Advertisements

ಮನೆಯವರ ಕಣ್ಣು ತಪ್ಪಿಸಿ ಮದುವೆಯಾಗಿ ಗಂಡನನ್ನು ತಬ್ಬಿಕೊಂಡು ನಿಂತಿದ್ದ ಮಗಳಿಗೆ ನಡು ರಸ್ತೆಯಲ್ಲಿ ಜುಟ್ಟು ಹಿಡಿದ ತಂದೆ ಏನು ಮಾಡಿದ್ರು ಗೊತ್ತಾ?

Kannada News

ಮಕ್ಕಳಿಗಾಗಿ ಕಂಡ ಕಂಡ ದೇವರಿಗೆ ಹರಕೆ ಹೊತ್ತ ತಂದೆ ತಾಯಿಗಳನ್ನು ನಾವು ನೋಡಿದ್ದೇವೆ. ಅಂಗವಿಕಲರಾದರು ಅವರನ್ನು ಹೂವಿನಂತೆ ಜೋಪಾನ ಮಾಡಿದ್ದೂ ನಾವು ನೋಡಿದ್ದೇವೆ. ಕೆಲವರಿಗೆ ದೇವರು ತಥಾಸ್ತು ಎಂದು ಮಕ್ಕಳನ್ನು ಸಹ ಕರುಣಿಸುತ್ತಾನೆ. ಆಗ ಅವರ ಸಂತೋಷಕ್ಕೆ ಎಲ್ಲೆಯೇ ಇರುವುದಿಲ್ಲ. ಹುಟ್ಟಿದ ಮಗುವನ್ನು ಅತಿ ಜೋಪಾನವಾಗಿ 18, 20 ವರ್ಷ ಅತಿ ಮುದ್ದಿನಿಂದ ಲಾಲನೆ ಪಾಲನೆ ಮಾಡಿ ಸಾಕಿರುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳಾಗುವವರೆಗೂ ಅವರನ್ನು ನಲಿವಿಗೆ ಮಡಿಲು ಕೊಟ್ಟು ಹೆಗಲ ಮೇಲೆ ಹೊತ್ತು ತಿರಗಾಡೋದು ತಂದೆ, ತಾಯಿಗಳು. ಆದರೆ ಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದ ಕೂಡಲೇ ತಮ್ಮ ಜೀವನದ ಪ್ರತಿ ನಿರ್ಧಾರವನ್ನು ತಾವೇ ಕೈಗೊಳ್ಳುತ್ತಾರೆ. ತಂದೆ, ತಾಯಿಯರನ್ನು ವಿಲನ್ ಎನ್ನುವಂತೆ ಕಂಡು, ಅವರನ್ನು ಧಿಕ್ಕರಿಸುತ್ತಾ ರೆ. ಕೊನೆಗೆ ಪೊಲೀಸರಿಗೆ ಅವರೇ ಹಿಡಿದು ಕೊಡುತ್ತಾರೆ..

Advertisements
Advertisements

ಹೌದು ಇಲ್ಲೊಬ್ಬಳು ಮಾಡಿದ್ದು ಕೂಡ ಹಾಗೆಯೇ. ಮಗಳು ಪ್ಯಾಟೆಗೆ ಹೋಗಿ ನಾಲ್ಕು ಅಕ್ಷರ ಕಲಿತು ಬರುತ್ತಾಳೆ ಎಂದು ತಂದೆ ಕಷ್ಟಪಟ್ಟು ಅವಳನ್ನು ಕಾಲೇಜಿಗೆ ಸೇರಿಸುತ್ತಾನೆ. ಆದರೆ ಮಗಳು ಓದುವುದನ್ನು ಬಿಟ್ಟು ಪ್ರೀತಿ, ಪ್ರೇಮ ಎಂದು ಗಂಡಿನ ಮೋಹದಲ್ಲಿ ಸಿಲುಕುತ್ತಾಳೆ. ಅಷ್ಟೇ ಅಲ್ಲ ಅಪ್ಪ ಅಮ್ಮನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಮನೆ ತೊರೆಯಲು ಮುಂದಾಗುತ್ತಾಳೆ. ಇವಳನ್ನು ತಡೆದಾಗ ಪ್ರೀತಿಸಿದ ಹುಡುಗನನ್ನೆ ಮದುವೇ ಆಗುವುದಾಗಿ ಹಠ ಹಿಡಿಯುತ್ತಾಳೆ. ಮನೆಯಲ್ಲಿ ಪ್ರೀತಿಗೆ ಸಮ್ಮತಿ ದೊರೆಯುವ ಮೊದಲೇ ಪ್ರೀತಿಸಿದ ಹುಡುಗ ಮಹಿಂದ್ರಾ ನನ್ನು ಓಡಿ ಹೋಗಿ ಮದುವೆ ಆಗುತ್ತಾಳೆ. ಹೀಗೆ ತಂದೆ ತಾಯಿಯನ್ನು ಬಿಟ್ಟು ಅವರನ್ನು ದಿಕ್ಕರಿಸಿ ಮದುವೆಯಾದವಳೇ ಚೈತ್ರ. ಇವಳು ಮಾಡಿದ ಕೆಲಸದಿಂದ ತಂದೆ ಬಸವರಾಜ ನಾಯ್ಕ್ ಅವಮಾನದಿಂದ ಊರಲ್ಲಿ ತಲೆತಗ್ಗಿಸುವಂತಾಗುತ್ತದೆ. ಇತ್ತ ಚೈತ್ರ ಮತ್ತು ಮಹಿಂದ್ರಾ ಸಂತೋಷದಿಂದ ಓಡಾಡಿಕೊಂಡಿರುತ್ತಾರೆ. ಈ ಇಬ್ಬರೂ ತಮ್ಮ ವಿವಾಹವನ್ನು ರಿಜಿಸ್ಟರ್ ಮಾಡಲು ರಿಜಿಸ್ಟರ್ ಆಫೀಸ್ ಗೆ ಬರುತ್ತಿದ್ದಾರೆ ಎಂಬ ಸುದ್ದಿ ಚೈತ್ರಾಳ ತಂದೆ ಬಸವರಾಜ ಗೊತ್ತಾಗುತ್ತದೆ.

ಅದರಂತೆ ಬಸವರಾಜ್ ಮರುದಿನ ರಿಜಿಸ್ಟರ್ ಆಫೀಸ್ ಮುಂದೆ ಚೈತ್ರಳಿಗಾಗಿ ಕಾಯುತ್ತಾನೆ. ಮದುವೆಯ ರಿಜಿಸ್ಟ್ರೇಷನ್ ಮುಗಿಸಿಕೊಂಡು ಖುಷಿಯಿಂದ ಹೊರಗೆ ಬಂದು ಚೈತ್ರ ಮಹಿಂದ್ರ ಇಬ್ಬರು ಸೇರಿ ಫೋಟೋ ತೆಗೆಸಿಕೊಳ್ಳಲು ಅಪ್ಪಿಕೊಂಡು ನಿಂತಿರುತ್ತಾರೆ. ಇದನ್ನು ಕಂಡ ಬಸವರಾಜ ಕೋಪದಿಂದ ಅವಳ ಜಡೆ ಹಿಡಿದು ಎಳೆದು ತರುತ್ತಾರೆ. ಅವಳ ಕೊರಳಲ್ಲಿದ್ದ ಮಾಂಗಲ್ಯಸರವನ್ನು ಕಿತ್ತೆಸೆಯುತ್ತಾನೆ . ಹಾಗೆಯೇ ಜಡೆ ಹಿಡಿದು ಮನೆಕಡೆಗೆ ಎಳೆದೊಯ್ಯುತ್ತಾನೆ. ಚೈತ್ರ ಇದನ್ನು ದಿಕ್ಕರಿಸಿ ತನಗೆ ಸಹಾಯಮಾಡುವಂತೆ ಪೊಲೀಸರ ಮೊರೆ ಹೋಗುತ್ತಾಳೆ. ಪೊಲೀಸರಿಗೆ ತನ್ನ ತಂದೆಯಿಂದ ತನಗೆ ರಕ್ಷಣೆ ಕೊಡಿ ಎಂದು ಅಂಗಲಾಚುತ್ತಾಳೆ. ನಡುರಸ್ತೆಯಲ್ಲಿ ಹೆತ್ತ ಮಗಳು ತನ್ನ ತಂದೆಯ ಮಾನ ಮರ್ಯಾದೆಯನ್ನು ಕಳೆದು ಹಾಕುತ್ತಾಳೆ. ಕಂಡವರಿಗೆ ಸಹಾಯ ಮಾಡುವಂತೆ ಅಂಗಲಾಚುತ್ತಾಳೆ.

ಇತ್ತ 20ವರ್ಷ ಜೋಪಾನವಾಗಿ ಸಾಕಿದ ಮಗಳು ತನ್ನ ತಂದೆಯನ್ನು ನಂಬದೆ, ಕೇವಲ ಒಂದೂವರೆ ವರ್ಷದ ಹಿಂದೆ ಬಂದ ಹುಡುಗ ಮಹಿಂದ್ರಾ ನನ್ನು ನಂಬಿದಳಾ? ನನಗೆ ನನ್ನ ತಂದೆಯಿಂದ ತೊಂ’ದ’ರೆ ಇದೆ ಎಂದು ಪೊಲೀಸರ ಮೊರೆ ಹೋದಳಲ್ಲ ಎಂದು ತೀವ್ರ ನೋವಿನಲ್ಲಿ ಬಸವರಾಜ್ ಮುಳುಗುತ್ತಾನೆ. ಈ ಘ’ಟ’ನೆ ನಡೆದದ್ದು ಅರಮನೆ ನಗರಿ ಮೈಸೂರಿನಲ್ಲಿ. ಮೈಸೂರಿನ ನಡುರಸ್ತೆಯಲ್ಲಿ ನಡೆದ ಈ ಘ’ಟ’ನೆ ಹೆತ್ತವರ ಒಡಲಿಗೆ ಕೆಂಡ ಸುರಿದಂತಿತ್ತು. ಆದರೆ ಪ್ರೀತಿಯ ಮೋಹದಲ್ಲಿ ಬಿದ್ದವರಿಗೆ ಇದು ಈಗ ಅರ್ಥವಾಗುವುದಿಲ್ಲ. ನಿಧಾನವಾಗಿ ಅರ್ಥವಾದಾಗ ತಂದೆ, ತಾಯಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ವರ್ಷಾನುಗಟ್ಟಲೆ ಪ್ರೀತಿಯಿಂದ ಸಾಕಿದ ತಂದೆ, ತಾಯಿಯನ್ನು ಒಪ್ಪಿಸಿ ಮದುವೆಯಾಗಬೇಕಿತ್ತು. ಅವರನ್ನು ಧಿಕ್ಕರಿಸಿ ಮದುವೆಯಾಗುವುದು ಸರಿಯಲ್ಲ. ಹೆತ್ತವರನ್ನು ನೋಯಿಸಿ ಸುಖವಾಗಿ ಇರುತ್ತೇನೆ ಎದ್ದು ಕನಸು ಕಂಡ ಆದಷ್ಟು ಪ್ರೇಮಿಗಳು ಸಂಕಷ್ಟದಲ್ಲಿ ಸಿಲುಕಿದ್ದ ಉಂಟು. ಚೈತ್ರ ಮತ್ತು ಮಹಿಂದ್ರಾ ರ ಕಥೆ ಹೀಗಾಗದೆ ಸುಖವಾಗಿರಲಿ ಎಂದು ಹರಿಸೋಣ..