ಹೊರಗಡೆ ಇಂದ ಅರಮನೆ ಒಳಗಡೆ ಬಂದರೆ ಸೆರೆಮನೆ. ತೊಂಭತ್ತೆಂಟು ದಿನಾ ಜೀವಂತ ಇದ್ದರೆ ಅವರಿಗೇ ಹಾಫ್ ಕೋಟ್ ರೂಪಾಯ್. ಅದೇನೋ ಗೊತ್ತಿಲ್ಲ ಈ ಹಾಡಲ್ಲಿ ಒಂದ್ ಪವರ್ ಇದೆ. ಬಿಗ್ ಬಾಸ್ ಶೋ ಅಲ್ಲಿ ಒಂಥರಾ ಕಿಕ್ ಇದೆ. ಎನಿವೇ ಬಿಗ್ ಬಾಸ್ ಸೀಸನ್ 8 ಮುಗಿದಿದೆ. ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮಂಜು ಗೆಲುವಿನ ಬಗ್ಗೆ ಅನೇಕರು, ಅನೇಕ ರೀತಿಯಲ್ಲಿ ವಿವರಣೆ ಕೊಡುತ್ತಿದ್ದಾರೆ. ಮಂಜು ಗೆಲುವಿನ ಬಗ್ಗೆ ನಾನು ವಿವರಿಸೋದಾದರೆ, ನಿನ್ನೆ ಗೆದ್ದಿದ್ದು ಮಂಜು ಮಾತ್ರ ಅಲ್ಲ. ಮಂಜು ಹೆಸರಿನಲ್ಲಿ ಗೆದ್ದಿದ್ದು ಮುಗ್ಧತೆ, ಯೋಗ್ಯತೆ, ಪ್ರತಿಭೆ, ಒಳ್ಳೆತನ ಜೊತೆಗೆ ಮೋಸ್ಟ್ ಇಂಪಾರ್ಟೆಂಟ್ಲಿ ಸ್ನೇಹ ಮತ್ತು ಪ್ರೀತಿ…

ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.ಅರವಿಂದ್ ಕೆಪಿ ಮತ್ತು ಮಂಜು ಪಾವಗಡ ನಡುವೆ ಪೈಪೋಟಿ ಇತ್ತು. ಆದರೆ ಕೊನೆಗೆ ಮಂಜು ಪಾವಗಡ ವಿನ್ನರ್ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಹೀಗಾಗಿ ಅರವಿಂದ್ ಕೆಪಿ ರನ್ನರ್ ಅಪ್ ಆಗಿದ್ದಾರೆ.

ಇಂದಿನ ಎಪಿಸೋಡ್ನಲ್ಲಿ ಬಹುತೇಕ ಎಲ್ಲ ಸ್ಪರ್ಧಿಗಳೂ ಮಂಜು ಪಾವಗಡ ಅವರೇ ಗೆಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರ ಜೊತೆಗೆ ಕರ್ನಾಟಕ ಮಾತ್ರವಲ್ಲದೆ ಭಾರತದ ಬೇರೆ ಬೇರೆ ಮೂಲೆಗಳಿಂದಲೂ 45 ಲಕ್ಷಕ್ಕೂ ಹೆಚ್ಚು ಜನರು ಮಂಜು ಪಾವಗಡ ಅವರಿಗೆ ಮತ ಹಾಕಿ ಬಿಗ್ ಬಾಸ್ ಕನ್ನಡ 8ನೇ ಸೀಸನ್ ಗೆಲ್ಲಿಸಿದ್ದಾರೆ. ಮಂಜು ಪಾವಗಡ ಅವರಿಗೆ 53 ಲಕ್ಷ ರೂ ಹಾಗೂ ಬಿಗ್ ಬಾಸ್ ಟ್ರೋಫಿ ಸಿಕ್ಕಿದೆ. ಹಾಗೇ, ರನ್ನರ್ ಅಪ್ ಆಗಿರುವ ಅವರಿಂದ್ ಕೆಪಿ ಅವರಿಗೆ 11 ಲಕ್ಷ ರೂ. ಸಿಕ್ಕಿದೆ. ಅರವಿಂದ್ ಅವರಿಗೆ ಕಿಚ್ಚ ಸುದೀಪ್ ವೇದಿಕೆಯಲ್ಲಿ ತಮ್ಮ ಜಾಕೆಟ್ ಬಿಚ್ಚಿ ಕೊಟ್ಟಿದ್ದಾರೆ. ಅದೇ ರೀತಿ ಮಂಜು ಪಾವಗಡ ನನ್ನ ಈ ಗೆಲುವಿಗೆ ಅರವಿಂದ್ ಸ್ಪೂರ್ತಿ ಎಂದು ಕೃತಜ್ಞತೆಗಳನ್ನು ತಿಳಿಸಿದ್ದಾರೆ.