Advertisements

ತನ್ನ ಪಾಡಿಗೆ ಓದಿಕೊಂಡು ಆರಾಮಾಗಿ ಇದ್ದ ಯುವತಿಗೆ ಒತ್ತಾಯ ಮಾಡಿ ಮದುವೆ ಮಾಡ್ತಾರೆ! ಆದ್ರೆ ಮದುವೆ ಆಗಿ ಮೂರೇ ದಿನಕ್ಕೆ ಈಕೆ ಮಾಡಿದ್ದೇನು ಗೊತ್ತೇ? ಅಬ್ಬಬ್ಬಾ ಏನಿದು

Kannada News

ಒಂದು ಕಾಲ ಇತ್ತು, ಆ ಸಮಯದಲ್ಲಿ ಗಂಡು ಮಕ್ಕಳಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಮನೆಯ ಗಂಡು ಮಕ್ಕಳನ್ನು ಮಾತ್ರ ಓದಿಸಿ, ವಿದ್ಯಾವಂತರನ್ನಾಗಿ ಮಾಡಿ ಉದ್ಯೋಗ ಸಿಗುವಂತೆ ಮಾಡುತ್ತಿದ್ದರು. ಆದರೆ ಹೆಣ್ಣುಮಕ್ಕಳು ಮಾತ್ರ ಮನೆಯಲ್ಲಿ ಮುಸುರೆ ತೊಳೆದುಕೊಂಡು, ನಂತರ ಮದುವೆ ಮಾಡಿಕೊಂಡು ಗಂಡ ಮಕ್ಕಳು ಸಂಸಾರ ಅಂತ ನೋಡಿಕೊಂಡಿದ್ದರೆ ಸಾಕು ಅನ್ನುವುದಿತ್ತು.ಆದರೆ ಈಗ ಹಾಗಲ್ಲ, ಪ್ರತಿ ಹೆಣ್ಣು ಮಗು ಕೂಡ ಸ್ವಾವಲಂಬಿಯಾಗಿ ಜೀವನ ನಡೆಸಲು ಬಯಸುತ್ತಾಳೆ, ಚೆನ್ನಾಗಿ ಓದಿ ವಿದ್ಯಾವಂತಳಾಗಿ, ತಕ್ಕ ಉದ್ಯೋಗ ಪಡೆದು ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕು. ಇನ್ನೊಬ್ಬರ ಎದುರು ಕೈ ಚಾಚುವಂತೆ ಆಗಬಾರದು ಎಂದು ಬಯಸುತ್ತಾಳೆ.

Advertisements
Advertisements

ಇದಕ್ಕೆ ಕೆಲ ಪೋಷಕರು ಕೂಡ ಈಗಿನ ಕಾಲದಲ್ಲಿ ಸಹಕಾರ ಕೊಡುತ್ತಿದ್ದಾರೆ. ಆದರೆ ಕೆಲ ಪೋಷಕರು ಮಾತ್ರ ಮಗಳು ಅಲ್ಪ ಸ್ವಲ್ಪ ಓದಿದರೆ ಸಾಕು, ನಂತರ ಒಳ್ಳೆ ಮನೆಗೆ ಆಕೆಯನ್ನು ಮದುವೆ ಮಾಡಿಕೊಟ್ಟರೆ ತಮ್ಮ ಜಬಬ್ದಾರಿ ಮುಗಿಯುತ್ತದೆ, ನಂತರ ಮಗಳ ಜೀವನ ಚೆನ್ನಾಗಿರುತ್ತದೆ ಅನ್ನುವುದನ್ನೇ ನಂಬಿರುತ್ತಾರೆ.ಅದರಂತೆ ಮಗಳ ಕನಸನ್ನು ಚಿಗುರಿ ನಲ್ಲಿಯೇ ಹೊಸಕಿ ಹಾಕುತ್ತಾರೆ. ಇದಕ್ಕೆ ಒಂದು ಉದಾಹರಣೆ ಈ ಒಂದು ಘಟನೆ. ಆ ಪುಟ್ಟ ಹುಡುಗಿಗೆ ತಾನು ಓದಬೇಕು, ಒಳ್ಳೆಯ ಉತ್ತಮ ಹುದ್ದೆ ಪಡೆಯಬೇಕು. ತಾನೊಬ್ಬ ಉತ್ತಮ ಅಧಿಕಾರಿಣಿ ಆಗಬೇಕು ಎಂಬ ಮಹದಾಸೆ ಇರುತ್ತದೆ.

ಆದರೆ ಈಕೆಯ ಈ ಆಸೆಗೆ ತಣ್ಣೀರು ಎರಚಿದ್ದು ಬೇರೆ ಯಾರೂ ಅಲ್ಲ, ಅವಳ ಪೋಷಕರೇ, ತಮ್ಮ ಮಗಳಿಗೆ ಮದುವೆ ಮಾಡಬೇಕೆಂಬ ಆಲೋಚನೆ ಮಾಡಿ, ಒಂದು ಹುಡುಗನನ್ನು ನೋಡಿ ಮದುವೆಗೆ ತಯಾರಿ ನಡೆಸುತ್ತಾರೆ. ಈ ಸಮಯದಲ್ಲಿ ಆ ಹೆಣ್ಣು ಮಗಳು, ಇನ್ನೂ ಮೂರನೇ ವರ್ಷದ ನರ್ಸಿಂಗ್ ಮಾಡುತ್ತಿರುತ್ತಾಳೆ. ಹಾಗಾಗಿ ಅವಳಿಗೆ ಮದುವೆ ಆಗಲು ಸ್ವಲ್ಪವೂ ಇಷ್ಟ ಇರುವುದಿಲ್ಲ. ಆದರೆ ಅಪ್ಪ ಅಮ್ಮ ಕೇಳಬೇಕಲ್ವಾ? ಹಾಗೋ ಹೀಗೋ ಪುಸಲಾಯಿಸಿ, ತಾವು ಹುಡುಕಿದ ಹುಡುಗನ ಜೊತೆ ಮದುವೆ ಮಾಡಿಸಿಯೇ ಬಿಟ್ಟರು. ಹಾಗೋ ತಮ್ಮ ಜವಬ್ದಾರಿ ಮುಗೀತು, ಇನ್ನು ಮಗಳು ತನ್ನ ಗಂಡ ಮನೆಯಲ್ಲಿ ಸುಖವಾಗಿ ಇರುತ್ತಾಳೆ ಎಂದು ನಿಟ್ಟುಸ್ರು ಬಿಟ್ಟಿದ್ದರು.

ಇನ್ನು ಶಾಸ್ತ್ರ ಪ್ರಕಾರ ಮದುವೆಯಾದ ಕೆಲ ದಿನಗಳಲ್ಲಿ ಅಳಿಯ ಹಾಗೂ ಮಗಳು ಮನೆಗೆ ಬಂದಿದ್ದರು. ಈ ಖುಷಿಯಲ್ಲಿ ಅಪ್ಪ ಅಮ್ಮ ಇರುವಾಗ, ಈ ಹೆಣ್ಣು ಮಗಳು ಮಾತ್ರ ಬೇರೆಯೇ ನಿರ್ಧಾರ ಮಾಡಿದ್ದಳು. ಸ್ನಾನಕ್ಕೆಂದು ಹೋಗಿ ಅಲ್ಲಿಯೇ ನೇಣು ಬಿಗಿದು ಸಾವನ್ನಪ್ಪಿದ್ದಳು. ತನ್ನ ಕನಸು ನನಸಾಗದೆ ಕೊರಗಿ ಕೊನೆಗೆ ಈ ಕಠು ನಿರ್ಧಾರವನ್ನು ಅವಳು ತೆಗೆದುಕೊಂಡಿದ್ದಳು. ಪೋಷಕರು ತಮ್ಮ ಆಸೆಯನ್ನಷ್ಟೆ ನೋಡಿದ ಪರಿಣಾಮ ಈಗೆ ಜೀವನ ಅಂದರೆ ಏನು ಎಂದು ತಿಳಿಯುವ ಮುನ್ನವೇ ಕೊನೆಯುಸಿರು ಎಳೆದಿದ್ದಳು. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.