಹ ತಿರಸ್ಕರಿಸಿದರು. ಆದರೆ ಈವರ ಸ್ನೇಹಿತ ನಿನಗೆ ಈ ಮಾಶಾಸನ ಬಿಟ್ಟರೆ ಬೇರೆ ಯಾವ ಆಧಾರವೂ ಇಲ್ಲ. ಸುಮ್ಮನೆ ಇದನ್ನು ಪಡೆ ಎಂದು ಹೇಳುತ್ತಾರೆ.

ಆಗ ತಿಂಗಳಿಗೆ ಬರುವ ಐದು ನೂರು ರೂಪಾಯಿ ಮಾಶಾಸನವನ್ನು ಮಾತ್ರ ಸರ್ಕಾರದಿಂದ ಪಡೆಯುತ್ತಾರೆ. ಇವರ ಈ ನಿಷ್ಠಾವಂತ ರಾಜಕಾರಣಿಯ ಕೆಲಸಕ್ಕೆ ಮೆಚ್ಚಿದ ಸರ್ಕಾರ 1997ರಲ್ಲಿ “ಭಾರತ ರತ್ನ ” ಪ್ರಶಸ್ತಿ ನೀಡಿ ಗೌರವಿಸಿತು. ಸರ್ಕಾರ ಉಚಿತವಾಗಿ ನೀಡುವ ಸೌಲಭ್ಯಗಳನ್ನು ಅಂದಿನ ರಾಜಕಾರಣಿಗಳು ತಿರಸ್ಕರಿಸಿ, ಸ್ವಾಭಿಮಾನಿಗಳಾಗಿ ಶುದ್ಧ ರಾಜಕಾರಣವನ್ನು ನಡೆಸುತ್ತಿದ್ದರು. ಆದರೆ ಇಂದಿನ ರಾಜಕೀಯ ನಾಯಕರು ಸರ್ಕಾರದಲ್ಲಿರುವ ಉಚಿತ ಸೌಲಭ್ಯಗಳನ್ನು ತಮ್ಮ ಸ್ವಂತಕ್ಕಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಮಾತ್ರ ಬಳಸಿಕೊಂಡು, ನಾಗರಿಕರಿಗೆ ಮೋಸ ಮಾಡುತ್ತಿರುವುದೇ ಹೆಚ್ಚು ಅಲ್ಲವೇ..?