Advertisements

ಬಿಗ್ ಬಾಸ್​ ನಿಂದ ಹೊರ ಬಂದ ರಘು ಗೌಡ ಗತಿ ನೋಡಿದರೆ, ಅಯ್ಯೋ ಪಾಪ ಅಂತೀರಾ.! ಅಸಲಿಗೆ ಏನಾಯ್ತು.?

Kannada News

ವೈಷ್ಣವಿ ಜತೆ ತುಂಬಾ ಹತ್ತಿರವಾಗಿ ಇರೋದಕ್ಕೆ ರಘುಗೆ ಅವರ ಹೆಂಡತಿ ಮನೆಗೆ ಹೋದ ಮೇಲೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಬಿಗ್ ಬಾಸ್ ಮನೆ ಮಂದಿ ಅಭಿಪ್ರಾಯಪಟ್ಟಿದ್ದರು. ಇನ್ನು ಕೆಲವರು, ರಘು ಅವರನ್ನು ಹೆಂಡತಿ ಮನೆ ಒಳಗೇ ಯಾವುದೇ ಕಾರಣಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು. ಆದರೆ, ಅದೃಷ್ಟವಶಾತ್​ ಆರೀತಿ ಏನು ಆಗಿಲ್ಲ ಎಂದು ಕಲರ್ಸ್​ ಕನ್ನಡ ವಾಹಿನಿ ಲೈವ್​ನಲ್ಲಿ ರಘು ಗೌಡ ಹೇಳಿದ್ದರು. ಇದಾದ ಬಳಿಕ ಮರುದಿನವೇ ರಘು ಮುಖದ ಶೇಪ್​ ಬದಲಾಗಿದೆ! ರಘು ಗೌಡ ಹೊಸ ಫೋಟೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಘು ಮುಖಕ್ಕೆ ಒಳ್ಳೆ ಏಟುಗಳು ಬಿದ್ದಿವೆ. ರಘು ಅವರ ಹೆಂಡತಿ ಕೈನಲ್ಲಿ ಸೌಟು ಹಾಗೂ ಲಟ್ಟಣಿಗೆ ಹಿಡಿದು ನಿಂತಿದ್ದಾರೆ. ಇದಕ್ಕೆ ರಘು, ನಾನು ಸೇಫ್​ ಆಗಿದ್ದೇನೆ. ಅವಳು ಎಲ್ಲವನ್ನೂ ಸ್ಪೋರ್ಟಿವ್​ ಆಗಿ ತೆಗೆದುಕೊಂಡಿದ್ದಾಳೆ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ.

Advertisements
Advertisements

ವೈಷ್ಣವಿ ಜತೆ ತುಂಬಾ ಹತ್ತಿರವಾಗಿ ಇರೋದಕ್ಕೆ ರಘುಗೆ ಅವರ ಹೆಂಡತಿ ಮನೆಗೆ ಹೋದ ಮೇಲೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಬಿಗ್ ಬಾಸ್ ಮನೆ ಮಂದಿ ಅಭಿಪ್ರಾಯಪಟ್ಟಿದ್ದರು. ಇನ್ನು ಕೆಲವರು, ರಘು ಅವರನ್ನು ಹೆಂಡತಿ ಮನೆ ಒಳಗೇ ಯಾವುದೇ ಕಾರಣಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು. ಆದರೆ, ಅದೃಷ್ಟವಶಾತ್​ ಆರೀತಿ ಏನು ಆಗಿಲ್ಲ ಎಂದು ಕಲರ್ಸ್​ ಕನ್ನಡ ವಾಹಿನಿ ಲೈವ್​ನಲ್ಲಿ ರಘು ಗೌಡ ಹೇಳಿದ್ದರು. ಇದಾದ ಬಳಿಕ ಮರುದಿನವೇ ರಘು ಮುಖದ ಶೇಪ್​ ಬದಲಾಗಿದೆ! ರಘು ಗೌಡ ಹೊಸ ಫೋಟೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ರಘು ಮುಖಕ್ಕೆ ಒಳ್ಳೆ ಏಟುಗಳು ಬಿದ್ದಿವೆ. ರಘು ಅವರ ಹೆಂಡತಿ ಕೈನಲ್ಲಿ ಸೌಟು ಹಾಗೂ ಲಟ್ಟಣಿಗೆ ಹಿಡಿದು ನಿಂತಿದ್ದಾರೆ. ಇದಕ್ಕೆ ರಘು, ನಾನು ಸೇಫ್​ ಆಗಿದ್ದೇನೆ. ಅವಳು ಎಲ್ಲವನ್ನೂ ಸ್ಪೋರ್ಟಿವ್​ ಆಗಿ ತೆಗೆದುಕೊಂಡಿದ್ದಾಳೆ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಇದನ್ನು ನೋಡಿ ಸಾಕಷ್ಟು ಜನರು ಕಾಮೆಂಟ್​ ಮಾಡಿದ್ದಾರೆ. ಬಿಗ್​ ಬಾಸ್​ ಕನ್ನಡ ಸಂಚಿಕೆ 7ರ ವಿನ್ನರ್ ಶೈನ್​ ಶೆಟ್ಟಿ ಕೂಡ ಇದಕ್ಕೆ ಕಾಮೆಂಟ್ ಮಾಡಿದ್ದಾರೆ, ‘ಇದೇ ರೀತಿ ಗಂಡ-ಹೆಂಡತಿ ಸ್ಪೋರ್ಟಿವ್​ ಆಗಿರಿ’ ಎಂದು ನಕ್ಕಿದ್ದಾರೆ. ಇದೇ ರೀತಿ ನಟಿ ಬಿಗ್ ಬೂಸ್ 8ರ ಸ್ಪರ್ಧೆ ನಿಧಿ ಸುಬ್ಬಯ್ಯ ಅವರು ಕೂಡ ಕಾಮೆಂಟ್ ಮಾಡಿದ್ದಾರೆ. ‘ವಿದ್ಯಾ ಸ್ಪೋರ್ಟಿವ್​ ಆಗೇ ತಗೊಂಡಿದಾರೆ’ ಅಂತ ನಕ್ಕಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಕ್ಯಾಪ್ಟನ್​ ಆಗಿದ್ದ ವೇಳೆ ರಘು ಪತ್ನಿ ಅವರ ವಾಯ್ಸ್ ಸಂದೇಶ ಒಂದು ಬಂದಿತ್ತು, ‘ಹಾಯ್ ರಘು ಹೇಗಿದ್ದೀಯಾ? ತುಂಬಾ ಚೆನ್ನಾಗಿ ಆಡ್ತಾ ಇದೀಯಾ. ಇದೇ ರೀತಿ ಆಡು. ಕ್ಯಾಪ್ಟನ್ಸಿಯನ್ನು ಉತ್ತಮವಾಗಿ ರೀತಿಯಲ್ಲಿ ನಿಭಾಯಿಸು. ಕಿಚ್ಚನ ಚಪ್ಪಾಳೆ ಬಂದಿದ್ದು ತುಂಬಾ ಖುಷಿ ಆಯ್ತು. ನಿನ್ನ ಜತೆ ಜಗಳ ಆಡೋದನ್ನು ನಾನು ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ನಡೆಯುವುದನ್ನು ನಾನು ತುಂಬಾ ಸ್ಪೋರ್ಟೀವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ಮಜಾ ಮಾಡು. ಹಾಯಾಗಿರು. ಬೇರೆಯವರನ್ನು ನಗಿಸು’ ಎಂದು ರಘುಗೆ ಹೇಳಿದ್ದರು. ಇದನ್ನು ರಘು ಕಾಲೆಳೆಯಲು ಬಿಗ್ ಬಾಸ್ ಮನೆ ಮಂದಿ ಬಳಸಿಕೊಂಡಿದ್ದರು.