Advertisements

ಅಪ್ಪ ಅಮ್ಮನಿಲ್ಲದೇ ಅನಾಥಳಾದ ಗುರೂಜಿ ಮೊದಲ ಪತ್ನಿ ಮಗಳು ಸ್ವಾತಿ! ಗುರೂಜಿ ಒಂದು ದಿನದ ಆದಾಯ 30 ಲಕ್ಷ..

Kannada News

ಪ್ರಿಯ ಓದುಗರೇ ಕಳೆದೆರಡು ದಿನಗಳ ಹಿಂದೆ ಬರ್ಬರವಾಗಿ ಕೊಲೆಯಾದ ಚಂದ್ರಶೇಖರ ಗುರೂಜಿ ಅವರ ದಿನದ ಆದಾಯ ಎಷ್ಟಿತ್ತು ಗೊತ್ತಾ? ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ. ಅಷ್ಟೊಂದು ಆಸ್ತಿ ಗಳಿಸಿದೆ ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾದರೆ ಅವರ ಆದಾಯ ಎಷ್ಟು ಎಂದು ಹೇಳ್ತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಚಂದ್ರಶೇಖರ್ ಗುರೂಜಿ ಅವರು ಹೇಳುತ್ತಿರುವುದು ಸರಳವಾಸ್ತು ಆದರೂ ಅವರು ಪಡೆಯುತ್ತಿರುವ ಸಂಭಾವನೆ ಅಧಿಕವಾಗಿತ್ತು. ಅದು ಸರಳವಾಗಿರಲಿಲ್ಲ. ಕಡಿಮೆಯೂ ಇರಲಿಲ್ಲ. ಒಬ್ಬರಿಗೆ ಒಂದು ಸುಳ್ಳ ವಾಸ್ತುವಿಗೆ 25ರಿಂದ 30 ಸಾವಿರ ರೂಪಾಯಿ ಪಡೆಯುತ್ತಿದ್ದರು.

Advertisements
Advertisements

ಇನ್ನು ಶ್ರೀಮಂತರಿಂದ ಲಕ್ಷ ರೂಪಾಯಿವರೆಗೂ ಪಡೆಯುತ್ತಿದ್ದರು. ಊರವರಿಗೆ ಮನೆಯ ನೆಮ್ಮದಿ ಗೋಸ್ಕರ ಸರಳವಾಸ್ತು ಹೇಳುತ್ತಿದ್ದ ಗುರೂಜಿಯವರು ತಮ್ಮ ಮನೆಯ ನೆಮ್ಮದಿಗಾಗಿ ವಾಸ್ತು ಮರೆತಿದ್ದರೇ..? ಎನ್ನುವ ಪ್ರಶ್ನೆ ಇಲ್ಲಿ ಕಾಡುತ್ತದೆ. ಏಕೆಂದರೆ ಅವರ ಮೊದಲ ಪತ್ನಿ ಮಾನಸಿಕ ನೆಮ್ಮದಿ ಇಲ್ಲದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ 2ನೇ ಪತ್ನಿಗೂ ಮಕ್ಕಳಿಲ್ಲದ ಕಾರಣ ಮೊದಲ ಪತ್ನಿಯ ಮಗಳನ್ನೇ ತನ್ನ ಮಗಳೆಂದು ಭಾವಿಸಿ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ಇತ್ತ್ ತಾಯಿಯು ಇಲ್ಲದೆ, ತಂದೆಯು ಇಲ್ಲದೆ ಮಗಳು ಅನಾಥವಾಗಿದ್ದಾಳೆ. ಮೂಲತಃ ಬಾಗಲಕೋಟ ಜಿಲ್ಲೆಯವರದ ಗುರೂಜಿ ಇಂಜಿನಿಯರಿಂಗ್ ಮುಗಿಸಿ, ಮುಂದೆ ಮುಂಬೈ ಗೆ ಹೋಗುತ್ತಾರೆ. ಅಲ್ಲಿ ಬೇರೊಬ್ಬರ ಕೈಕೆಳಗೆ ಕೆಲಸ ಮಾಡಿ ಅನುಭವ ಪಡೆದ ನಂತರ ತಾವೇ ಸ್ವತಹ ಗುತ್ತಿಗೆಗಳನ್ನು ಹಿಡಿದು ಕೆಲಸ ಮಾಡಿಸುತ್ತಾರೆ. ಹಿರಿಯರ ಸಲಹೆಯಂತೆ ವಾಸ್ತುವನ್ನು ಕಲಿಯಲು ಸಿಂಗಪುರ್ ಗೆ ತೆರಳಿದ್ದ ಗುರೂಜಿಯವರು ಕೆಲ ವರ್ಷಗಳವರೆಗೆ ಅದನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡುತ್ತಾರೆ.

ಇದಾದ ನಂತರ ಮುಂಬೈಗೆ ಮರಳಿದ ಗುರುಜಿ ಅವರು ಅಲ್ಲಿಯೇ ಒಂದು ಕಚೇರಿಯನ್ನು ಓಪನ್ ಮಾಡುತ್ತಾರೆ. ವಾಸ್ತು ದೋಷ ನಿವಾರಣೆ ಕುರಿತು ಮೊಟ್ಟಮೊದಲು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಕಚೇರಿಯನ್ನು ತೆರೆಯುತ್ತಾರೆ. ಆಗ ಜನರು ತಮ್ಮ ಮಾನಸಿಕ ನೆಮ್ಮದಿಗಾಗಿ ಗುರೂಜಿಯ ಮೊರೆಹೋಗಲು ಶುರುಮಾಡುತ್ತಾರೆ. ಅದರಂತೆ ತಮ್ಮ ಮನೆಯ ವಾಸ್ತು ವನ್ನು ಸರಿಪಡಿಸಿಕೊಂಡು ನೆಮ್ಮದಿಯಾಗಿ ಕಾಲಕಳೆದರು ಉಂಟು. ಇದಾದ ನಂತರ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಒಬ್ಬರಿಂದ 20ರಿಂದ 25 ಸಾವಿರದಿಂದ ಹಿಡಿದು ಲಕ್ಷದವರೆಗೂ ಹಣ ಪಡೆಯುತ್ತಾರೆ.

ಹೀಗೆ ಬೇರೆ ಬೇರೆ ಅವರ ಹೆಸರಿನಲ್ಲಿ ಬಂದ ಹಣದಿಂದ ಬೇನಾಮಿ ಆಸ್ತಿಯನ್ನು ಮಾಡಿಕೊಂಡು, ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆ ಯನ್ನು ನೀಡದೆ ವಂಚಿಸುತ್ತಾ ಬಂದಿದ್ದಾರೆ. ಇದೀಗ ಬೇನಾಮಿ ಅಸ್ತಿಯನ್ನು ಮರಳಿ ತಮ್ಮ ಹೆಸರಿಗೆ ಮಾಡಲು ನಿರಾಕರಿಸಿದ್ದಕ್ಕೆ ಹಲವರ ವೈಷಮ್ಯ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಮುಂದೆ ಇದೇ ಕಾರಣಕ್ಕೆ ಇವರು ಕೊಲೆ ಆದರೂ ಎಂದು ಹೇಳಲಾಗುತ್ತದೆ. ಇವರ ಒಂದು ದಿನದ ಆದಾಯ ಸುಮಾರು 30 ಲಕ್ಷ ಎಂದು ಅಂದಾಜಿಸಲಾಗಿದೆ. ಆದ್ರೆ, ಸರ್ಕಾರಕ್ಕೆ ಇದರ ತೆರಿಗೆ ನೀಡದೆ ಅಪರಾಧ ಎಸಗಿದ್ದರು ಎನ್ನಲಾಗಿದೆ.