Advertisements

ಚಂದು ಗೌಡ ಮನೆಗೆ ಬಂತು ದು’ಬಾರಿ ಕಾರು! ಬೆಲೆ ಎಷ್ಟು ಗೊತ್ತಾ ?

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ನಟರು ಕಾರ್ ಮತ್ತು ಬೈಕ್ ಖರೀದಿಸುವ ಹು’ಚ್ಚನ್ನು ಹೊಂದಿರುತ್ತಾರೆ. ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಚಂದು ಗೌಡ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಆಡಿ ಕ್ಯೂ 7 ಕಾರನ್ನು ಖರೀದಿಸುವ ಮೂಲಕ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ”ಬೋ’ರಿಂಗ್ ಕಾರುಗಳನ್ನು ಓಡಿಸಲು ಜೀವನ ಬಹಳ ಚಿಕ್ಕದು” ಎಂದು ಪೋಸ್ಟ್ ಹಾಕಿಕೊಂಡಿರುವ ಚಂದು ಗೌಡ, ”ಮನೆಗೆ ದೊಡ್ಡ ಕ್ವಾಟ್ರೊಗೆ ಸ್ವಾಗತ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Advertisements
Advertisements

ಚಂದ್ರು ಗೌಡ ಇತ್ತೀಚಿಗಷ್ಟೆ ಬಿಡುಗಡೆಯಾದ ದರ್ಶನ್ ಅವರ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೆ ರಾಬರ್ಟ್ ಸಿನಿಮಾ ಮಾರ್ಚ್ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿ ಚಂದು ಗೌಡ ವಿ’ಲನ್ ಆಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಂದ ‘ಎಟಿಎಂ’ (ಅ’ಟೆ’ಮ್ಟ್ ಟು ಮ’ರ್ಡರ್) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದರು. ಕಳೆದ ವರ್ಷ ತೆರೆಕಂಡ ‘ಕುಷ್ಕ’ ಚಿತ್ರದಲ್ಲೂ ಚಂದು ಗೌಡ ಅಭಿನಯಿಸಿದ್ದಾರೆ. ಈಗ ರಾಬರ್ಟ್ ಸಿನಿಮಾದಲ್ಲಿ ಎಂಎಲ್‌ಎ ಮಗನ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗ ಮೆಚ್ಚುಗೆಯನ್ನು ಪಡೆದಿದ್ದಾರೆ.

ಚಂದು ಗೌಡ ಅವರು ಹೊಸ ಕಾರು ಖರೀದಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಆಡಿ ಕಾರ್ ಅಂದಮೇಲೆ, ಬೆಲೆಯೂ ಸಹ ಹೆಚ್ಚು ಇರುತ್ತದೆ. ನೋಡಲು ಸಹ ತುಂಬಾ ಆಕರ್ಷಕವಾಗಿರುತ್ತದೆ. ಅಂದ್ಹಾಗೆ, ಆಡಿ ಕ್ಯೂ 7 ಕಾರಿನ ಆರಂಭಿಕ ಬೆಲೆ 69.27 ಲಕ್ಷದಿಂದ 81.18 ಲಕ್ಷದವರೆಗೂ ಇದೆ. ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಲೈಕ್ ಮಾಡಿ.