Advertisements

ಚೈತ್ರಾ ರೆಡ್ಡಿ ಮದುವೆಯಾಗಿರುವ ಹುಡುಗ ನಿಜಕ್ಕೂ ಯಾರು ಗೊತ್ತೇ! ಬಾಯಿ ಮೇಲೆ ಬೆರಳಿಟ್ಟುಕೊಂಡ ಜನ ನೋಡಿ..

Kannada News

ನಮಸ್ಕಾರ ಪ್ರಿಯ ಗೆಳೆಯರೆ ಸಿನಿಮಾ ಅಂದರೆ ಹೀಗೆ ಇರುತ್ತೆ ಅಂತ ಹೇಳುವುದು ಅಸಾಧ್ಯ. ಚಿತ್ರ ಕಥೆ ತಕ್ಕಂತೆ ಪಾತ್ರಧಾರಿಗಳು, ಲೋಕೇಶನ್ , ಹಾಡುಗಳು, ಹೊಸ ಡೈಲಾಗ್ ಗಳ ಪ್ರಯೋಗ ಆಗುತ್ತಲೆ ಇರುತ್ತದೆ. ಕೆಲವು ಸಿನಿಮಾಗಳು ಹಾಡುಗಳ ಮೂಲಕ ಹಿಟ್ ಆದರೆ, ಮತ್ತೆ ಕೆಲವು ಸಿನಿಮಾಗಳು ಟ್ರೇಲರ್ ನೋಡಿಯೇ ಅಭಿಮಾನಿಗಳು ಕಥೆ ಏನಿರಬಹುದು ಎಂದು ಕೌತುಕವಾಗಿ ಸಿನಿಮಾ ನೋಡುತ್ತಾರೆ, ಮತ್ತೆ ಕೆಲವು ಸಿನಿಮಾದ ಟ್ರೇಲರ್ ನೋಡಿ ಇಷ್ಟ ಪಡುತ್ತಾರೆ.

ಕನ್ನಡದಲ್ಲಿ ಅನೇಕ ಚಿತ್ರಗಳು ಕಡಿಮೆ ಬಜೆಟ್ ನಲ್ಲಿ ಉತ್ತಮ ಕಥಾಸಾರವನ್ನು ಒಳಗೊಂಡು ಪ್ರಶಸ್ತಿಗಳನ್ನು ಪಡೆದ ಸಿನಿಮಾಗಳನ್ನು ಸಹ ನೋಡಿದ್ದೇವೆ. ಅದೇ ರೀತಿಯಾಗಿ ಇದೀಗ ಕಡಿಮೆ‌ ಬಜೆಟ್ ನಲ್ಲಿ ಜನಕ್ಕೆ ಇಷ್ಟವಾಗುವಂತಹ, ವಾಸ್ತವತೆಗೆ ತೀರ ಹತ್ತಿರವಾದ ಕಥೆಯನ್ನೊಳಗೊಂಡ ಚಿತ್ರ ಇದೀಗ ತೆರೆ ಮೇಲೆ ಬರಲು ಸಿದ್ಧವಾಗಿದೆ. ಯಾವುದು ಆ ಸಿನಿಮಾ ಅಂತೀರಾ ಹಾಗಿದ್ದರೆ ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಕಥೆ.

ಉತ್ತಮ ಕಥೆಯೊಂದಿಗೆ ನಿರ್ಮಾಣವಾದ ಚಿತ್ರವೇ ಎಮ್ ಆರ್ ಪಿ. ಅರೇ ಇದೆನಿದು ಸಿನಿಮಾ ಹೆಸರು ಹೀಗಿದೆಯಲ್ಲ ಅಂತ ನೀವು ಕೌತುಕವಾಗಬಹುದು ಆದರೆ ಈ ಸಿನಿಮಾ ನಿಮ್ಮ ಊಹೆಗು ನಿಲುಕದ ಕಥೆಯನ್ನು ಪಾತ್ರಧಾರಿಗಳನ್ನು ಹೊಂದಿದೆ. ಇದೀಗ ಟ್ರೇಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಸಖತ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಕೆಲವು ತಿಂಗಳಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿರುವ ಚಿತ್ರ ಹಾಸ್ಯಮಯವಾಗಿದೆ ಎಂಬುವುದು ಟ್ರೇಲರ್ ನೋಡಿದವರ ಅಭಿಪ್ರಾಯ.

ಈ ಚಿತ್ರಕ್ಕೆ ನಿರ್ದೇಶಕ ಬಾಹುಬಲಿ ಆ್ಯಕ್ಷನ್ ಕಟ್ ಹೇಳಿದ್ದು, ಎಮ್.ಡಿ ಶ್ರೀಧರ, ಎ.ವಿ ಕೃಷ್ಣಕುಮಾರ,ಮೋಹನ್ ಕುಮಾರ ಹಾಗೂ ಮ್ಯಾನೇಜರ್ ರಂಗಸ್ವಾಮಿ ಈ ಸಿನಿಮಾದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ಇಂತಹ ಅನುಭವಿಗಳ ನೇತೃತ್ವದಲ್ಲಿ ನಿರ್ಮಾಣವಾದ ಈ ಚಿತ್ರ ಜನರಿಗೆ ಇಷ್ಟವಾಗುವುದರಲ್ಲಿ ಎರೆಡು ಮಾತಿಲ್ಲ.

ತಿರುಪತಿ ತಿರುಮಲ ವೆಂಕಟೇಶ ಹಾಡಿನಲ್ಲಿ ಗಣಪತಿಯ ವೇಷ ಧರಿಸಿ ಎಲ್ಲರನ್ನೂ ಮನರಂಜಿಸಿ, ಪ್ರತಿಯೊಂದು ಚಿತ್ರದಲ್ಲಿ ಸಹ ಹಾಸ್ಯ ನಟನಾಗಿ ಅಭಿನಯಿಸಿದ ನಡ ಹರಿ ಈ ಚಿತ್ರದ ನಾಯಕನಾಗಿದ್ದಾನೆ. ನೋಡಲು ದಪ್ಪವಾಗಿರುವ ನಟ ಹರಿ ಇದೇ ಮೊದಲ ಬಾರಿಗೆ ನಾಯಕನಾಗಿ ಎಮ್.ಆರ್.ಪಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ನವರಸ ನಾಯಕ‌ ಜಗ್ಗೇಶ ಧ್ವನಿ ನೀಡಿದ್ದು ಚಿತ್ರಕ್ಕೆ ಮತ್ತಷ್ಟು ಹೊಳಪು ನೀಡಿದೆ.

ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಸಾಧು ಕೋಕಿಲ,ನಿರ್ದೇಶಕ ಇಂದ್ರಜೀತ ಲಂಕೇಶ್ ಹಾಗೂ ನಟ ವಸಿಷ್ಠ ಸೇರಿದಂತೆ ಅಪಾರ ಪ್ರಮಾಣದ ಕಲಾವಿದರ ಬಳಗ ಉಪಸ್ಥಿತರಿದ್ದರು. ಚಿತ್ರದ ಟ್ರೇಲರ್ ವೀಕ್ಷಿಸಿದ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಾಹುಬಲಿ ಚಿತ್ರದ ಕುರಿತು ಮಾತನಾಡಿದರು, ನಂತರ ಅಪ್ಪು ಅವರನ್ನು ನೆನೆಸಿಕೊಂಡರು. ನಂತರ ಮಾತನಾಡಿದ ನಟ ಹರಿ ನಾನು ನಾಯಕನಾಗಿ ನಟಿಸಿದ ಮೊದಲ ಚಿತ್ರ ಇದಾಗಿದೆ, ಅದ್ಬುತ ಕಥೆಯನ್ನು ಒಳಗೊಂಡಿದೆ, ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಹರಿಸಬೇಕೆಂದು ಕೇಳಿಕೊಂಡರು.

ದಡೂತಿ ದೇಹ ಹೊತ್ತ ವ್ಯಕ್ತಿ ಜೀವನದಲ್ಲಿ ಏನೆಲ್ಲ ಕಷ್ಟಗಳನ್ನು ಅನುಭವಿಸುತ್ತಾನೆ, ಆತನ ಬದುಕು ಹೇಗಿರುತ್ತದೆ ಎಂಬುವುದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.‌ ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಕಿರುತೆರೆಯ ನಟಿ ಚೈತ್ರಾ ರೆಡ್ಡಿ ನಟಿಸಿದ್ದು, ಇದು ಅವರ ಮೊದಲ ಚಿತ್ರವಾಗಿದೆ. ಒಟ್ಟಾರೆಯಾಗಿ ಬಹುದಿನಗಳ ಬಳಿಕ ಮತ್ತೆ ವಿಶಿಷ್ಠವಾದ ಕಥೆಯೊಂದಿಗೆ ಅಭಿಮಾನಿಗಳ‌ ಮುಂದೆ ಬರಲಿರುವ ನಟಿ ಹರಿಯವರಿಗೂ ಹಾಗೂ ಎಮ್ ಆರ್ ಪಿ ಚಿತ್ರ ತಂಡಕ್ಕೆ ಯಶಸ್ಸು ಸಿಗಲಿ ಎಂಬುವುದು ಅವರ ಅಭಿಮಾನಿಗಳ ಆಸೆ.

Leave a Reply

Your email address will not be published.