Advertisements

ಮದ್ವೆಯಾಗಿ 3 ತಿಂಗ್ಳಿಗೆ ಗಂಡನಿಂದ ಈ ನಟಿಗೆ ಆಗಿದ್ದೇನು ನೋಡಿ! ನರಕ ಕಂಡ ನಟಿ..

Kannada News

ಚೈತ್ರ ಹಳ್ಳಿಕೆರೆ ಈ ಹಿಂದೆ ಬಿಗ್ ಬಾಸ್ ಸಿಟಿಯಲ್ಲಿ ಸುದ್ದಿಯಾಗಿದ್ದರು. ಇವರು ಮೊದಲು ಮಾಡಲ್ ಆಗಿದ್ದವರು. ತಮಿಳಿನ ವೆಲ್ಟನ್ ಚಿತ್ರದಲ್ಲಿ ಮೊದಲ ಬಾರಿಗೆ ಮಿಂಚಿ, ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ನಂತರ ಸ್ಯಾಂಡಲ್ ವುಡ್ ಗೆ ಬಂದ ಚೈತ್ರ ಖುಷಿ ಎನ್ನುವ ಚಿತ್ರದಲ್ಲಿ ನಟಿಸಿದರು. ಆದ್ರೆ ಕೆಲ ಚಿತ್ರಗಳ ನಂತರ ಈ ನಟಿ ಸಿನಿಮಾ ಲೋಕದಿಂದಲೇ ದೂರಸರಿದರು. ಯಾಕೆ ಎಂದು ಲೇಖನದಲ್ಲಿ ಉತ್ತರವಿದೆ. ಖುಷಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಚೈತ್ರ ಹಳ್ಳಿಕೆರಿ ಕೆಲವೇ ಸಮಯದಲ್ಲಿ ಸೂಪರ್ ಹಿಟ್ ಹೀರೋಯಿನ್ ಆಗಿದ್ದರು. ಆಗಿನ ಹೆಸರಾಂತ ನಟಿಯರಲ್ಲಿ ಇವರ ಹೆಸರು ಕೂಡ ಇತ್ತು. ಇವರಿಗೆ ಅಪಾರ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ‘ಗೌಡ್ರು’, ‘ಗುನ್ನಾ’, ‘ಶಿಷ್ಯ’, ಚಿತ್ರಗಳು ಇವರಿಗೆ ಹೆಸರಿನ ಜೊತೆ ಕೀರ್ತಿಯನ್ನು ಸಹ ತಂದುಕೊಟ್ಟಿದ್ದವು. ಕುಟುಂಬದಿಂದ ಅನುಕೂಲಸ್ಥ ಆಗಿದ್ದ ಚೈತ್ರ ಹಳ್ಳಿಕೆರಿ ಈ ಸಿನಿಮಾ ರಂಗದಿಂದ ದೂರ ಸರಿದಿದ್ದು ಪತಿಗಾಗಿ.

Advertisements
Advertisements

ಹೌದು ಚೈತ್ರ ಬಾಲಾಜಿಯ ರಜಪೂತ್ ಎಂಬ ಮೈಸೂರಿನ ಮೂಲದ ಬಿಸಿನೆಸ್ ಮ್ಯಾನ್ ನನ್ನು ಅಪಾರವಾಗಿ ಪ್ರೀತಿಸುತ್ತಿದ್ದಳು. ಆತ ಒಬ್ಬ ಆಗರ್ಭ ಶ್ರೀಮಂತನಾಗಿದ್ದ. ಈ ಇಬ್ಬರೂ ಪರಸ್ಪರ ಪ್ರೀತಿಸಿದ ನಂತರ ವಿವಾಹವಾಗುತ್ತಾರೆ. ಅದು ಒಂದು ಶರತ್ತಿನ ಅನ್ವಯ. ಹೌದು ಓದುಗರೆ.. ಬಾಲಾಜಿಯವರು ಚೈತ್ರಾಗೆ ವಿವಾಹದ ನಂತರ ಸಿನಿಮಾದಲ್ಲಿ ನಟಿಸುವಂತಿಲ್ಲ ಎಂಬ ಷರತ್ತು ಹಾಕಿದರಂತೆ. ಇದಕ್ಕೆ ಚೈತ್ರ ಒಪ್ಪಿಗೆ ನೀಡಿದ್ದಳು. ಆದ್ರೆ ಈಕೆಯ ಮನೆಯವರಿಗೆ ಈ ವಿವಾಹ ಇಷ್ಟವಿರಲಿಲ್ಲ ಅತೀ ಶ್ರೀಮಂತರ ಸಂಬಂಧ ಬೇಡ ಎಂದಿದ್ದರು. ಆದ್ರೂ ಸಹ ಚೈತ್ರ ಅವರ ವಿರೋಧದ ನಡುವೆ 2006ರಲ್ಲಿ ಬಾಲಾಜಿ ಅವರೊಂದಿಗೆ ವಿವಾಹ ಮಾಡಿಕೊಂಡಿದ್ದಳು. ಇದಾದ ನಂತರ ತಮ್ಮ ಮಾಡ್ಲಿಂಗ್ ಗೆ ಮತ್ತು ಸಿನಿಮಾರಂಗಕ್ಕೆ ಗುಡ್ ಬಾಯ್ ಹೇಳಿದಳು. ಇವರ ಸಂಸಾರ ಸುಗಮವಾಗಿ ಸಾಗಿತ್ತು. ಇದೀಗ ತೀರ ಇತ್ತೀಚಿಗೆ ಪತಿ ಬಾಲಾಜಿ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾಳೆ.


ವಿವಾಹವಾದ ಮೂರು ತಿಂಗಳು ಮಾತ್ರ ನಾವಿಬ್ಬರೂ ಸುಖವಾಗಿ ಸಂಸಾರ ಮಾಡಿದ್ದೇವೆ. ಇದಾದ ನಂತರ ನನ್ನ ಗಂಡ ನನಗೆ ಹಿಂಸೆ ಮಾಡುತ್ತಿದ್ದಾರೆ, ಪ್ರತಿದಿನ ಹೊಡೆಯುತ್ತಿದ್ದಾರೆ, ಕಾರಿನಲ್ಲಿ ಮನೆಯಲ್ಲಿ ಎಲ್ಲ ಕಡೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಳು. ಇದೇ ಕಾರಣದಿಂದಲೇ ಚೈತ್ರ ಕೆಲವು ಸಮಯ ತವರಿನಲ್ಲಿಯೇ ಇದ್ದಳು. ಆದ್ರೆ ಪತಿ ಬಾಲಾಜಿ ಇನ್ನೊಮ್ಮೆ ಹೀಗೆ ಆಗುವುದಿಲ್ಲ ಎಂದು ಮನೆಯವರನ್ನು ಒಪ್ಪಿಸಿ ಚೈತ್ರಾಳನ್ನು ಮತ್ತೆ ತನ್ನ ಮನೆಗೆ ಕರೆತಂದಿದ್ದ. ನಂತರ ಒಂದು ಮಗು ಆಗುವರೆಗೂ ಎಲ್ಲವೂ ಸರಿಯಾಗಿ ಸುಖವಾಗಿಯೇ ಇತ್ತಂತೆ. ಇದಾದ ಕೆಲ ಸಮಯದ ನಂತರ ಪತಿ ಬಾಲಾಜಿ ಮತ್ತೆ ಕಿರುಕುಳ ನೀಡಲು ಆರಂಭಿಸಿದನಂತೆ. ಕಾರಣಗಳೇ ಇಲ್ಲದೆ ಹೊಡೆಯುವುದು ಗೋಡೆಗೆ ಹಾಗೂ ಕಾರಿನ ಬಾಗಿಲಿಗೆ ತಲೆಯನ್ನು ಚಚ್ಚುವುದು ಮಾಡಿದಾಗ ಚೈತ್ರ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪತಿ ಬಾಲಾಜಿಯನ್ನು ಕರೆದು ವಿಚಾರಿಸಿದಾಗ ಆತ ಹೇಳಿದ್ದು ಹೀಗೆ.

ಚೈತ್ರ ಹೇಳುತ್ತಿರುವುದು ಸುಳ್ಳು. ನನಗೆ ಅವಳು 25 ಕೋಟಿ ರೂಪಾಯಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾಳೆ. ನಾನು ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ ಎನ್ನುತ್ತಿದ್ದಾಳೆ. ನಾನು ಆಕಿಗೆ ಕಾರು ಬಂಗಲೆ ಐಷಾರಾಮಿ ಜೀವನ ನೀಡಿದ್ದೇನೆ. ಆದರೆ ಅವಳು ನನ್ನ ಮಾತುಗಳನ್ನು ದಿಕ್ಕರಿಸಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾಳೆ ಎಂದು ಹೇಳಿದರು. ಇದೀಗ ಚೈತ್ರಾಗೆ ಎರಡು ಮಕ್ಕಳು. ಇವರು ಪತಿಯಿಂದ ಪ್ರತ್ಯೇಕವಾಗಿ ಬರುತ್ತಿದ್ದು ದಿವೋರ್ಸ್ ಗೆ ಅಪ್ಲೈ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಚೈತ್ರ ಹೇಳುತ್ತಿರುವುದು ಸತ್ಯವೋ? ಅಥವಾ ಪತಿ ಬಾಲಾಜಿ ಹೇಳುತ್ತಿರುವುದು ಸತ್ಯವೋ? ಗೊತ್ತಿಲ್ಲ. ಆದರೆ ಸಿನಿಮಾದಲ್ಲಿ ಮಿಂಚಿ, ಸಾಧನೆಯ ಗಿರಿ ಏರಬೇಕಿದ್ದವಳು ಪೊಲೀಸ್ ಠಾಣೆಯ ಮೆಟ್ಟಿಲು ಇರುವಂತಾಯಿತು. ಇದರಿಂದ ಮಕ್ಕಳು ಸಹ ತಂದೆಯಿಂದ ದೂರವಾಗಿ, ತಂದೆ ಪ್ರೀತಿಯಿಂದ ವಂಚಿತರಾದರು.