Advertisements

ರಾತ್ರಿ ನಡೆದ ಆ ಒಂದು ಮನಸ್ತಾಪದಿಂದ ರಾತ್ರೋ ರಾತ್ರಿ ಜೀವ ಕಳೆದುಕೊಂಡ ದಂಪತಿ..

Kannada News

ಗಂಡ ಹೆಂಡತಿ ಸಂಬಂಧ ಅದೊಂದು ರೀತಿ ನಂಬಿಕೆಯ ಮೇಲೆ ಬೆಸೆದ ಸಂಬಂಧವಾಗಿದೆ.. ಇಬ್ಬರೂ ಸೇರಿ ಜೀವನ ಕಟ್ಟಿಕೊಳ್ಳುವರು.. ಭವಿಷ್ಯದ ನೂರಾರು ಕನಸು ಕಾಣುವರು.. ಸುಂದರ ಸಂಸಾರ ನೆಮ್ಮದಿಯಾಗಿ ಜೀವನ ಸಾಗಿಸಬಹುದಾಗಿರುತ್ತದೆ.. ಆದರೆ ಸಣ್ಣ ಪುಟ್ಟ ಮನಸ್ತಾಪಗಳಿಂದ ಅಂತಹ ಸಂಬಂಧ ನಾನಾ ರೀತಿಯಲ್ಲಿ ಕೊನೆಗೊಂಡುಬಿಡುತ್ತದೆ.. ಹೌದು ಅಂತಹುದೇ ಒಂದು ಮನಕಲಕುವ ಘಟನೆ ಧಾರವಾಡದಲ್ಲಿ ನಡೆದಿದ್ದು ಅಕ್ಕಪಕ್ಕದವರು ಈ ಗಂಡ ಹೆಂಡತಿಯ ಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ..

Advertisements
Advertisements

ಹೌದು ಧಾರಾವಾಡದಲ್ಲಿ ಗಂಡ ಹೆಂಡತಿಯ ನಡುವೆ ನಡೆದ ಸಣ್ಣ ವಿಚಾರವೊಂದಕ್ಕೆ ಇಬ್ಬರೂ ಸಹ ರಾತ್ರೋ ರಾತ್ರಿ ಜೀವ ಕಳೆದುಕೊಂಡಿದ್ದು ಮನಕಲಕುವಂತಿದೆ.. ಹೌದು ಈಕೆಯ ಹೆಸರು ಮನಿಷಾ.. ಈಕೆಯ ಗಂಡನ ಹೆಸರು ಚಟ್ಟು ಗದಗವಾಲೆ.. ಇಬ್ಬರು ಕೆಲ ವರ್ಷದ ಹಿಂದೆ ಮದುವೆಯಾಗಿದ್ದರು.. ಧಾರವಾಡ ಜಿಲ್ಲೆಯ ಹೊರವಲಯದ ಗಣೇಶನಗರದ ಗಳವಿದಡ್ಡಿಯಲ್ಲಿ ಈ ದಂಪತಿ ವಾಸವಿದ್ದರು.. ಇವರಿಗೆ ಮಕ್ಕಳಿರುವ ವಿಚಾರ ವರದಿಯಾಗಿಲ್ಲ.. ಈ ಇಬ್ಬರು ಗಂಡ ಹೆಂಡತಿ ಅನ್ಯೂನ್ಯವಾಗಿಯೇ ಇದ್ದರು.. ಇಬ್ಬರು ಸೇರಿ ಒಳ್ಳೆಯ ಜೀವನ ಕಟ್ಟಿಕೊಳ್ಳುವ ಸಲುವಾಗಿ ಗಂಡ ಹೆಂಡತಿ ಇಬ್ಬರೂ ಸಹ ದುಡಿಯುತ್ತಿದ್ದರು..

ಹೌದು ಮನಿಷಾ ಹಾಗೂ ಚಟ್ಟು ಗದಗವಾಲೆ ಇಬ್ಬರೂ ಸಹ ತಾವಿದ್ದ ಊರನ್ನು ಬಿಟ್ಟು ಬೇರೆ ಬೇರೆ ಊರುಗಳಲ್ಲಿ ಹೆಚ್ಚು ಸಂಬಳ ಸಿಗುವ ಜಾಗಗಳಲ್ಲಿ ಕೆಲಸ ಮಾಡಲು ಹೋಗುತ್ತಿದ್ದರು.. ರಜೆ ಸಿಕ್ಕಾಗ ಮತ್ತೆ ಮರಳಿ ತಮ್ಮ ಊರು ಧಾರವಾಡದ ಗಣೇಶನಗರದ ಗಳವಿದಡ್ಡಿಗೆ ಮರಳುತ್ತಿದ್ದರು.. ಅದೇ ರೀತಿ ಈ ದಂಪತಿ ಕೆಲ ತಿಂಗಳುಗಳ ಹಿಂದೆ ಕೆಲಸ ಹುಡುಕಿ ಗೋವಾಗೆ ತೆರಳಿದ್ದರು.. ಅಲ್ಲಿಯೇ ಇಬ್ಬರಿಗೂ ಒಳ್ಳೆಯ ಕೆಲಸವೂ ಸಿಕ್ಕಿತ್ತು.. ಕೈತುಂಬಾ ದುಡಿಯುತ್ತಿದ್ದರು.. ಮುಂದಿನ ಜೀವನಕ್ಕೆ ಒಂದಿಷ್ಟು ಕಾಸನ್ನು ಕೂಡಿಟ್ಟುಕೊಳ್ಳುತ್ತಿದ್ದರು..

ಇನ್ನು ನಾಲ್ಕು ದಿನದ ಹಿಂದಷ್ಟೇ ಕೆಲಸಕ್ಕೆಂದು ಗೋವಾಗೆ ಹೋಹಿದ್ದ ಮನಿಷಾ ಹಾಗೂಚಟ್ಟು ಗದಗವಾಲೆ ಧಾರವಾಡಕ್ಕೆ ಮರಳಿದ್ದರು.. ಕೆಲ ದಿನಗಳ ರಜೆಯ ಬಳಿಕ ಮತ್ತೆ ಗೋವಾಗೆ ತೆರಳಬೇಕಿತ್ತು.. ಆದರೆ ಈ ರಜೆಯ ನಡುವೆ ಈ ದಂಪತಿಯೇ ಇಲ್ಲವಾಗಿ ಹೋದರು.. ಹೌದು ಮನಿಷಾ ಹಾಗೂ ಚಟ್ಟು ಗದಗದಲೆ ನಿನ್ನೆ ರಾತ್ರಿಯೇ ಇಬ್ಬರೂ ಸಹ ಜೀವ ಕಳೆದುಕೊಂಡು ಬಿಟ್ಟರು.. ಹೌದು ನಿನ್ನೆ ಎಂದಿನಂತೆ ಗಂಡ ಹೆಂಡತಿ ಇಬ್ಬರೂ ಸಹ ಸಂತೋಷವಾಗಿದ್ದರು.. ಆದರೆ ರಾತ್ರಿ ಇಬ್ಬರ ನಡುವೆ ಸಣ್ಣ ಮನಸ್ತಾಪವೊಂದು ಮೂಡಿದ್ದು ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳವಾಗಿದೆ..

ಜಗಳ ಅತಿರೇಕವಾಗಿ ಇತ್ತ ಚಟ್ಟು ತನ್ನ ಪತ್ನಿ ಮನಿಷಾಳ ಮೇಲೆ ಕೈಮಾಡಿದ್ದಾನೆ‌.. ಆ ತಕ್ಷಣ ಸ್ಥಳದಲ್ಲಿಯೇ ಮನಿಷಾ ಜೀವ ಕಳೆದುಕೊಂಡಿದ್ದು ಇತ್ತ ಚಟ್ಟು ಹೆಂಡತಿಯ ಈ ಸ್ಥಿತಿಗೆ ತಾನೇ ಕಾರಣವೆಂದು ಗಾಬರಿಗೊಂಡು ಬಹಳಷ್ಟು ಸಮಯ ಆಲೋಚಿಸಿ ನಂತರ ಆತನೂ ಸಹ ಮಾಡಿದ ತಪ್ಪಿಗೆ ಶಿಕ್ಷೆಯಾಗಲಿ ಎಂದು ನಿರ್ಧರಿಸಿಬಿಟ್ಟಿದ್ದಾನೆ.. ಹೌದು ಚಟ್ಟು ಗದಗದಲೆ ಕೂಡ ಅದೇ ರಾತ್ರಿ ತನ್ನ ಪತ್ನಿಯ ಜೊತೆ ತಾನೂ ಸಹ ಜೀವ ಕಳೆದುಕೊಂಡುಬಿಟ್ಟಿದ್ದಾನೆ.. ರಾತ್ರಿಯಷ್ಟೇ ಸಂತೋಷವಾಗಿದ್ದ ದಂಪತಿ ಬೆಳಗೆದ್ದರೆ ಜೀವ ಕಳೆದುಕೊಂಡ ಸ್ಥಿತಿಯಲ್ಲಿದ್ದದ್ದ ಕಂಡು ಅಕ್ಕ ಪಕ್ಕದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.. ಆ ಸಂಸಾರದಲ್ಲಿ ಏನೂ ಕೊರತೆ ಇರಲಿಲ್ಲ.. ಸುಂದರ ಜೀವನ.. ಆದರೆ ಸಣ್ಣ ಮನಸ್ತಾಪದಿಂದ ಒಂದು ಸಂಸಾರವೇ ಇಲ್ಲವಾಗಿ ಹೋಯ್ತು..

ಯಾರೇ ಆಗಲಿ ಮನುಷ್ಯ ಎಂದ ಮೇಲೆ ಮನಸ್ತಾಪಗಳು ಮೂಡುವುದು ಸಾಮಾನ್ಯ.. ಹಾಗೆಯೇ ಕೋಪ ಬರುವುದು ಸಾಮಾನ್ಯ.. ಆದರೆ ಆ ಸಮಯದಲ್ಲಿ ಬಂದ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟರೆ ಹೀಗೆ ಜೀವನವೇ ಮುಕ್ತಾಯ ಆಗುವ ಹಂತಕ್ಕೆ ಬಂದು ನಿಂತು ಬಿಡುತ್ತದೆ.. ಯಾರೇ ಆಗಲಿ ಅದರಲ್ಲಿಯೂ ಗಂಡ ಹೆಂಡತಿ‌ ನಡುವೆ ಮೂಡುವ ಮನಸ್ತಾಪ ಆ ಕೋಪದ ಸಮಯದಲ್ಲಿ ಸ್ವಲ್ಪ ತಾಳ್ಮೆ ವಹಿಸಿ ಬಿಡಿ.. ಆ ಕ್ಷಣ ಕಳೆದು ಹೋದರೆ.. ಕೋಪವೂ ಸಹ ತಾನಾಗಿಯೇ ಕಡಿಮೆಯಾಗಿ ಬಿಡುತ್ತದೆ.. ಪ್ರೀತಿ ತೋರಿದ ಸಾವಿರ ಕ್ಷಣಗಳನ್ನು ಕೋಪವೆಂಬ ಆ ಒಂದು ಕ್ಷಣ ಮರೆಸದಿರಲಿ..