Advertisements

ಐಷಾರಾಮಿ ಜೀವನ ಬಿಟ್ಟು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ಈ ನಟಿಯರು..! ಅವರು ಯಾರು ಗೊತ್ತಾ.? ಗೊತ್ತಾದ್ರೆ ನೀವು ಅ’ಚ್ಚರಿ ಪಡ್ತೀರಾ!

Inspiration

ನಮಸ್ತೆ ಸ್ನೇಹಿತರೆ, ರೈತ ನಮ್ಮ ದೇಶದ ಬೆನ್ನೆಲುಬಾಗಿ ನಿಂತಿದ್ದಾನೆ. ಹಾಗೂ ಭೂಮಿ ತಾಯಿಯ ಚೊಚ್ಚಲ ಮಗ ಎಂದು ಕರೆಸಿಕೊಳ್ಳುತ್ತಾನೆ.. ಇಡೀ ಪ್ರಪಂಚದ ಅಳಿವು ಉಳಿವು ನಿಂತಿರುವುದು ಈ ರೈತನು ಮಾಡುವ ಕಷ್ಟದ ಕೆಲಸದಿಂದ. ಅಷ್ಟೇ ಅಲ್ಲದೆ ಯಾವುದೇ ಕೆಲಸ ಮಾಡಿದರು ಸಿಗದಷ್ಟು ನೆಮ್ಮದಿಯ ಜೀವನ ಈ ವ್ಯವಸಾಯದಿಂದ ಸಿಗುತ್ತದೆ.. ಇನ್ನೂ ಈ ವ್ಯವಸಾಯದ‌ ಬಗ್ಗೆ ಅರಿವು ಮೂಡಿ, ಕೆಲವು ನಟ ನಟಿಯರು ಸಹ ತಮ್ಮ ಜೀವನದಲ್ಲಿ ಸಂಪಾದಿಸಿದ ಕಾರು, ದೊಡ್ಡ ಮನೆಯನ್ನು ಬಿಟ್ಟು ರೈತರ ಹಾಗೆ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾಗುತ್ತಾರೆ.. ಅದೇ ರೀತಿ ಒಬ್ಬ ನಟಿಯರು ಸಹ ವ್ಯವಸಾಯ ಮಾಡಲು ಶುರು ಮಾಡಿದ್ದಾರೆ. ಅಷ್ಟಕ್ಕೂ ತಮ್ಮ ಐಷಾರಾಮಿ ಜೀವನವನ್ನು ಬಿಟ್ಟು ವ್ಯವಸಾಯ ಮಾಡಲು ಬಂದಿರುವ ಆ ನಟಿಯರು ಯಾರು ಅಂತ ನೋಡೋಣ ಬನ್ನಿ..

Advertisements
Advertisements

ಹೌದು ಸ್ನೇಹಿತರೆ, ಇಡೀ ಪ್ರಪಂಚದಲ್ಲಿ ಎಲ್ಲಿಯೂ ಸಿಗದಂತಹ ನೆಮ್ಮದಿ‌ ಸುಖ ಜೀವನ ರೈತ ಮಾಡುವ ವ್ಯವಸಾಯದಲ್ಲಿ ಸಿಗುತ್ತದೆ ಅನ್ನುವುದು ನೂರರಷ್ಟು ಸತ್ಯ, ಅಲ್ಲದೇ ವ್ಯವಸಾಯ ಮಾಡುವುದರಿಂದ ಮನುಷ್ಯನ ಆರೋಗ್ಯ ಕೂಡ ತುಂಬಾನೇ ಉತ್ತಮವಾಗಿರುತ್ತದೆ.. ಅದೇ ರೀತಿ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಯಾಮಿ ಗೌತಮಿ ಅವರು. ಹಿಮಾಚಲ ಪ್ರದೇಶದಲ್ಲಿ ಇರುವ ತಮ್ಮ ಊರಿನಲ್ಲಿ ತಮ್ಮಗಿರುವ‌ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿಯಲ್ಲಿ ಬೇಸಾಯ ಮಾಡಲು ಶುರುಮಾಡಿದ್ದಾರೆ. ಸಾವಯವ ಕೃಷಿ ಬಗ್ಗೆ ಕೆಲವೊಂದು ಮಾಹಿತಿಯನ್ನು ಕಲೆ ಹಾಕಿ ವ್ಯವಸ್ಥಿತವಾಗಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ.. ಇನ್ನು ಒಂದು ಕಾಲದಲ್ಲಿ ಕನ್ನಡಿಗರ ಮನೆಮಾತಾಗಿದ್ದ ಜೂಹಿ ಚಾವ್ಲಾ ಇವರು ಕನ್ನಡ ಅಲ್ಲದೇ ಬಾಲಿವುಡ್ ಸಿನಿಮಾಳಲ್ಲಿಯೂ ಒಂದು ದಶಕದ ಕಾಲ ಮಿಂಚಿದ್ದಾರೆ.

ಈಗ ರೈತರ ಹಾಗೆ ಕೃಷಿ ಮಾಡಲು ಮುಂದಾಗಿದ್ದ ಇವರು ಸ್ವಲ್ಪ ಜಮೀನನ್ನು ಖರೀದಿ ಮಾಡಿ, ತಮ್ಮದೇ‌ ಆದ ಸ್ವಂತ ಭೂಮಿಯಲ್ಲಿ ವಿಭಿನ್ನ ರೀತಿಯ ಬೆಳೆಗಳನ್ನ ಬೆಳೆಯುವ ಉತ್ಸಾಹದ ಮೂಲಕ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.. ತಮ್ಮ ವಿಭಿನ್ನವಾದ ಅಭಿನಯದ ಮೂಲಕ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಸಂಪದ ಕುಲಕರ್ಣಿ‌ ವ್ಯವಸಾಯದಲ್ಲಿ ತಮ್ಮನ್ನು ತಾವು ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.. ಅಲ್ಲದೇ ಈ ನಟಿ ತಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಇರುವ ಸ್ವಲ್ಪ ಮಟ್ಟದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಉಳಿದ ರೈತರಿಗೂ ಕೂಡ ಕೆಲಸವನ್ನು ನೀಡಿದ್ದಾರೆ.. ಇನ್ನೂ‌ ಕನ್ನಡ ಸಿನಿಮಾಗಳಲ್ಲಿ ಹೀರೋ ಮತ್ತು ವಿಲನ್ ಹಾಕಿ ನಟನೆ ಮಾಡಿದ ನಟ ಅರುಣ್ ಪಾಂಡಿಯನ್ ಅವರ ಮಗಳು ಕೀರ್ತಿ ಪಾಂಡಿಯನ್ ನಟಿಯಾಗಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ..

ಅಲ್ಲದೆ ತನ್ನ ತಂದೆಗೆ ಜೊತೆಯಲ್ಲಿ ವ್ಯವಸಾಯ ಮಾಡುತ್ತಿರುವ ಕೀರ್ತಿ ಪಾಂಡಿಯನ್ ಅವರು ಜಮೀನನ್ನು ಉಳುಮೆ ಮಾಡುವುದರಿಂದ ಹಿಡಿದು, ಗದ್ದೆಯ ಕೇಸರಿನಲ್ಲಿ ನಾಟಿ ಮಾಡುವ ಕೆಲಸದವರೆಗೂ ಎಲ್ಲಾ ರೀತಿಯ ವ್ಯವಸಾಯದ ಕೆಲಸವನ್ನು ಕೂಡಾ ಮಾಡಿಕೊಂಡು ಬರುತ್ತಿದ್ದಾರೆ. ಇನ್ನೂ ಕನ್ನಡದ ಕಿರುತೆರೆ ವಾಹಿನಿಯಲ್ಲಿ ಮಿಂಚಿ, ನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಹೆಚ್ಚು ಜನಪ್ರೀಯ ಪಡೆದ ನಟಿ‌ ಭೂಮಿ ಶೆಟ್ಟಿ ಕೋ’ರೋನ ಲಾಕ್ಡೌನ್ ಸಮಯದಲ್ಲಿ ತನ್ನ ಸ್ವಂತ ಊರಿಗೆ ಹೋಗಿ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಕಠಿಣ ಕೆಲಸಗಳಲ್ಲಿ ತೊಡಗಿಸಿಕೊಂಡ ಇವರು ತಮ್ಮ ಕುಟುಂಬ ಜೊತೆಗೆ ಕೃಷಿ ಕೆಲಸ ಮಾಡುತ್ತಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ವ್ಯವಸಾಯ ಎಂತಹ ವ್ಯಕ್ತಿಗಳನ್ನು ಕೂಡ ತನ್ನತ್ತ ಸೆಳೆಯುವಂತೆ ಮಾಡುತ್ತದೆ ಎಂದು.. ಈ ನಟಿ ಯಾರು ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಸ್ನೇಹಿತರೆ.