Advertisements

ಆಟೋದಲ್ಲೇ ತನ್ನ ಹಣ, ಬಂಗಾರ ಇರುವ ಬ್ಯಾಗನ್ನು ಬಿಟ್ಟ ಮಹಿಳೆ.. ನಂತರ ಆಟೋ ಡ್ರೈವರ್ ಮಾಡಿದ್ದು ತಿಳಿದರೆ ಶಾ’ಕ್ ಆಗ್ತೀರಾ..!

Kannada News

ನಮಸ್ತೆ ಸ್ನೇಹಿತರೆ, ನಾವು ನಗರಗಳಲ್ಲಿ ಬೇರೆ ಸ್ಥಳಗಳಿಗೆ ಹೋಗಲು ಸಾಮಾನ್ಯವಾಗಿ ಆಟೋಗಳನ್ನು ಹೆಚ್ಚಾಗಿ ಬಳಸುತ್ತೇವೆ.. ಇನ್ನೂ ಕೆಲವು ಆಟೋ ಚಾಲಕರು ಕೆಲವೊಂದು ಏರಿಯಾಗಳಿಗೆ ಹೋಗಲು ಮೀಟರ್ ಮೇಲೆ ಒನ್ ಟು ಡಬಲ್ ಹಣ ಕೇಳುತ್ತಾರೆ. ಹಾಗೂ ಕೆಲವು ಆಟೋ ಚಾಲಕರಂತೂ ಪ್ರಯಾಣಿಕರಿಗೆ ತುಂಬಾ ಕಿ’ರಿಕಿರಿ ಮಾಡುತ್ತಾರೆ.. ಇನ್ನೂ ಕೆಲವೊಂದು ಸಲ ಅನಿವಾರ್ಯವಾಗಿ ಅವರು ಕೇಳಿದಷ್ಟು ಹಣ ಕೊಟ್ಟು ನಾವು ಆಟೋದಲ್ಲಿ ಪ್ರಯಾಣಿಸಬೇಕಾಗುತ್ತದೆ. ಆದರೆ ಎಲ್ಲಾ ಆಟೋ ಡ್ರೈವರ್ ಗಳು ಸಹ ಒಂದೇ ರೀತಿ ಇರಲು ಸಾಧ್ಯವಿಲ್ಲ.. ಆಟೋ ಡ್ರೈವರ್ ಗಳಲ್ಲಿ ಕೆಲವರು ತುಂಬಾ ಒಳ್ಳೆಯ ಮನಸ್ಸು ಇರುವವರು ಕೂಡ ಕಂಡುಬರುತ್ತಾರೆ.

Advertisements
Advertisements

ಇನ್ನೂ ಈಗ ತಿಳಿಸುವ ಈ ಘ’ಟನೆಯಲ್ಲಿ ಆಟೋ ಡ್ರೈವರ್ ಬಗ್ಗೆ ಕೇಳಿದರೆ ಈ ಕಾಲದಲ್ಲಿಯೂ ಇಂತಹ ಒಳ್ಳೆಯವರು ಇದ್ದಾರಾ ಎಂದು ಪ್ರಶ್ನೆ ಮೂಡುತ್ತದೆ. ಇನ್ನೂ ಈ ಘ’ಟನೆ ನಡೆದಿರುವುದು ಚೆನ್ನೈನಲ್ಲಿ.. ಮಾದವಿ ಎನ್ನುವ ಹುಡುಗಿ ತಮ್ಮ ಊರಿನಿಂದ ಬಂದು ಚೆನ್ನೈ ಬಸ್ ಸ್ಟಾಪ್ ನಲ್ಲಿ ಇಳಿದು. ನಂತರ ಒಂದು ಆಟೋವನ್ನು ಹಿಡಿದು ತನ್ನ ಮನೆಯ ಕಡೆಗೆ ಪ್ರಯಾಣಿಸುತ್ತಾಳೆ… ರೂಮ್ ಗೆ ಹೋದ ತಕ್ಷಣ ಸ್ವಲ್ಪ ರಿಲ್ಯಾಕ್ಸ್ ಆದ ಈ ಹುಡುಗಿ ತನ್ನ ಮೋಬೈಲ್ ಪೋನ್ ಅನ್ನು ಹುಡುಕಾಡುತ್ತಾಳೆ. ಆದರೆ ಅದು ಹ್ಯಾಂಡ್‌ ಬ್ಯಾಗ್ ನಲ್ಲಿ ಇರಬೇಕಲ್ವಾ ಅಂತ ಮನೆಯೆಲ್ಲಾ ಹುಡುಕುತ್ತಾಳೆ.. ಆದರೆ ಹ್ಯಾಂಡ್ ಬ್ಯಾಗ್ ಮಾತ್ರ ಎಲ್ಲಿಯೂ ಕೂಡ ಕಾಣಿಸುವುದಿಲ್ಲ.

ಏನು ಮಾಡಬೇಕು ಎಂದು ತಿಳಿಯದೇ ತುಂಬಾ ಬೇಜಾರಿನಿಂದ ಹುಡುಗಿ ಕಣ್ಣೀರು ಸುರಿಸುತ್ತಾ ಕೂರುತ್ತಾಳೆ.. ಆ ಹ್ಯಾಂಡ್ ಬ್ಯಾಗ್ ನಲ್ಲಿ ಕೇವಲ ಮೋಬೈಲ್ ಅಲ್ಲದೇ ಹಣ, ಚಿನ್ನದ ಸರ ಹಾಗೂ ಮುಖ್ಯವಾದ ಕೆಲವು ಡಾಕ್ಯುಮೆಂಟ್ ಗಳು ಕೂಡ ಇರುತ್ತವೆ. ಅಯ್ಯೋ ಈಗೇನು ಮಾಡುವುದು ದೇವರೆ ಎಂದು ಜ್ಞಾಪಿಸಿ ಕೊಳ್ಳುವಾಗ ಯಾರೋ ಬಂದು ಮನೆಯ ಬಾಗಿಲನ್ನು ತಟ್ಟುತ್ತಾರೆ. ಆಗ ಮಾಧವಿ ಬಂದು ಬಾಗಿಲನ್ನು ತೆಗೆಯುತ್ತಾಳೆ.. ಆಗ ಎದುರಿಗೆ ಆಟೋ ಡ್ರೈವರ್ ಬಂದು ನಿಂತಿರುತ್ತಾನೆ.. ಆಗ ಮಾಧವಿ ಆಟೋ ಡ್ರೈವರ್ ಅನ್ನು ನೋಡಿ ಏನು ವಿಷಯ, ನೀನು ಯಾಕೆ ಮತ್ತೆ ಇಲ್ಲಿಗೆ ಬಂದೆ ಎಂದು ಪ್ರಶ್ನಿಸುತ್ತಾಳೆ.

ಆಗ ಆ ಆಟೋ ಡ್ರೈವರ್ ತಗೊಳ್ಳಿ ಮೇಡಂ ನಿಮ್ಮ ಹ್ಯಾಂಡ್ ಬ್ಯಾಗ್ ಆಟೋದಲ್ಲಿಯೇ ಮರೆತುಬಿಟ್ಟಿದ್ದೀರಾ ಎಂದು ಆಕೆಗೆ ನೀಡುತ್ತಾನೆ.. ಹ್ಯಾಂಡ್ ಬ್ಯಾಗ್ ಪಡೆದುಕೊಂಡ ಮಾಧವಿಗೆ ತುಂಬಾ ಆನಂದವಾಗುತ್ತದೆ. ನಂತರ ಆ ಆಟೋ ಡ್ರೈವರ್ ಇನ್ನು ಮುಂದೆ ಈ ರೀತಿ ವಸ್ತುಗಳನ್ನು ಮರೆಯಬೇಡಿ. ನಿಮ್ಮ ವಸ್ತುಗಳ ಮೇಲೆ ನಿಗ ಇರಲಿ ತಾಯಿ ಬಹಳ ಹುಷಾರಾಗಿರಿ ಎಂದು ಹೇಳಿ ಹೊರಡುತ್ತಾನೆ. ಆ ಹುಡುಗಿ ಅಂಕಲ್ ಸ್ವಲ್ಪ ಇರಿ ತುಂಬಾ ಥ್ಯಾಂಕ್ಸ್ ಎಂದು ಧನ್ಯವಾದ ತಿಳಿಸುತ್ತಾ.. ಆಟೋ ಡ್ರೈವರ್ ಕಾಲಿಗೆ ಬೀಳುತ್ತಾಳೆ.. ಇಂತಹ ಪ್ರಾಮಾಣಿಕ ಆಟೋ ಡ್ರೈವರ್ ಗಳು ಕೂಡ ನಮ್ಮ ಮಧ್ಯೆ ಇದ್ದಾರೆ ಎಂಬುದಕ್ಕೆ ಈ ಘ’ಟನೆಯೇ ಸಾಕ್ಷಿ.. ಇದರ ಬಗ್ಗೆ ನೀವೇನಂತೀರಾ ಸ್ನೇಹಿತರೆ..