ನಮಸ್ಕಾರ ವೀಕ್ಷಕರೆ ನಟ ಚಿರಂಜೀವಿ ಸರ್ಜಾ ಅವರು ನಿಧನರಾಗಿ ಇಂದಿಗೆ ಎರಡು ವರ್ಷಗಳಾಗಿದೆ ಚಿರಂಜೀವಿ ಸರ್ಜಾ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು ಎಲ್ಲರನ್ನೂ ಪ್ರೀತಿಸುವ ಗುಣ ಅವರದ್ದು ಇಂದು ಚಿರು ವರ್ಷದ ಪುಣ್ಯತಿಥಿ ದಿನ ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಚಿರಂಜೀವಿ ಸರ್ಜಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಅವರನ್ನು ಸ್ಮರಿಸಿಕೊಂಡಿದ್ದಾರೆ ಇನ್ನೂ ಎಲ್ಲರಿಗೂ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿರಂಜೀವಿ ಸರ್ಜಾ ಕುಟುಂಬಕ್ಕೆ ತುಂಬಾನೇ ನಂಟು ಚಿರು ಅವರ ಸಿನಿಮಾಗಳಿಗೆ ಡಿ ಬಾಸ್ ದರ್ಶನ್ ಅವರು ಮುಂದೆ ನಿಂತು ಸಪೋರ್ಟ್ ಮಾಡಿದ್ದರು ಅಷ್ಟೇ ಅಲ್ಲದೆ ಚಿರು ಪತ್ನಿ ಮೇಘನಾ ಅವರ ಜೊತೆ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದರು ಚಿರು ಮೇಘನಾ ರಾಜ್ ಅವರಿಗೆ ಮುದ್ದಾದ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿದರು ತುಂಬಾ ಆತ್ಮೀಯತೆಯಿಂದ ಇದ್ದ ಚಿರು ದರ್ಶನ್ ಅವರ ಸ್ನೇಹ ತುಂಬಾ ದಿನ ಉಳಿಲಿಲ್ಲ ಚಿರು ಅಗಲಿಕೆಯ ಸುದ್ದಿ ಕೇಳಿ ಡಿ ಬಾಸ್ ದರ್ಶನ್ ಆಘಾತಗೊಂಡಿದ್ದರು,

ಚಿರಂಜೀವಿ ಸರ್ಜಾ ನಿಧನರಾದಾಗ ಸ್ವತಃ ದರ್ಶನ್ ಅವರೇ ಮುಂದೆ ನಿಂತುಕೊಂಡು ಚಿರು ಅವರಿಗೆ ಹೆಗಲು ಕೊಟ್ಟು ಅಂತ್ಯಕ್ರಿಯೆ ನಡೆಸಿದ್ದರು ಇದೀಗ ಚಿರು ಅಗಲಿ ಎರಡು ವರ್ಷಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಚಿರಂಜೀವಿ ಸರ್ಜಾ ಅವರನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಸರ್ಜಾ ಕುಟುಂಬದವರೆಲ್ಲರೂ ಸೇರಿ ಚಿರು ಎರಡನೆಯ ವರ್ಷದ ಪುಣ್ಯತಿಥಿಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಕೇವಲ ಕುಟುಂಬದ ಸದಸ್ಯರು ಮಾತ್ರ ಸಮಾಧಿ ಬಳಿ ತೆರಳಿ ಪೂಜೆಯನ್ನು ಸಲ್ಲಿಸಿದ್ದಾರೆ.. ಸಾವಿರಾರು ಜನಕ್ಕೆ ಅನ್ನದಾನ ಮಾಡಿದ್ದಾರೆ ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸ್ನೇಹಿತರ ಜೊತೆ ಚಿರು ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ ಮೇಘನಾ ರಾಜ್ ಅವರಿಗೆ ಕೆಲವು ದೈರ್ಯದ ಮಾತುಗಳನ್ನು ಹೇಳಿದ್ದಾರೆ ಅಲ್ಲದೆ ಜೂನಿಯರ್ ಚಿರುಗಾಗಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ

ನಂತರ ಚಿರು ಬಗ್ಗೆ ಟ್ವೀಟ್ ಮಾಡಿರುವ ದರ್ಶನ್ ಅವರು ನೀನು ಯಾವಾಗಲೂ ನೆನಪಿನಲ್ಲಿ ಇರುತ್ತೀಯ ನನ್ನ ಆತ್ಮೀಯ ಸ್ನೇಹಿತ ಅಂತ ಬರೆದುಕೊಂಡಿದ್ದಾರೆ ಚಿರು ಜೊತೆಗಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ ದರ್ಶನ್ ಅವರು ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಅವರನ್ನು ಬೇಟಿ ಮಾಡಿ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ ಅಷ್ಟೇ ಅಲ್ಲದೆ ಚಿರುವಿನ ಕೊನೆಯ ಚಿತ್ರ ರಾಜಮಾರ್ತಾಂಡ ಸಿನಿಮಾಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ತುಂಬಾನೇ ಅದ್ದೂರಿಯಾಗಿ ರಿಲೀಸ್ ಮಾಡೋಣ ಎನ್ನುವ ಮಾತುಗಳನ್ನು ಡಿ ಬಾಸ್ ಹಾಡಿದ್ದಾರೆ ಕಷ್ಟ ಅಂದರೆ ಸಾಕು ಕೂಡಲೇ ಸ್ಪಂದಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಗುಣದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..