ಎಷ್ಟೋ ಜನ ಮಕ್ಕಳಿಲ್ಲ ಅನ್ನೋ ನೋವಿನಲ್ಲಿರುತ್ತಾರೆ.. ಮತ್ತೆಷ್ಟೋ ಜನ ಹಣವಿಲ್ಲ ಅನ್ನೋ ಚಿಂತೆಯಲ್ಲಿರುತ್ತಾರೆ.. ಒಮ್ಮೆಮ್ಮೆ ಎಲ್ಲಾ ಇದ್ದರೂ ಜೀವನದಲ್ಲಿ ನೆಮ್ಮದಿ ಇಲ್ಲದೇ ಇರುತ್ತಾರೆ.. ಆದರೆ ಎಲ್ಲವೂ ಇದ್ದು ಸಂದರ್ಭಕ್ಕೆ ಸಿಲುಕಿಕೊಂಡು ಎಲ್ಲವನ್ನೂ ಕಳೆದುಕೊಂಡಾಗ ಜೀವನ ಯಾವ ಹಂತಕ್ಕೆ ಹೋಗಿ ನಿಲ್ಲುವುದು ಎಂಬುದಕ್ಕೆ ಇಲ್ಲೊಂದು ಮನಕಲಕುವ ಘಟನೆ ನೈಜ್ಯ ಉದಾಹರಣೆಯಾಗಿದೆ.. ಹೌದು ರಾತ್ರೋ ರಾತ್ರಿ ಹೆಂಡತಿ ಮಾಡಿದ ಕೆಲಸ ಕಂಡು ಗಂಡ ತೆಗೆದುಕೊಂಡ ನಿರ್ಧಾರ ಇದೀಗ ಇಡೀ ಕುಟುಂಬ ಹಾಗೂ ಅಕ್ಕಪಕ್ಕದವರನ್ನು ಬೆಚ್ಚಿಬೀಳಿಸಿದೆ..

ಹೌದು ಈತನ ಹೆಸರು ಚಂದ್ರಕಾಂತ್.. ವಯಸ್ಸು ಕೇವಲ ಮೂವತ್ತೆಂಟು.. ಹಾಗೂ ಈಕೆಯ ಹೆಸರು ಲಾವಣ್ಯ.. ವಯಸ್ಸು ಮೂವತ್ತೆರೆಡು.. ಇವರದ್ದು ಚೆಂದದ ಸಂಸಾರ.. ಇವರಿಗೆ ಇಬ್ಬರು ಪುಟ್ಟ ಮಕ್ಕಳು.. ಆರು ವರ್ಷದ ಪ್ರಥಮ್ ಹಾಗೂ ಮೂರು ವರ್ಷದ ಸರ್ವಜ್ಞಾ.. ಹಣ ಆಸ್ತಿ ನೆಮ್ಮದಿ ಎಲ್ಲವೂ ಇತ್ತು.. ಆದರೆ ಬದುಕಿನ ತಿರುವುಗಳು ಯಾವಾಗ ಹೇಗೆ ಸಿಗುತ್ತವೆಯೋ ತಿಳಿದಿಲ್ಲ ಇದೀಗ ಈ ಸುಂದರ ಸಂಸಾರ ಸಂಪೂರ್ಣವಾಗಿ ಇಲ್ಲವಾಗಿ ಹೋಯ್ತು.. ಹೌದು ಇವರು ತೆಲಂಗಾಣದ ಸಂಗಾರೆಡ್ಡಿಯಲ್ಲಿ ವಾಸವಾಗಿದ್ದರು..

ಚಂದ್ರಕಾಂತ್ ಹಲವಾರು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ.. ಎಲ್ಲವೂ ಚೆನ್ನಾಗಿತ್ತು.. ಮನೆಯಲ್ಲಿ ಸಂತೋಷವಿತ್ತು.. ಆದರೆ ಕೊರೊನಾ ಬಂದ ನಂತರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭವಿಲ್ಲದೇ ಪ್ರತಿದಿನ ನಷ್ಟವನ್ನು ಅನುಭವಿಸುವಂತಾಗಿತ್ತು.. ಆದರೂ ಸಹ ಇದ್ದ ಹಣದಲ್ಲಿ ಹೇಗೋ ಜೀವನ ನಡೆಯುತಿತ್ತು.. ಆದರೆ ಕೆಲ ದಿನಗಳ ಹಿಂದೆ ಇದ್ದಕಿದ್ದ ಹಾಗೆ ತಾನು ಬಂಡವಾಳ ಹಾಕಿದ್ದ ವ್ಯವಹಾರದಲ್ಲಿ ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸಿದ ಚಂದ್ರಕಾಂತ್ ಬಹಳ ಕಷ್ಟದಲ್ಲಿದ್ದ.. ಆದರೆ ಈ ಕಷ್ಟದಿಂದ ಹೊರ ಬರುವುದು ಹೇಗೆ ಎಂಬ ಆಲೋಚನೆ ಮಾಡದೇ ಪ್ರತಿದಿನ ಮನೆಗೆ ಬಂದು ತನ್ನ ಹೆಂಡತಿಯ ಜೊತೆ ಜಗಳವಾಡತೊಡಗಿದ.

ಪ್ರತಿದಿನ ಇದು ಹೀಗೆ ಸಾಗಿತು.. ಇದರಿಂದ ಮನನೊಂದ ಲಾವಣ್ಯ ತನ್ನ ಇಬ್ಬರು ಮಕ್ಕಳ ಜೊತೆ ನಿನ್ನೆ ರಾತ್ರಿ ಮನೆ ಬಿಟ್ಟು ಹೊರಟು ಹೋಗಿದ್ದಾರೆ.. ಹೋಗಿ ಎಲ್ಲೋ ಒಂದು ಕಡೆ ಜೀವನ ಮಾಡಿದ್ದರೆ ಚೆನಾಗಿರುತಿತ್ತು.. ಆದರೆ ಲಾವಣ್ಯ ದುಡುಕಿನ ನಿರ್ಧಾರ ಮಾಡಿಯೇ ಬಿಟ್ಟಿದ್ದರು.. ಹೌದು ಗಂಡನ ಮಾತುಗಳಿಂದ ಬಹಳಷ್ಟು ನೊಂದಿದ್ದ ಲಾವಣ್ಯ ತನ್ನ ಇಬ್ಬರು ಪುಟ್ಟ ಕಂದಮ್ಮಗಳ ಜೊತೆ ಜೀವ ಕಳೆದುಕೊಂಡೇ ಬಿಟ್ಟಳು..
ಇನ್ನು ಇತ್ತ ಈ ವಿಚಾರ ತಿಳಿದ ಚಂದ್ರಕಾಂತ್ ಬೆಚ್ಚಿಬಿದ್ದಿದ್ದಾನೆ.. ಹೌದು ಸುಂದರ ಸಂಸಾರವನ್ನು ಸಂಪೂರ್ಣವಾಗಿ ಕಳೆದುಕೊಂಡ ಚಂದ್ರಕಾಂತ್ ರಾತ್ರೋ ರಾತ್ರಿ ಮಾಡಿದ ಕೆಲಸವೇ ಬೇರೆ.. ಹೌದು ಇದೆಲ್ಲವೂ ತನ್ನಿಂದಲೇ ಎಂದು ಸಾಕಷ್ಟು ಆಲೋಚನೆ ಮಾಡಿದ ಚಂದ್ರಕಾಂತ್ ಅಷ್ಟು ಪ್ರೀತಿಸುತ್ತಿದ್ದ ಪತ್ನಿ ಜೊತೆಯಲಿಲ್ಲ.. ಇತ್ತ ತನ್ನ ಭವಿಷ್ಯವೆಂದು ತಿಳಿದಿದ್ದ ಮಕ್ಕಳೂ ಇಲ್ಲ.. ಇನ್ನು ನಾನಿದ್ದೇನು ಪ್ರಯೋಜನವೆಂದು ಆಲೋಚಿಸಿ ಅದೇ ದಿನ ರಾತ್ರಿ ತಾನೂ ಸಹ ಜೀವ ಕಳೆದುಕೊಂಡಿದ್ದಾನೆ..

ಹೌದು ಒಂದೇ ದಿನ ಒಂದು ಸಂಪೂರ್ಣ ಕುಟುಂಬವೇ ಇಲ್ಲವಾಗಿ ಹೋಗಿದೆ.. ಹಣಕಾಸಿನಲ್ಲಿ ನಷ್ಟ ಲಾಭ ಸಾಮಾನ್ಯ.. ಲಾಭವಾದಾಗ ಕೂಡಿಟ್ಟು ನಷ್ಟವಾದಾಗ ಮುಂದೇನು ಮಾಡುವುದೆಂದು ಸರಿಯಾಗಿ ಆಲೋಚನೆ ಮಾಡಿ ನಿರ್ಧಾರ ಮಾಡಬೇಕು.. ಆದರೆ ಅದರಿಂದಾಗಿ ಇರೋ ಒಂದು ಜೀವನವನ್ನು ಈ ರೀತಿ ಅಂತ್ಯ ಮಾಡಿಕೊಳ್ಳಬಾರದು.. ನಿಜಕ್ಕೂ ನಿನ್ನೆ ಇದ್ದ ಕುಟುಂಬ ಇಂದು ಸಂಪೂರ್ಣವಾಗಿ ಇಲ್ಲವೆಂದರೆ ನಿಜಕ್ಕೂ ಮನಕಲಕುತ್ತದೆ.. ಇನ್ನು ಇತ್ತ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.. ಆತ ಜಗಳವಾಡಿದ ಆಕೆ ಮನನೊಂದಳು.. ಆದರೆ ಆ ಪುಟ್ಟ ಮಕ್ಕಳು ಮಾಡಿದ್ದಾದರೂ ಏನು.. ಬದುಕಿ ಬಾಳಬೇಕಾದ ಮಕ್ಕಳೇಕೆ ಇಲ್ಲವಾದವು ಭಗವಂತನೇ ಬಲ್ಲ..