ಕೆಲವೊಮ್ಮೆ ಸಿನಿಮಾ ವನ್ನ ನೋಡಿದ್ರೆ, ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ನೋಡಿದರೆ ನಿಜ ಜೀವನದಲ್ಲಿ ಹೀಗೆಲ್ಲ ನಡೆಯುವುದಕ್ಕೆ ಸಾಧ್ಯವೇ ಇಲ್ಲ ಬಿಡಿ ಅಂತ ಮಾತನಾಡಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಇದು ಸುಳ್ಳಾಗುತ್ತೆ. ಸಿನಿಮಾದ ತರವೇ ನಿಜ ಜೀವನದಲ್ಲಿಯು ನಡೆಯುತ್ತೆ! ಇಲ್ಲೊಂದು ಘಟನೆ ಯಾವ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ನಡೆದಿದೆ. ಕೋರ್ಟ್ ಆವರಣದಲ್ಲಿಯೇ ಮಹಾನುಭಾವ ಒಬ್ಬ ತನ್ನ ಪತ್ನಿಯೇ ಮುಗಿಸಿ ಬಿಟ್ಟಿದ್ದಾನೆ. ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಮುಂದೆ ಓದಿ.

ನ್ಯಾಯಾಲಯಕ್ಕೆ ನ್ಯಾಯಕ್ಕಾಗಿ ಬಂದ ದಂಪತಿಗಳ ನಡುವೆ ಇಂಥ ಅ’ಮಾ’ನು’ಷ ಘಟನೆ ನಡೆದೇ ಹೋಗಿದೆ ನೋಡಿ. ಇಂತಹ ಹೇ’ಯ ಕೃ’ತ್ಯ ನಡೆದಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ಈ ಘಟನೆಯ ಬಗ್ಗೆ ಕೇಳಿದವರು ಆ ಶಾಕ್ ನಿಂದ ಹೊರ ಬರಲಾರದೆ ಕಂಗಾಲಾಗಿದ್ದಾರೆ. ಕರ್ನಾಟಕ ರಾಜ್ಯ ಜನತೆಯನ್ನು ಬೆಚ್ಚಿ ಬೀಳಿಸಿದಂತಹ ಘಟನೆ ಇದು. ಶಿವಕುಮಾರ್ ಎನ್ನುವ ವ್ಯಕ್ತಿ ಚೈತ್ರ ಎನ್ನುವ ಹುಡುಗಿಯನ್ನು ಮದುವೆಯಾಗಿದ್ದ. ಆಕೆಗೆ 32 ವರ್ಷ ವಯಸ್ಸಾಗಿತ್ತು. ಇವರಿಬ್ಬರ ಮದುವೆ ನಡೆದು ಏಳು ವರ್ಷಗಳು ಕಳೆದಿದ್ದವು. ಅಲ್ಲದೆ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ.

ಕೆಲವು ವರ್ಷ ಒಟ್ಟಾಗಿ ಸಂಸಾರ ನಡೆಸಿದ ಶಿವಕುಮಾರ್ ಹಾಗೂ ಚೈತ್ರ ದಂಪತಿಗಳ ನಡುವೆ ಕಳೆದ ಮೂರು ವರ್ಷಗಳಿಂದ ವೈಮನಸ್ಯ ಉಂಟಾಗಿತ್ತು ಇದೇ ಕಾರಣಕ್ಕೆ ಹೆಂಡತಿಯಿಂದ ವಿ’ಚ್ಛೇದನ ಪಡೆದುಕೊಳ್ಳಲು ಕೂಡ ಶಿವಕುಮಾರ್ ನಿರ್ಧರಿಸಿ ವಿ’ಚ್ಛೇದನಕ್ಕೆ ಕೋ’ರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದ. ಇನ್ನು ಚೈತ್ರ ಕೂಡ ಸುಮ್ಮನೆ ಇರಲಿಲ್ಲ. ವಿ’ಚ್ಛೇಧನ ನೀಡಬೇಕಾದರೆ ತನಗೆ ಜೀವನಾಂಶ ಕೊಡಬೇಕು. ತನಗೂ ತನ್ನ ಮಕ್ಕಳಿಗೂ ಒಂದು ನೆಲೆಯಾಗಬೇಕು ಅಂತ ಕೋರ್ಟಿನಲ್ಲಿ ಒಂದು ಅರ್ಜಿ ಸಲ್ಲಿಸಿದಳು.

ಇನ್ನು ಕೋರ್ಟ್ ನಲ್ಲಿ ವಿ’ಚ್ಛೇಧನ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಸರಿಯಾದ ಕಾರಣ ಕೊಡಬೇಕು. ಮೂರು ತಿಂಗಳ ಅವಧಿಯ ನಂತರ ಮತ್ತೆ ಕೋ’ರ್ಟ್ ಗೆ ಬರಬೇಕು. ಕೊನೆಯ ಘಳಿಗೆಯವರೆಗೂ ಮತ್ತೊಂದು ಅವಕಾಶವನ್ನು ನೀಡುತ್ತಲೇ ಇರುತ್ತಾರೆ. ಯಾಕೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಒಟ್ಟಾಗಿ ಬದುಕುವುದು ಕಾಮನ್. ಹಾಗಾಗಿ ನ್ಯಾಯಾಧೀಶರು ನೀವಿಬ್ಬರೂ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಬಾಳಬಹುದು ಒಮ್ಮೆ ಮಾತನಾಡಿ ನೋಡಿ ಅಂತ ಮಾತನಾಡಲು ಹೊರಗೆ ಕಳುಹಿಸಿದ್ದಾರೆ.

ಬಹುಶಃ ಇಂತಹ ಸಂದರ್ಭದಲ್ಲಿ ಶಿವಕುಮಾರ್ ಕಾಯ್ತಾ ಇದ್ದ ಅನಿಸುತ್ತೆ. ನ್ಯಾಯಾಲಯದ ಶೌಚಾಲಯದಲ್ಲಿ ಮಗಳನ್ನು ಕರೆದುಕೊಂಡು ಹೋಗಿದ್ದ ಚೈತ್ರಳನ್ನ ನೋಡಿದ ಶಿವಕುಮಾರ್, ಆಕೆಯ ಹಿಂದೆ ಹೋಗಿ ಚಾ’ಕುವಿನಿಂದ ಕ’ತ್ತನ್ನು ಕು’ಯ್ದು ಆಕೆಯನ್ನ ರ’ಕ್ತದ ಮ’ಡುವಿನಲ್ಲಿ ಬಿಟ್ಟು ಪ’ರಾ’ರಿಯಾಗಿದ್ದಾನೆ. ಹೀಗೆ ಶಿವಕುಮಾರ್ ಓಡಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯರು ಕೂಡಲೇ ಆತನನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
ಇತ್ತ ಸಾ’ವು ಬದುಕಿನ ನಡುವೆ ಹೋರಾಡುತ್ತಿದ್ದ ಚೈತ್ರಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಚೈತ್ರ ತನ್ನ ಉಸಿರನ್ನ ಬಿಟ್ಟಿದ್ದಳು. ಹೌದು, ಸ್ನೇಹಿತರೆ ಇಂದು ದಾಂಪತ್ಯ ಜೀವನದಲ್ಲಿ ಯಾವ ಮೌಲ್ಯವು ಇಲ್ಲ ಕೆಲವರ ಸಂಸಾರವನ್ನು ನೋಡಿದ್ರೆ ನಿಜ ಅನಿಸುತ್ತೆ ಪ್ರೀತಿ ವಿಶ್ವಾಸ ಯಾವುದಕ್ಕೂ ಬೆಲೆ ಕೊಡದೆ ಕೇವಲ ಸ್ವಾರ್ಥಕ್ಕಾಗಿ ಬದುಕುವ ಜನರೇ ಹೆಚ್ಚಾಗಿದ್ದರೆ ಅಂದರೆ ತಪ್ಪಲ್ಲ ಏನಂತೀರಿ! ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ.