Advertisements

ಚಂದನ್ ಶೆಟ್ಟಿಯವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಅವರ ಆಸ್ತಿ ಎಷ್ಟು ಅಂತ ತಿಳಿದರೆ ಶಾಕ್ ಆಗ್ತೀರಾ!

Kannada News

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹಲವಾರು ಜನ ಸೆಲೆಬ್ರಿಟಿ ಆಗಿದ್ದಾರೆ. ಇನ್ನು ಅಂತಹ ವ್ಯಕ್ತಿಗಳಲ್ಲಿ ಕನ್ನಡ ಚಂದನ್ ಶೆಟ್ಟಿಯವರು ಕೂಡ ಒಬ್ಬರು ಎಂದು ಹೇಳಿದರೆ ತಪ್ಪಲ್ಲ. ಹೌದು ಇದೀಗ ಕನ್ನಡ ಚಿತ್ರರಂಗದಲ್ಲಿ ಮ್ಯೂಸಿಕ್ ಡೈರೆಕ್ಟರ್ ಆಗಿ, ಹಿನ್ನೆಲೆ ಗಾಯಕರಾಗಿ, ಗೀತ ರಚನಾಕಾರರಾಗಿ ಸಂಗೀತ ಕ್ಷೇತ್ರದಲ್ಲಿ ಮೆರೆಯುತ್ತಿದ್ದಾರೆ. ಇನ್ನು ಅವರು ಮಾಡಿದಂತಹ ಆಲ್ಬಮ್ ಸಾಂಗ್ ಗಳು ಕೂಡ ಹೆಚ್ಚಿನ ಯಶಸ್ಸನ್ನು ಕಂಡಿದೆ. ಇದೀಗ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಸಂಗೀತ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಅವರು ಒಂದು ಹಾಡನ್ನು ಹಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಚಾರ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಮೂಡುತ್ತದೆ. ಚಂದನ್ ಶೆಟ್ಟಿ ಅವರು ಪಡೆಯುವ ಸಂಭಾವನೆ ಎಷ್ಟು ಎಂದು ತಿಳಿಯೋಣ ಬನ್ನಿ.

Advertisements
Advertisements

ಚಂದನ್ ಶೆಟ್ಟಿಯವರ ಹಲವಾರು ಕನ್ನಡ ರಾ’ಪ್ ಹಾಡುಗಳು ಕನ್ನಡ ಸಂಗೀತ ಕ್ಷೇತ್ರದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ್ದವು. 3 ಪೆಗ್, ಚಾಕಲೇಟ್ ಗರ್ಲ್, ಟಾಪ್ ಟು ಬಾಟಮ್, ಹೀಗೆ ವಿವಿಧ ಹಾಡುಗಳು ಸಂಗೀತ ಪ್ರಿಯರನ್ನು ಹು’ಚ್ಚೆಬ್ಬಿಸಿ ಕುಣಿಯುವಂತೆ ಮಾಡಿವೆ. ಅಷ್ಟೇ ಅಲ್ಲದೆ ಚಂದನ್ ಶೆಟ್ಟಿ ಅವರು ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಸ್ಪರ್ಧಿಯಾಗಿ ವಿಜೇತರು ಸಹ ಆಗಿದ್ದರು. ಬಿಗ್ ಬಾಸ್ ಮನೆಯ ಮೂಲಕ ಜನರಿಗೆ ಮತ್ತಷ್ಟು ಚಿರಪರಿಚಿತರಾದರು. ಇನ್ನು ಚಂದನ್ ಶೆಟ್ಟಿ ಅವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಕೈಕೆಳಗೆ ಸಹಾಯಕ ಸಂಗೀತ ನಿರ್ದೇಶಕನಾಗಿ ‘ಅಲೆಮಾರಿ’ ಎಂಬ ಚಿತ್ರದಲ್ಲಿ ಕೆಲಸ ಮಾಡಿದರು. ಇದರ ಮೂಲಕ ಚಂದನ್ ಶೆಟ್ಟಿ ಅವರು ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ಪಾದಾರ್ಪಣೆ ಮಾಡಿದರು. ನಂತರ ಅವರು ವರದನಾಯಕ, ಪವರ್, ಚಕ್ರವ್ಯೂಹ ಹಾಗೂ ಭಜರಂಗಿ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಿಗೆ ಹಾಡುಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ನಡ ಕೋಗಿಲೆ’ ಎಂಬ ರಿಯಾಲಿಟಿ ಶೋದಲ್ಲಿ ಕೂಡ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ಹೀಗೆ ಸಾಕಷ್ಟು ಸಿನಿಮಾಗಳ ಅವಕಾಶಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿರುವ ಚಂದನ್ ಶೆಟ್ಟಿ ಅವರು ಒಂದು ಹಾಡನ್ನು ಹಾಡ ಹಾಡಲು ಸಂಭಾವನೆ ಎಷ್ಟು ಪಡೆಯುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಇದೆ. ಇನ್ನೊಬ್ಬರು ಸಂಗೀತ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಪಾಲ್ಗೊಂಡಿರುವುದರಿಂದ, ಅವರ ಸಂಭಾವನೆ ಕೂಡ ವಿವಿಧ ರೀತಿಯಲ್ಲಿರುತ್ತದೆ. ಅವರು ಎಲ್ಲೂ ಸಂಭಾವನೆಯ ಬಗ್ಗೆ ಉತ್ತರ ಕೊಟ್ಟಿಲ್ಲ. ಆದರೆ ಅವರ ಒಟ್ಟು ಆಸ್ತಿ 80 ಕೋಟಿ ಎಂದು ಅಂದಾಜಿಸಲಾಗಿದೆ. ಇದೇ ರೀತಿ ಚಂದನ್ ಶೆಟ್ಟಿ ಅವರು ಸಂಗೀತ ಪ್ರಿಯರಿಗೆ ಮನೋರಂಜನೆ ನೀಡುತ್ತಾ ಸಾಗಲಿ ಎಂದು ಆಶಿಸೋಣ.