Advertisements

ಇವರ ಖಾತೆಯಿಂದ ಮಿಸ್ಸಾಗಿ ಹಣ ಬೇರೆಯವರ ಖಾತೆಗೆ ವರ್ಗಾವಣೆ ಆದಾಗ, ಇವರು ಮಾಡಿದ ಕೆಲಸ ನೋಡಿದರೆ ದಂಗಾಗ್ತೀರಾ..!

Inspiration

ನಮಸ್ತೆ ಸ್ನೇಹಿತರೆ, ಆಗಾಗ ಬ್ಯಾಂಕಿನ ವ್ಯವಹಾರದಲ್ಲಿ ಹಣವನ್ನು ವರ್ಗಾವಣೆ ಮಾಡುವಾಗ ಕೆಲವು ಬಾರಿ ಮಿಸ್ಸಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾಗುವುದನ್ನು ಅಲ್ಲಲ್ಲಿ ಕೇಳಿರುತ್ತೇವೆ. ಆದರೆ ಆ ವರ್ಗಾವಣೆಯಾದ ಹಣ ಮತ್ತೆ ವಾಪಸ್ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇಂತಹದ್ದೇ ಒಂದು ಘಟನೆ ನಡೆದಿದೆ, ಹರ್ಷವರ್ಧನ್ ಗೌಡ ಎಂಬುವರು ಏಪ್ರಿಲ್ 21 ರಂದು ಬೇರೆಯವರ ಖಾತೆಗೆ 20,000 ರೂ. ಹಣ ವರ್ಗಾವಣೆಗೊಂಡಿದೆ. ಈ ಹಣ ಯಾರಿಗೆ ವರ್ಗಾವಣೆಯಾಗಿತ್ತು.? ನಂತರ ಹರ್ಷವರ್ಧನ್ ಮಾಡಿದ ಕೆಲಸ ಏನು.? ತಿಳಿಯಲು ಮುಂದೆ ಓದಿ..

Advertisements
Advertisements

ಹರ್ಷವರ್ಧನ್​ ಅವರು ಈ ವಿಷಯವನ್ನು ಬ್ಯಾಂಕ್​​ ಮ್ಯಾನೇಜರ್​ಗೆ ತಿಳಿಸಿದರು. ನಂತರ ಮ್ಯಾನೇಜರ್ ಇವರ ಖಾತೆಯನ್ನು ಪರಿಶೀಲಿಸಿದಾಗ ಅದು ಎಸ್.ವಿ. ರಾಚಪ್ಪ ಎಂಬ ಕೂಲಿ ಕಾರ್ಮಿಕರಿಗೆ ಸೇರಿದ್ದಾಗಿತ್ತು. ಅವರಿಗೆ ಕರೆ ಮಾಡಿದಾಗ ಅವರು ಶಿವಮೊಗ್ಗದವರು ಎಂದು ತಿಳಿಯುತ್ತದೆ. ತಮಿಳುನಾಡಿನ ಬಾರ್ಡರ್ ಕೃಷ್ಣಗಿರಿ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿತ್ತು. ನಂತರ ಹರ್ಷವರ್ಧನ್ ಗೌಡ ತಮ್ಮ ಸ್ನೇಹಿತನನ್ನು ಅಲ್ಲಿಗೆ ಕಳುಹಿಸಿದರು. ನಮ್ಮ ಖಾತೆಗೆ ಹಣ ಬಂದಿರುವ ವಿಚಾರವೇ ಗೊತ್ತಿಲ್ಲ ಎಂದು ರಾಚಪ್ಪ ತಿಳಿಸುತ್ತಾರೆ. ನಂತರ ರಾಜಪ್ಪ ಯಾವುದೇ ರೀತಿಯಲ್ಲಿ ಆಕ್ಷೇಪ ಮಾಡದೆ ಹಣವನ್ನು ಡ್ರಾಮಾಡಿ ಹರ್ಷವರ್ಧನ್ ಗೆಳೆಯನಿಗೆ ಕೊಡುತ್ತಾರೆ. ಹಣವನ್ನು ಪಡೆದ ಹರ್ಷವರ್ಧನ್​​ ಗೆಳೆಯ, ರಾಚಪ್ಪ ಅವರ ಮನೆಯ ಪರಿಸ್ಥಿತಿ ತೀವ್ರ ಕಷ್ಟದಲ್ಲಿರುವುದನ್ನು ಗಮನಿಸುತ್ತಾರೆ. ಆ ವಿಚಾರವನ್ನು ಹರ್ಷವರ್ಧನ್ ಗೌಡ ಅವರಿಗೆ ತಿಳಿಸುತ್ತಾರೆ.. ನಂತರ ಹರ್ಷವರ್ಧನ್ ಮಾಡಿದ್ದಾದರೂ ಏನು ಗೊತ್ತಾ..?

ನಂತರ ಹರ್ಷವರ್ಧನ್ ಅವರ ಗೆಳೆಯನಿಗೆ ಹೀಗೆ ಹೇಳುತ್ತಾರೆ. ‘ಅಷ್ಟು ಹಣವನ್ನು ಅವರಿಗೆ ಕೊಟ್ಟು ಬಿಡು, ಕಷ್ಟದಲ್ಲಿರುವ ಅವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಿದಂತಾಗುತ್ತದೆ’ ಎಂದು ಮಾನವೀಯತೆ ಮೆರೆದಿದ್ದಾರೆ. ಅವರು ಹೇಳಿದಂತೆ ಹರ್ಷವರ್ಧನ್ ಸ್ನೇಹಿತ ಅಷ್ಟು ಹಣವನ್ನು ಪುನಃ ರಾಚಪ್ಪ ಅವರ ಕೈಗೆ ಕೊಟ್ಟುಬಿಡುತ್ತಾರೆ. ಹಣ ಪಡೆದ ರಾಚಪ್ಪ ಹರ್ಷವರ್ಧನ್ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಬಡಕುಟುಂಬಕ್ಕೆ ಆಸರೆಯಾದ ಹರ್ಷವರ್ಧನ್ ಗೌಡ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು.. ಹರ್ಷವರ್ಧನ್ ಅವರು ಮಾಡಿದ ಕೆಲಸದ ಬಗ್ಗೆ ನೀವೇನಂತಿರಾ ಸ್ನೇಹಿತರೆ..