Advertisements

ಅಂದು ಬಿಕ್ಷೆ ಬೇಡಿ ಊಟ ತಿನ್ನುತ್ತಿದ್ದ ಈ ವ್ಯಕ್ತಿ ಇಂದು 30 ಕೋಟಿ ಆಸ್ತಿಯ ಮಾಲಿಕ.! ಆತ ಮಾಡಿದ ಕೆಲಸ ಕೇಳಿದರೆ ಶಾ’ಕ್ ಆಗ್ತೀರಾ.?

Inspiration

ನಮಸ್ತೆ ಸ್ನೇಹಿತರೆ, ಒಂದು ಗುರಿಯನ್ನು ಸಾಧಿಸಲು ಸಂಕಲ್ಪ, ಛಲ, ಇಚ್ಛೆ, ಅಂಕಿತ ಮನೋಭಾವ, ಶ್ರಮ ಇವೆಲ್ಲವೂ ಇದ್ದರೆ ಸಾಕು ಯಾವುದೇ ವ್ಯಕ್ತಿಯಾಗಲಿ, ಎಂತಹುದೇ ಪರಿಸ್ಥಿತಿಯಲ್ಲಿದ್ದರೂ ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾನೆ. ಕಷ್ಟಪಟ್ಟು ದುಡಿದು ಉನ್ನತ ಸ್ಥಾನ ಗಳಿಸಿದ ಅನೇಕರನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ನಾವು ತಿಳಿಸಲು ಹೊರಟಿರುವ ವ್ಯಕ್ತಿಯು ಸಹ ಅಂತವರೇ. ಅವರೇ ರೇಣುಕಾ ಆರಾಧ್ಯ, ಬಡ ಕುಟುಂಬದಲ್ಲಿ ಜನಿಸಿದ ಇವರು ತಿನ್ನುವುದಕ್ಕೆ ತಿಂಡಿಯೂ ಇಲ್ಲದೆ ಬಾಧೆಯನ್ನು ಅನುಭವಿಸಿದ್ದವರು. ತಂದೆ ಸ್ಥಳಿಯ ದೇವಸ್ಥಾನವೊಂದರಲ್ಲಿ ಅರ್ಚಕರಾಗಿದ್ದರು. ಅಲ್ಲಿ ಬರುವ ಭಕ್ತರು ಕೊಡುತ್ತಿದ್ದ ಕಾಣಿಕೆಯು ಅಷ್ಟಕಷ್ಟೇ ಇತ್ತು. ಇದರಿಂದಾಗಿ ರೇಣುಕ ಆರಾಧ್ಯ ತಂದೆ ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ರೇಣುಕ ಆರಾಧ್ಯಗೆ ಒಬ್ಬ ಅಣ್ಣ, ಒಬ್ಬಳು ತಂಗಿ ಇದ್ದಾರೆ. ಒಮ್ಮೊಮ್ಮೆ ರೇಣುಕ ಸಹ ತಂದೆಯೊಡನೆ ಬಿಕ್ಷೆ ಬೇಡಲು ಹೋಗುತ್ತಿದ್ದರು. ಆದರೂ ಸಹ ರೇಣುಕ ಮಾತ್ರ ಓದುವುದನ್ನು ನಿಲ್ಲಿಸಲಿಲ್ಲ. ಮುಂದೆ ಏನಾಯಿತು ನೋಡಿ.

Advertisements
Advertisements

ಹೀಗೆ ರೇಣುಕಾ ಆರಾಧ್ಯ, 10 ನೇ ತರಗತಿಗೆ ಬರುವಷ್ಟರಲ್ಲಿ ಕುಟುಂಬದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹೊಟ್ಟೆಗೆ ಸರಿಯಾಗಿ ತಿನ್ನಲು ಅನ್ನವೂ ಸಹ ಸಿಗುತ್ತಿರಲಿಲ್ಲ. ಇದರಿಂದಾಗಿ ತನ್ನ ವಿದ್ಯಾಭ್ಯಾಸವು ಸಹ ಮುಂದುವರಿಸಲು ಸಾಧ್ಯವಾಗಲಿಲ್ಲ, ನಂತರ ಕುಟುಂಬದ ಹೊರೆಯನ್ನು ತಾನೇ ಹೊರಲು ಪ್ರಾರಂಭ ಮಾಡಿದ. ಹೀಗೆ ರೇಣುಕ ಆರಾಧ್ಯ ಕುಟುಂಬ ಭಾರವನ್ನು ಹೊರುತ್ತಾ ಹಲವು ಕಂಪೆನಿಗಳಲ್ಲಿ ಕೆಲಸಮಾಡಿದ. ಬರುವ ಹಣ ಯಾವುದಕ್ಕೂ ಸಾಲದಾದಾಗ ಡ್ರೈವರ್ ಕೆಲಸ ಮಾಡಲು ಪ್ರಾರಂಭಿಸಿದ. ಕೆಲವು ವರ್ಷಗಳು ಒಂದು ಟ್ಯಾಕ್ಸೀ ಕಂಪೆನಿಯಲ್ಲಿ ಕೆಲಸಮಾಡಿದ. ಅದೇ ಸಮಯದಲ್ಲಿ ಮದುವೆ ಮಾಡಿಕೊಂಡ. ದಂಪತಿಗಳಿಬ್ಬರೂ ದುಡಿಯಲು ಪ್ರಾರಂಭಿಸಿದರು.

ಮುಂದೆ ಟ್ಯಾಕ್ಸೀ ಡ್ರೈವರ್ ಕೆಲಸದ ಸಂಪಾದನೆಗೆ ಹೆಂಡತಿಯ ಸಂಪಾದನೆಯನ್ನೂ ಸೇರಿಸಿ ‘ಪ್ರವಾಸೀ ಕ್ಯಾಬ್ಸ್’ ಎಂಬ ಹೆಸರಿನ ಸ್ವಂತ ಟ್ರಾವೆಲ್ ಕಂಪೆನಿಯನ್ನು ಪ್ರಾರಂಭಿಸಿದರು. ಅದು ಹಾಗೇ ಅಭಿವೃದ್ದಿ ಹೊಂದುತ್ತಾ ಹೋಯ್ತು. ಮೊದಲಿಗೆ 3 ಕಾರುಗಳು ಮಾತ್ರ ‘ಕ್ಯಾಬ್’ ಗಳಾಗಿದ್ದುವು. ಆದರೆ ಈಗ ಅವುಗಳ ಸಂಖ್ಯೆ 500 ಆಗಿದೆ. ಇಷ್ಟಲ್ಲದೇ ಕೆಲವು ಕಂಪೆನಿಗಳಿಗೆ, ಶಾಲಾ ಕಾಲೇಜುಗಳಿಗೆ ತಿಂಗಳ ಬಾಡಿಗೆ ಆಧಾರದಲ್ಲಿ ಬಸ್ಸುಗಳನ್ನು ಓಡಿಸತೊಡಗಿದರು. ಹೀಗಾಗಿ ಈಗ ಅವರ ಟರ್ನೋವರ್ ಸರಿಸುಮಾರು 30 ಕೋಟಿಗಳಾಗಿದೆ.

ಇಷ್ಟೆಲ್ಲಾ ಸಾಧನೆ ಮಾಡಿದರೂ ಇಂದಿಗೂ ಸಹ ಆರಾಧ್ಯ ತನ್ನ ಮೊದಲಿನ ವೃತ್ತಿಯಾದ ಡ್ರೈವರ್ ವೃತ್ತಿಯನ್ನೇ ಮಾಡುತ್ತಿದ್ದಾರೆ. ತನ್ನ ಹಾಗೆ ಉದ್ಯೋಗ ಮಾಡಿ ಜೀವನ ನಡೆಸಲು ಬಯಸುವ ಯುವತಿ,ಯುವಕರಿಗೆ ‘ಡ್ರೈವರ್ ಕಮ್ ಓನರ್’ ಯೋಜನೆಯಲ್ಲಿ, 3 ವರ್ಷಗಳಲ್ಲಿ ಕ್ಯಾಬ್ ಸ್ವಂತವಾಗುವ ರೀತಿ ರೂ.50 ಸಾವಿರ ಠೇವಣಿಯೊಂದಿಗೆ ಕಾರುಗಳನ್ನು ಕೊಡುತ್ತಾ, ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈಗ ರೇಣುಕ ಆರಾಧ್ಯ ವಯಸ್ಸು 50 ವರ್ಷ,ಆದರೂ ತನ್ನ ವ್ಯಾಪಾರವನ್ನು ವೃದ್ದಿಮಾಡಿ ರೂ.100 ಕೋಟಿಗಳ ವ್ಯವಹಾರ ಮಾಡಿ ಇನ್ನೂ ಎಷ್ಟೋ ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುತ್ತೇನೆ ಎನ್ನುತ್ತಾರೆ. ರೇಣುಕಾ ಆರಾಧ್ಯ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ..