Advertisements

ಮದುವೆ ದಿನವೇ ಬ್ರೇನ್ ಡೆಡ್ಡಾಗಿ ಅಂಗಾಂಗ ದಾನ ಮಾಡಿದ ಘಟನೆ.. ಆದರೆ ಈ ಹೆಣ್ಣು‌ ಮಗಳು ನಿಜಕ್ಕೂ ಯಾರು ಗೊತ್ತಾ.. ಮನಕಲಕುತ್ತದೆ..

Kannada News

ನಿನ್ನೆಯಷ್ಟೇ ಕೋಲಾರದ ಶ್ರೀನಿವಾಸಪುರ ಮೂಲದ ಚೈತ್ರಾ ಎಂಬ ಹೆಣ್ಣು ಮಗಳು ಮದುವೆ ದಿನವೇ ಅರತಕ್ಷತೆಯ ವೇಳೆ ಕುಸಿದು ಬಿದ್ದು ಆಸ್ಪತ್ರೆಗೆ ಸೇರಿಸಲಾಗಿ ಆಕೆಗೆ ಬ್ರೇನ್ ಡೆಡ್ಡಾಗಿರುವ ವಿಚಾರ ತಿಳಿದು ಆಕೆಯ ಅಂಗಾಂಗಗಳನ್ನು ಬೆಂಗಳೂರಿನ ನಿಮಾಹ್ನ್ಸ್ ಆಸ್ಪತ್ರೆಯಲ್ಲಿ ದಾನ‌ ಮಾಡಿರುವ ಘಟನೆ ಸುದ್ದಿಯಾಗಿತ್ತು‌‌.. ಆದರೆ ನಿಜಕ್ಕೂ ಆ ದಿನ ಏನಾಯಿತು.. ಅಷ್ಟಕ್ಕೂ ಈ ಚೈತ್ರಾ ಯಾವ ಹುದ್ದೆಯಲ್ಲಿದ್ದರು ಗೊತ್ತಾ ತಿಳಿದರೆ ನಿಜಕ್ಕೂ ಹೆಮ್ಮೆಯಾಗುತ್ತದೆ.. ಹೌದು ಬಡ ರೈತನ ಮಗಳು‌ ಸಾಧನೆ ಮಾಡಿದ್ದಳು.. ಆದರೆ ಆ ದೇವರಿಗೇಕೋ ಕರುಣೆ ಬಾರದಾಯಿತು.. ಹೌದು ಮೊದಲೇ ತಿಳಿಸಿದಂತೆ ಚೈತ್ರಾ ಕೋಲಾರದ ಮೂಲಕ ಶ್ರೀನಿವಾಸಪುರ ತಾಲೂಕಿನ ಕೊಡೆಚೆರವು ಎಂಬ ಗ್ರಾಮದ ನಿವಾಸಿ..

Advertisements
Advertisements

ಈಕೆಯ ತಂದೆ ರಾಮಪ್ಪ.. ತಾಯಿ ಅಕ್ಕೆಮ್ಮ.. ರಾಮಪ್ಪ ಅವರು ಕೃಷಿಕರು.. ಈ‌ ದಂಪತಿಗೆ ಚೈತ್ರಾ ಒಬ್ಬಳೇ ಮಗಳು.. ಇಪ್ಪತ್ತೈದು ವರ್ಷದ ಹಿಂದೆಯೇ ರಾಮಪ್ಪ ಮೊದಲ ಮಗು ಹೆಣ್ಣಾದರೂ ಸಹ ಮತ್ತೊಂದು ಮಗು ಬೇಡ ನನಗೆ ನನ್ನ ಮಗಳೇ ಎಲ್ಲವೂ ಎಂದಿದ್ದರಂತೆ.. ಗಂಡು ಮಗು ಹೆಣ್ಣು ಮಗು ಎಲ್ಲವೂ ನನ್ನ ಮಗಳೇ ಆಗ್ತಾಳೆ ಎಂದಿದ್ದರಂತೆ.. ಈ ಕಾರಣದಿಂದಲೇ ರಾಮಪ್ಪ ಚಿಕ್ಕೆವ್ವ ದಂಪತಿ ಒಂದೇ ಮಗು ಸಾಕು ಎಂದು ಚೈತ್ರಾರನ್ನು ಬಹಳ ಪ್ರೀತಿಯಿಂದ ಸಾಕಿದ್ದರಂತೆ.. ಮಗಳು ಬೆಳೆದು ನಿಂತ ಮೇಲೆ ಚೈತ್ರಾಗೆ ಹೊಸಕೋಟೆಯ ಹುಡುಗನೊಬ್ಬನ ಜೊತೆ ಮದುವೆ ನಿಶ್ಚಯ ಮಾಡಲಾಗಿತ್ತು.. ಫೆಬ್ರವರಿ ಆರು ಮತ್ತು ಏಳನೇ ತಾರೀಕಿನಂದು ಮದುವೆ ಕಾರ್ಯಕ್ರಮವಿತ್ತು.. ಶ್ರೀನಿವಾಸಪುರದ ಮಾರುತಿ ಸಭಾಭವನದಲ್ಲಿ ಅಂದುಕೊಂಡಂತೆ ಮದುವೆ ಸಮಾರಂಭ ನೆರವೇರುತಿತ್ತು..

ಅದೇ ದಿನ ಸಂಜೆ ಆರು ಗಂಟೆಗೆ ಚೈತ್ರಾ ಕೂಡ ಅರತಕ್ಷತೆ ಸಿದ್ಧರಾಗಿ ಹುಡುಗನ ಪಕ್ಕ ಬಂದು ನಿಂತರು.. ರಾತ್ರಿ ಒಂಭತ್ತು ಗಂಟೆಯವರೆಗೂ ಹುಡುಗನ ಜೊತೆ ವೇದಿಕೆಯ ಮೇಲೆ ನಿಂತಿದ್ದರು.. ಆದರೆ ಆ ತಕ್ಷಣ ಇದ್ದಕಿದ್ದ ಹಾಗೆ ಕುಸಿದು ಬಿದ್ದ ಚೈತ್ರಾ ಕಂಡು ಮನಎಯವರು ಗಾಬರಿಯಾಗಿದ್ದಾರೆ.. ಆಯಾಸದಿಂದ ಸುಸ್ತಾಗಿರಬಹುದು ಎಂದು ಕೊಂಡರು.. ತಕ್ಷಣ ಮದುವೆಗೆ ಬಂದಿದ್ದ ವೈದ್ಯರೊಬ್ಬರು ತಕ್ಷಣ ಚೈತ್ರಾರನ್ನು ಶ್ರೀನಿವಾಸಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.. ಮತ್ತೆ ಅಲ್ಲಿಂದ ನೇರವಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬ್ರೇನ್ ಸ್ಟ್ರೋಕಾಗಿರುವ ವಿಚಾರ ತಿಳಿದಿದೆ.. ಐದು ದಿನಗಳ‌ ಕಾಲ ಚೈತ್ರಾಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.. ಆದರೆ ಚಿಕಿತ್ಸೆ ಫಲಿಸಲಿಲ್ಲ.. ಚೈತ್ರಾಗೆ ನಿನ್ನೆ ಫೆಬ್ರವರಿ ಹನ್ನೆರಡರಂದು ಬ್ರೇನ್ ಡೆಡ್ಡಾಗಿರುವ ವಿಚಾರ ತಿಳಿದಿದೆ..

ಚಿಕಿತ್ಸೆಗೆ ಸ್ಪಂದಿಸದೇ ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ ಚೈತ್ರಾ ಉಳಿಯೋದಿಲ್ಲ ಎನ್ನೋದು ಖಚಿತವಾಗಿದೆ.. ಅದಾಗಲೇ ಎಪ್ಪತ್ತರಷ್ಟು ಜೀವ ಹೋದ ಕಾರಣ ಅವಳನ್ನು ಸದಾ ನೆನಪಿನಲ್ಲಿ‌ ಇಡಬೇಕೆಂದು ಆಕೆಯಿಂದ ಒಂದಷ್ಟು ಜನ ಉಳಿಯಲೆಂದು ತೀರ್ಮಾನಿಸಿ ಮಗಳ ಅಂಗಾಂಗ ದಾನಕ್ಕೆ ರಾಮಪ್ಪ ಹಾಗೂ ಚಿಕ್ಕೆವ್ವ ದಂಪತಿ ಬಂದಿದ್ದಾರೆ.. ತಾವೇ ಹೆತ್ತು ಆಡಿಸಿದ ಕೂಸಿನ ಅಂಗಾಂಗಗಳನ್ನು ದಾನ ಮಾಡಿಬಿಡಿ ಎಂದು ಇದ್ದೊಬ್ಬ ಮಗಳ ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.. ಅವರ ಮಾತಿನಂತೆ ಚೈತ್ರಾರ ಕಣ್ಣುಗಳು ಹೃದಯ ಕಿಡ್ನಿಗಳು ಲಿವರ್ ಎಲ್ಲವನ್ನೂ ಸಹ ದಾನ ಮಾಡಲಾಗಿದ್ದು ಅದಾಗಲೇ ಕೆಲವರಿಗೆ ಜೋಡಣೆಯೂ ಸಹ ಆಗಿದೆ..

ಆದರೆ ಆ ದಿನ ಹೆಣ್ಣು ಮಗು ಹುಟ್ಟಿದಾಗ ನನಗೆ ಮಗಳೊಬ್ಬಳೇ ಸಾಕು ಎಂದಿದ್ದ ರಾಮಪ್ಪ ದಂಪತಿಗೆ ಚೈತ್ರಾ ಕೇವಲ‌ ಮಗಳಾಗಿ ಮಾತ್ರ ಇದ್ದು ಮದುವೆಯಾಗಿ ಗಂಡನ ಮನೆ ಸೇರುವ ನಿರ್ಧಾರ ಮಾಡಿರಲಿಲ್ಲ.. ಬದಲಿಗೆ ಆಕೆಯ ಕನಸುಗಳೇ ಬೇರೆ ಇತ್ತು.. ಹೌದು ರೈತನಾಗಿದ್ದ ತನ್ನ ಅಪ್ಪನ ಕಷ್ಟ ನೋಡಿ ಬೆಳೆದಿದ್ದ ಚೈತ್ರಾ ಚೆನ್ನಾಗಿ ಓದಿ ಸದಾ ಕ್ಲಾಸಿನಲ್ಲಿ ಮುಂದಿರುತ್ತಿದ್ದಳು.. ಉನ್ನತ ವ್ಯಾಸಂಗವನ್ನೂ ಸಹ ಮಾಡಿದ್ದರು.. ಮನಸ್ಸಿನಲ್ಲಿ ಅಪ್ಪ ಅಮ್ಮನ ಬಗ್ಗೆ ನೂರಾರು ಕನಸು ಕಂಡಿದ್ದಳು.. ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅವರನ್ನು ಹಾಗಿಡಬೇಕು ಹೀಗಿಡಬೇಕು ಎಂಬ ಸಾಕಷ್ಟು ಕನಸುಗಳು ಆ ಹೆಣ್ಣು ಮಗಳಿಗಿದ್ದವು.. ಆಕೆ ಅಂದುಕೊಂಡಂತೆ ಬಯೋಕೆಮಿಸ್ಟ್ರಿ ವಿಷಯದಲ್ಲಿ ಎಂ ಎಸ್ ಸಿ ಮಾಡಿದಳು.. ಓದಿ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ ಚೈತ್ರಾ.. ಬದಲಿಗೆ ತನ್ನ ಕನಸಿನಂತೆ ಕೈವಾರ ಬಳಿಯ ಭೈರವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೂ ಸೇರಿಕೊಂಡಳು..

ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..

ಕೃಷಿಕರಾಗಿದ್ದ ರಾಮಪ್ಪ ತನ್ನ ಮಗಳು ಕಾಲೇಜಿನ ಉಪನ್ಯಾಸಕಿಯಾದಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.. ತನ್ನ ಕನಸಿನಂತೆ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಚೈತ್ರಾ.. ನಂತರದಲ್ಲಿ ಮಗಳ ಮದುವೆ ಜವಾಬ್ದಾರಿ ನೆರವೇರಿಸಿದರೆ ನಮ್ಮ ಜವಾಬ್ದಾರಿ ಮುಗಿಯುತ್ತದೆ ಎಂದು ತಂದೆ ತಾಯಿ ನಿರ್ಧರಿಸಿ ಮದುವೆ ನಿಶ್ಚಯ ಮಾಡಿದರು.. ಆದರೆ ಸಂಭ್ರಮದಲ್ಲಿರಬೇಕಾದ ಮನೆ ಸೂತಕದ ಮನೆಯಾಗಿ ಹೋಯ್ತು.. ತಂದೆ ತಾಯಿಗಳನ್ನು ನೋಡಿಕೊಳ್ಳದೇ ಮಕ್ಕಳು ಹೆತ್ತವರನ್ನು ಮನೆಯಿಂದ ಹೊರ ಹಾಕುವ ಘಟನೆಗಳು ಒಂದು ಕಡೆಯಾದರೆ.. ಹೆಣ್ಣು ಮಗಳಾದರೂ ಸಹ ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಓದಿ ಕೆಲಸ ಪಡೆದು ಸಂತೋಷವಾಗಿ ಇರಬೇಕಾದ ಸಮಯದಲ್ಲಿ ಆ ದೇವರಿಗೆ ಈಕೆಯ ಮೇಲೆ ಕರುಣೆ ಬಾರದಾಯಿತು.. ವಯಸ್ಸಾದ ಕಾಲದಲ್ಲಿ ಮಗಳಿಲ್ಲದೇ ಆ ತಂದೆ ತಾಯಿ ನಿನಕ್ಕೂ ಅನಾಥರಾಗಿ ಹೋದರು..