Advertisements

ತಲೆ ಬುಡ ಇಲ್ಲದ ಸೀರಿಯಲ್ ಗಳ ನಡುವೆ ಮಾಸ್ಟರ್ ಫೀಸ್ ಎನಿಸಿಕೊಂಡ ಈ ಧಾರವಾಹಿ ಚಿಕ್ಕೆಜಮಾನಿಯ ಈ ನಟ ನಿಜಕ್ಕೂ ಯಾರು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೆ ಕಿರುತೆರೆ ಧಾರವಾಹಿಗಳಾಗಲಿ ಅಥವಾ ರಿಯಾಲಿಟಿ ಶೋ ಗಳಾಗಲಿ ಅದರ ಮೂಲ ಉದ್ದೇಶ ಮನರಂಜನೆಯೇ ಅಥವಾ ವಾಹಿನಿಯವರಿಗೆ ಮನರಂಜನೆಯ ಜೊತೆಗೆ ರೇಟಿಂಗ್ ಸಹ ಅಷ್ಟೇ ಮುಖ್ಯ ಅನ್ನೋದು ಸತ್ಯ
ಆದರೆ ಏನೇ ಪ್ರಯತ್ನಗಳಾಗಲಿ ಅಥವಾ ಮತ್ತೆ ಇನ್ನೇನು ಆಗಲಿ ಜನರ ಮನಸ್ಸಿನಲ್ಲಿ ಕೆಲವೊಂದು ಧಾರವಾಹಿಗಳು ವಿಶೇಷ ಸ್ಥಾನವನ್ನು ಮಾಡಿಕೊಳ್ಳುತ್ತವೇ ಅಂತಹ ಧಾರವಾಹಿಗಳಲ್ಲಿ ಮಾಸ್ಟರ್ ಪೀಸ್ ಎನಿಸಿಕೊಂಡ ಧಾರಾವಾಹಿ ಚಿಕ್ಕ ಯಜಮಾನಿ ಹೌದು ಮೂಲ ಹಿಂದಿಯಲ್ಲಿ ಪ್ರಸಾರವಾದ ಈ ಧಾರಾವಾಹಿ ಕಳೆದ ವರ್ಷದಿಂದ ಕನ್ನಡದಲ್ಲಿಯೂ ಪ್ರಸಾರವಾಗುತ್ತಿದೆ
ನಿಜಕ್ಕೂ ಎಲ್ಲಿಯೂ ಎಂದು ಸಹ ಅನಾವಶ್ಯಕ ವಾದದ್ದು ಎಂದು ಹುಡುಕಿದರು ಏನು ಸಿಗದ ಧಾರಾವಾಹಿ ಆಗಿದೆ ಹೌದು ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಕಥೆಯಂತೆ ಧಾರಾವಾಹಿ ಮೂಡಿಬಂದಿದ್ದು ಲಂಡನ್ ನಲ್ಲಿ ಬ್ಯಾರಿಸ್ಟರ್ ಆಗಿ ಬರುವ ಹೀರೋ ಅನಿರುದ್ಧ್ ರಾಯ್ ಚೌದ್ರಿ ಇತ್ತ ಎಳವಯಸ್ಸಿಗೆ ಮೂಢನಂಬಿಕೆಗಳಿಗೆ ಜೀವ ಕಳೆದುಕೊಳ್ಳುತ್ತಿದ್ದ ಪುಟ್ಟ ಭೂಮಿಕ ಅವಳನ್ನ ಒಂದು ಅನಿಷ್ಟ ಪದ್ಧತಿಯಿಂದ ರಕ್ಷಣೆ ಮಾಡಲು ಬೇರೆ ದಾರಿಯೇ ಇಲ್ಲದೆ ಬಾಲ್ಯವಿವಾಹ ಆಗುವುದು

Advertisements
Advertisements

ಆ ರೀತಿ ಮದುವೆ ಆದರೂ ಸಹ ಭೂಮಿಕಾಳನ್ನ ತನ್ನ ಜವಾಬ್ದಾರಿಯಂದು ಮಾತ್ರವೇ ಅನಿರುದ್ಧ್ ಭಾವಿಸಿ ಸಾಕಷ್ಟು ಸವಾಲುಗಳನ್ನು ದಾಟಿ ಆಕೆಯನ್ನ ಲಂಡನ್ ಗೆ ಕಳಿಸಿ ಬ್ಯಾರಿಸ್ಟರ್ ಮಾಡಿಸೋದು ಇತ್ತ ಸದಾ ಪ್ರೀತಿ ವಿಶ್ವಾಸದಿಂದ ಇದ್ದ ಅನಿರುದ್ಧ್ ಎರಡು ಊರುಗಳ ನಡುವಿನ ವೈಷಮಿಯಾ ದಿಂದಾಗಿ ತಾನು ಸಹ ದ್ವೇಷದ ಆದಿ ಹಿಡಿಯೋದು ನಂತರ ಭೂಮಿಕ ಮರಳಿ ಬಂದು ಪ್ರೀತಿಯಿಂದಲೇ ದ್ವೇಷವನ್ನು ಅಳಿಸಬೇಕು ಅನ್ನೋದು ಆಹಾ ನಿಜಕ್ಕೂ ಈ ಧಾರವಾಹಿ ನೋಡುತ್ತಿದ್ದರೆ ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೂ ಮುದ ನೀಡುತ್ತದೆ ಇನ್ನು ಅನಿರುದ್ಧ್ ಪಾತ್ರಕ್ಕೆ ಜೀವ ತುಂಬಿ ನಿಜಕ್ಕೂ ಈ ಕಥೆ ನಡೆದಿದೆ ಅದನ್ನೇ ನಾವು ನೋಡುತ್ತಿದ್ದೇವೆ ಎನ್ನುವಂತೆ ಅಭಿನಯಿಸಿರುವ ನಟ ಪ್ರವಿಷ್ಟ್ ನಿಜಕ್ಕೂ ದೊಡ್ಡ ಮಟ್ಟದ ಪ್ರಶಂಸೆಗೆ ಅರ್ಹರಾಗಿದ್ದಾರೆ

ಅಷ್ಟಕ್ಕೂ ಈ ನಟ ಯಾರು ಅಂತ ತಿಳಿದರೆ ಆಶ್ಚರ್ಯವಾಗಬಹುದು ಹೌದು ಈತ ಈ ಹಿಂದೆ ಕನ್ನಡದಲ್ಲಿ ಡಬ್ ಆದ ಮಹಾಭಾರತ ಧಾರಾವಾಹಿಯಲ್ಲಿ ಉತ್ತರ ಕುಮಾರನ ಪಾತ್ರ ಮಾಡಿದ ಆ ಸಣ್ಣ ಹುಡುಗನೇ ಅಷ್ಟೇ ಅಲ್ಲದೆ ಸೀತೆಯ ರಾಮ ಧಾರವಾಹಿಯಲ್ಲಿ ಬಾಲ ಭರತನ ಪಾತ್ರದಲ್ಲಿ ಕಾಣಿಸಿಕೊಂಡ ನಟನು ಈತನೇ ನಿಜಕ್ಕೂ ಅನಿರುದ್ಧ್ ರಾಯ್ ಚೌದ್ರಿ ಪಾತ್ರದ ಮೂಲಕ ಸಮಾಜಕ್ಕೆ ಸಾಕಷ್ಟು ಸಂದೇಶ ನೀಡಿದ ನಟ ಅಂದ್ರೆ ತಪ್ಪಾಗಲಾರದು ಕಥೆ ಬರೆದ ಹಾಗೂ ನಿರ್ದೇಶನ ಮಾಡಿದವರಿಗೆ ಹೆಚ್ಚು ಪ್ರಶಂಸೆ ನೀಡಬೇಕಾದರೂ ಸಹ ಆ ಪಾತ್ರಕ್ಕೆ ಜೀವ ತುಂಬಿದ ಅನಿರುದ್ಧ್ ಎಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನ ಮಾಡಿಕೊಂಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..