Advertisements

5 ಲಕ್ಷ ಹಣವಿದ್ದ ಬ್ಯಾಗ್ ಬಸ್ ನಲ್ಲಿ ಸಿಕ್ಕಾಗ ಬಸ್ ಡ್ರೈವರ್ ಮಾಡಿದ್ದೇನು ನೋಡಿದ್ರೆ ಶಾಕ್ ಆಗ್ತೀರಾ!!

Kannada News

ಪ್ರಿಯ ಗೆಳೆಯರೆ ಮುಸರೆ ಕೈಯಲ್ಲಿ ಕಾಗೆ ಕೂಡ ಒಡಿಸಲ್ಲ ಎಂಬ ಮಾತ್ತನ್ನು ಕೇಳೆ ಇದ್ದಿರಾ. ಜಗತ್ತು ನಿಂತಿರುವುದು ಹಣದ ಮೇಲೆ. ಹಣ ಎಂದರೆ ಹೆಣವು ಬಾಯಿ ಬಿಡುತ್ತದೆ. ಹೌದು ಮನುಷ್ಯನಿಗೆ ಮಾನವಿಯತೆಗಿಂತ ಹಣದ ದುರಾಸೆ ಮೋಹ ಹೆಚ್ಚಾಗಿದೆ.ಅದ್ದರಿಂದ ಅವನು ಮತ್ತೊಬ್ಬರಿಗೆ ಮಾಡುವ ಸಹಾಯದಲ್ಲಿಯೂ ತನ್ನ ಲಾಭವನ್ನು ಕಾಣುತ್ತಾನೆ. ಇಂತ ಜನರ ಮಧ್ಯಯೂ ಕೆಲವರು ಗುಣವಂತರಾಗಿರುತ್ತಾರೆ. ಹೌದು ಸದಾ ತಮ್ಮ ಒಳ್ಳೆಯ ನಡೆತೆಯಿಂದ ಜನರ ಮೆಚ್ಚುಗೆಗೆ ಪಾತ್ರ ರಾಗುತ್ತಾರೆ. ಹೌದು ಅಂತಹದ್ದೆ ಪ್ರಾಮಾಣಿಕತೆಯನ್ನು‌ ಮೆರೆದ ಡ್ರೈವರ್ ಒಬ್ಬರ ಕಥೆ ಇಲ್ಲಿದೆ. ಯಾರಿ ಆ ಡ್ರೈವರ್, ಆ ಘಟನೆಯಾದ್ರು ಏನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.

ಆಕೆ ತಿರುವನ್ನ‌ಮಲೈನ ನಿವಾಸಿ ಶ್ವೇತಾ. ಈ ಮಹಿಳೆ ಬೆಳಗ್ಗೆ ಎಂಟರ ಸುಮಾರಿಗೆ ಸರ್ಕಾರಿ‌ ಡಿಲೆಕ್ಸ್ ಬಸ್ ಹತ್ತಿ ತಿರುವನ್ನ ಮಲೈಯಿಂದ ಚನ್ನೈಗೆ ಪ್ರಯಾಣ ಬೆಳೆಸಿದ್ದರು. ಈ ಬಸ್ಸನ್ನು ಶಿವಕುಮಾರ ಎಂಬ ಡ್ರೈವರ ಚಲಾಯಿಸುತ್ತಿದ್ದರು. ಮಧ್ಯಾಹ್ನ ‌12 ಗಂಟೆಯ ಸುಮಾರಿಗೆ ಬಸ್ ಚನ್ನೈ ಬಸ್ ನಿಲ್ದಾಣವನ್ನು ತಲುಪಿತ್ತು. ಬಸ್ಸ್ ನಿಂದ ಪ್ರಯಾಣಿಕರೆಲ್ಲ ಕೆಳಗಿಳಿದ ಮೇಲೆ‌ ಬಸ್ಸ್ ಮತ್ತೆ ವಾಪಾಸ ತಿರುವನಮಲೈಗೆ ಹೋಗಬೇಕಾಗಿರುತ್ತದೆ. ಬಸ್ಸನ್ನು ನಿಲ್ಲಿಸಿ‌ ಡ್ರೈವರ್ ಸ್ವಲ್ಪ ವಿಶ್ರಾಂತಿ ಪಡೆದು ಅನಂತರ ಟೀ ಕುಡಿಯಲು ಕೆಳಗಿಳಿದು ಹೋದರು. ಸ್ವಲ್ಪ‌ ಸಮಯದ ನಂತರ ಮತ್ತೆ ಬಸ್ಸ್ ಹತ್ತಿ ಇನ್ನೆನ್ನು ಬಸ್ಸ್ ನಿಲ್ದಾಣದಿಂದ ಬೀಡಬೇಕು ಎನ್ನುವಷ್ಟರಲ್ಲಿ ಡ್ರೈವರ್ ಶಿವಕುಮಾರ್ ಕಣ್ಣು ಬಿದ್ದದ್ದು ಒಂದು ಒಂಟಿ ಬ್ಯಾನ್ ಮೇಲೆ…

ಯಾರೊ‌ ಮರೆತು ಬ್ಯಾಗ್ ನಾ ಇಲ್ಲೆ ಬಿಟ್ಟು ಹೋಗಿದ್ದಾರೆ ಎಂದು ತಿಳಿದ ಡ್ರೈವರ್ ಬ್ಯಾಗ್ ನಾ ಒಪನ್ ಮಾಡಿದ್ದೆ ತಡ ಒಂದು ಕ್ಷಣ ದಂಗಾಗಿ ಹೋಗ್ತಾರೆ. ಹೌದು ಅವರಿಗೆ ಸಿಕ್ಕ ಆ ಬ್ಯಾಗ್ ನಲ್ಲಿ 250 ಗ್ರಾಮ ಚಿನ್ನದ ಆಭರಣ, ಐದು ಲಕ್ಷ ಹಣ ಹಾಗೂ ಒಂದು ಮೊಬೈಲ್ ಫೋನ್ ಸಿಕ್ಕಿತ್ತು.‌ ಇದನ್ನೆಲ್ಲ‌ ನೋಡಿ ಗಾಬರಿಯಾದ ಡ್ರೈವರ್ ಅವರಿಗೆ ಅದನ್ನೆಲ್ಲ ಹಿಂದಿರುಗಿಸಬೇಕೆಂದು ತಿಳಿದು ಆ ಮೊಬೈಲ್ ಇಟ್ಟುಕೊಂಡು ಕಾಲ್ ಗಾಗಿ ಕಾಯುತ್ತಾರೆ ಆದರೆ ಯಾವುದೇ ಕರೆಗಳು ಬರುವುದಿಲ್ಲ.

ಸುಮ್ಮನಿರದ ಶಿವಕುಮಾರ ಚನ್ನೈನ ಸಿಟಿ ಬಸ್ಸ್ಟಾಪ್ನ ಸಹಾಯವಾಣಿ ಕೇಂದ್ರಕ್ಕೆ ಹೋಗಿ ನಡೆದ ಘಟನೆ ವಿವರಿಸಿ ಅಧಿಕಾರಿ ತಿಳಿಸುತ್ತಾರೆ. ಅವರು ಬರುವರೆಗು ಸ್ವಲ್ಪ‌ ಹೊತ್ತು ಕಾಯುತ್ತೇನೆ. ಯಾರು ಬರಲಿಲ್ಲ ಎಂದರೆ ನಾನು ಈ ಬ್ಯಾಗ್ ಅನ್ನು ನಿಮಗೆ ಒಪ್ಪಿಸಿ ಹೋಗುತ್ತೇನೆ ಎಂದು ಶಿವಕುಮಾರ ಅಧಿಕಾರಿಗೆ ತಿಳಿಸುತ್ತಾರೆ.

ಸ್ವಲ್ಪ ಸಮಯದ ನಂತರ ಮಹಿಳೆಯೊಬ್ಬಳು ಅಳುತ್ತಾ ಗಾಬರಿಯಿಂದ ಪ್ರತಿಯೊಂದು ಬಸ್ಸನ್ನು ಹತ್ತಿ ಎನೊ ಹುಡುಕುತ್ತಿರುವುದನ್ನು ಶಿವಕುಮಾರ ಕಾಣುತ್ತಾರೆ. ಮಹಿಳೆಯನ್ನು ವಿಚಾರಿಸಿದಾಗ ತಾನು ಬಸ್ಸ್ ಒಂದರಲ್ಲಿ ಅಪಾತ ಚಿನ್ನ ಐದು ಲಕ್ಷ ಹಣ ಕಳೆದುಕೊಂಡಿರುವ ಕುರಿತು ತಿಳಿಸುತ್ತಾಳೆ. ಆಗ ಡ್ರೈವರ್ ಸಮಾಧಾನ ಪಡಿಸಿ ಆ ಬ್ಯಾಗ್ ತನ್ನ ಬಳಿಯಿರುವುದಾಗಿ ತಿಳಿಸಿ,ಅದನ್ನು ಆ ಮಹಿಳೆಗೆ ಹಿಂದಿರುಗಿಸುತ್ತಾನೆ. ಕಳೆದು ಹೋದ ಹಣ ಹಾಗೂ ಒಡವೆ ಸಿಕ್ಕಿದ್ದು ಕಂಡು ಶ್ವೇತಾ ಖುಷಿ ಪಡುತ್ತಾಳೆ. ಅವರ ಪ್ರಾಮಾಣಿಕತೆಗೆ ಮಹಿಳೆ ವಂದನೆ ತಿಳಿಸುತ್ತಾಳೆ.

ಈ ಸಮಯದಲ್ಲಿ ಅಲ್ಲಿ ನಡೆದ ಈ ಘಟನೆಯನ್ನು ಕಂಡ ಜನರು ಸರ್ಕಾರಿ ನೌಕರಸ್ಥರಾಗಿ ನಿಮ್ಮ ಪ್ರಾಮಾಣಿಕತೆ ಯನ್ನು ಮೆಚ್ಚಲೆಬೇಕು ಎಂದು ಪ್ರಂಶಸಿಸುತ್ತಾರೆ.ಈ‌ ಕುರಿತು ಮಾತನಾಡಿದ ಶಿವಕುಮಾರ ಅವರು ಆ ಬ್ಯಾಗ್ ಹಿಡಿದುಕೊಂಡು ಬಸ್ಸ್ ಹತ್ತಿರುವುದನ್ನು ಮೊದಲೆ ಗಮನಿಸಿದ್ದೆ ಆ ವಸ್ತು ಅವರಿಗೆ ಸೇರುವಂತೆ ಮಾಡಿದ್ದೆ ಎಂದು ಉತ್ತರಿಸಿದ್ದರು. ಅದೆನೆ ಇರಲಿ ಗೆಳೆಯರೆ ಜೀವನದಲ್ಲಿ ಹಣ ಎಷ್ಟೊ ಮುಖ್ಯೊವೊ ಅದನ್ನು ಗಳಿಸುವ ಮಾರ್ಗವು ಅಷ್ಟೆ ಮುಖ್ಯ. ಅದಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ. ಸರ್ಕಾರಿ ಹುದ್ದೆಯಲ್ಲಿ ಇದ್ದು ಸಾರ್ವಜನಿಕರ ವಸ್ತುಗಳ‌ ಕುರಿತು ಜವಾಬ್ದಾರಿ ತೋರಿಸಿದ್ದು, ಪ್ರಾಮಾಣಿಕತೆ ಕಂಡು ಜನ ಹೋಗಳಿದ್ದಾರೆ.