Advertisements

ಬಿಗ್ ಬಾಸ್ ಸ್ಪರ್ಧಿ ವಿಶ್ವನಾಥ್ ಹಾವೇರಿ ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು? ಅವರ ಆಸ್ತಿ ಎಷ್ಟು ಗೊತ್ತಾ? ನೀವೇ ನೋಡಿ.

Entertainment

ನಮಸ್ತೆ ಸ್ನೇಹಿತರೆ, ಈ ಬಾರಿ ಬಿಗ್ ಬಾಸ್ ಮನೆಗೆ ಬಂದ ವಿಶ್ವನಾಥ್ ಹಾವೇರಿ ಅತ್ಯಂತ ಕಿರಿಯ ಸ್ಪರ್ಧಿ ಎಂದು ಹೆಸರಾದವರು. ಹೌದು ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ವಿಶ್ವನಾಥ್ ಅತ್ಯಂತ ಕಿರಿಯ ವ್ಯಕ್ತಿ. ಹಾಡು ಕರ್ನಾಟಕ ಎಂಬ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದವರು ವಿಶ್ವನಾಥ್. ಇನ್ನು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಆಯ್ಕೆಯಾದ ವಿಶ್ವನಾಥ್ ಅವರು ಇದೀಗ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಹಾಡುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ, ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನಗಳನ್ನು ತೋರುತ್ತಾ, ಎಲ್ಲರೊಂದಿಗೆ ಹೊಂದಾಣಿಕೆಯಿಂದ ಇದ್ದರು. ಜಗಳವಾಡದೆ ಎಲ್ಲರ ಜೊತೆ ಚೆನ್ನಾಗಿ ಬೆರೆತು ಹೋಗಿದ್ದರು. ಇನ್ನು ವಿಶ್ವನಾಥ್ ಅವರ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ಅಷ್ಟೊಂದು ತಿಳಿದಿಲ್ಲ. ಹಾಗಾದರೆ ವಿಶ್ವನಾಥ್ ಅವರ ವೈಯಕ್ತಿಕ ಜೀವನ ಹೇಗಿದೆ, ಅವರ ಮನೆಯಲ್ಲಿ ಯಾರು ಯಾರು ಇದ್ದಾರೆ? ಏನು ಮಾಡುತ್ತಾರೆ? ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

Advertisements
Advertisements

ಎಲ್ಲರೂ ಇವರನ್ನು ವಿಶ್ವ ಎಂದು ಪ್ರೀತಿಯಿಂದ ಕರೆಯುತ್ತಾರೆ. ಹಾಡುಗಾರನಾಗಿ ಪರಿಚಯವಾದ ವಿಶ್ವನಾಥ್, ಸಂಗೀತ ಸಂಯೋಜಕ ಹಾಗೂ ಗಿಟಾರಿಸ್ಟ್. ಇವರು 2017ರಲ್ಲಿ ಕನ್ನಡದ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ 2020 ರಲ್ಲಿ ಹಾಡು ಕರ್ನಾಟಕ ಎಂಬ ಸಂಗೀತ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದರು. ವಿಶ್ವನಾಥ್ ಅವರ ಹುಟ್ಟೂರು ಧಾರವಾಡ. ವಿಶ್ವನಾಥ್ ಅವರ ವಯಸ್ಸು ಈಗ 20 ವರ್ಷ. ಇವರು ಹುಬ್ಬಳ್ಳಿಯಲ್ಲಿ ಪಿಯುಸಿ ಮುಗಿಸಿದ್ದಾರೆ. ಇವರ ತಂದೆ ರವೀಂದ್ರ ಹಾವೇರಿ ಹಾಗೂ ತಾಯಿ ವಸುಂಧರಾ ಹಾವೇರಿ.

ಇನ್ನು ರವೀಂದ್ರ ಹಾಗೂ ವಸುಂದರ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಒಬ್ಬರು ವಿಶ್ವನಾಥ್ ಹಾವೇರಿ ಹಾಗೂ ಅವರ ತಮ್ಮ ವಿಖ್ಯಾತ್ ಹಾವೇರಿ. ವಿಶ್ವನಾಥ್ ಅವರ ಇಷ್ಟವಾದ ಸ್ಥಳ ಗೋವಾ. ಅವರಿಗೆ ಇಷ್ಟವಾದ ನಟ ಸುದೀಪ್ ಹಾಗೂ ಯಶ್. ಇನ್ನು ಇವರ ಹವ್ಯಾಸಗಳು ಹಾಡು ಹಾಡುವುದು ಹಾಗೂ ಸ್ಲೀ-ಪಿಂಗ್. ಬಿಗ್ ಬಾಸ್ ಮನೆಯಲ್ಲಿ ಇವರಿಗೆ ಒಂದು ವಾರಕ್ಕೆ 30 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿದೆ. ಇವರ ಒಟ್ಟು ಆಸ್ತಿ ಮೌಲ್ಯ ಐದರಿಂದ ಹತ್ತು ಲಕ್ಷ ರೂಪಾಯಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 17 ಹಾಗೂ ಹಾಡು ಕರ್ನಾಟಕ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ವಿಶ್ವನಾಥ್ ಅವರು ಚಿಕ್ಕವಯಸ್ಸಿನಲ್ಲಿಯೇ ಹಿಂದುಸ್ತಾನಿ ಸಂಗೀತ ಕಲಿಯಲು ಪ್ರಾರಂಭ ಮಾಡಿದ್ದಾರೆ. ವಿಶ್ವನಾಥ್ ಅವರಿಗೆ ಸಂಗೀತ ಕ್ಷೇತ್ರಕ್ಕೆ ಬರಲು ಸ್ಫೂರ್ತಿ ನೀಡಿದ್ದು ಅವರ ಅಜ್ಜಿ. ಕೇವಲ ಹಾಡುಗಳನ್ನು ಹಾಡುವುದು ಮಾತ್ರ ಅಲ್ಲದೆ ಹಾಡುಗಳನ್ನು ಬರೆದು ಸಂಗೀತ ಸಂಯೋಜನೆಯನ್ನು ತಾವೇ ಮಾಡುತ್ತಾರೆ. ಇನ್ನು ವಿಶ್ವನಾಥ್ ಅವರ ಸ್ವಂತ ಬ್ಯಾಂಡ್ ಇದ್ದು, ಹಿಂದೂಸ್ತಾನಿ ಹಾಗೂ ವೆಸ್ಟರ್ನ್ ಹಾಡುಗಳನ್ನು ಹಾಡುತ್ತಾರೆ. ಹೀಗೆ ಸಂಗೀತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಶ್ವನಾಥ್ ಅವರು ಬಿಗ್ ಬಾಸ್ ಮನೆಯ ಮೂಲಕ ಮತ್ತಷ್ಟು ಹೆಸರು ಗಳಿಸಿದ್ದಾರೆ. ಇದೇ ರೀತಿ ಯಶಸ್ಸಿನೊಂದಿಗೆ ಸಾಗಲಿ ಎಂದು ಆಶಿಸೋಣ.