Advertisements

ಕಾಫಿ‌ ನಾಡು ಚಂದು ನಿಜಕ್ಕೂ ಯಾರು ಗೊತ್ತಾ?

Kannada News

ಸೋಷಿಯಲ್ ಮೀಡಿಯಾ ಈಗ ಬಹಳ ಸ್ಟ್ರಾಂಗ್ ಆಗಿದೆ. ಯಾರು ಯಾವಾಗ ಬೇಕಾದರೂ ಫೇಮಸ್ ಆಗಬಹುದು. ತಮ್ಮ ಪ್ರತಿಭೆಯನ್ನು ತೋರ್ಪಡಿಸಬಹುದು. ಹೀಗೆ ಹಲವು ಕಾರಣಗಳಿಂದ ಕೆಲವು ವ್ಯಕ್ತಿಗಳು ಖ್ಯಾತಿ ಪಡೆದುಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾ ಇಂದ ಬಹಳ ಬೇಗ ಹೆಚ್ಚಿನ ಜನರನ್ನು ತಲುಪುತ್ತಾರೆ. ಇದೀಗ ಅದೇ ರೀತಿ, ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಹೆಸರು ಕಾಫಿ ನಾಡಿನ ಚಂದು. ತಮ್ಮ ಮನಸ್ಸಿಗೆ ಸಂತೋಷ ಆಗುವ ಹಾಗೆ, ಈ ವ್ಯಕ್ತಿ ಹಾಡಿರುವ ಹಾಡುಗಳು ವೈರಲ್ ಆಗಿವೆ.

ಕಾಫಿ ನಾಡು ಚಂದು ಎಂದು ಫೇಮಸ್ ಆಗಿರುವ ಈತ, ಇತ್ತೀಚೆಗೆ ಶಿವಣ್ಣ ಅವರ ಹುಟ್ಟುಹಬ್ಬದಂದು ಬರ್ತ್ ಡೇ ವಿಶ್ ಮಾಡಿ, ಹಾಡು ಹೇಳಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. “ಹಲೋ ನಾನು ಕಾಫಿ ನಾಡು ಚಂದು.. ನಾನು ಶಿವಣ್ಣ ಮತ್ತು ಪುನೀತ್ ಅಭಿಮಾನಿ.. ಇವರ ಹುಟ್ಟುಹಬ್ಬಕ್ಕೆ ದೇವರು ಆಯಸ್ಸು, ಆರೋಗ್ಯ, ಕೊಟ್ಟು ಕಾಪಾಡಲಿ ಅವ್ರಿಗೋಸ್ಕರ ಒಂದು ಹಾಡು.. ಹ್ಯಾಪಿ ಬರ್ತ್ ಡೇ..” ಎಂದು ಹೇಳಿ ಹಾಡಿದ್ದ ವಿಡಿಯೋ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇವರು ಹಾಡಿರುವ ನಾನೇ ಚಂದು ಓಹೋ, ನೀವೇ ನನ್ನ ಬಂಧು ಓಹೋ..ಎಂದು ಇವರು ಹಾಡಿರುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ.

ಈ ಕಾಫಿ ನಾಡು ಚಂದು ಯಾರಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಕಾಫಿ ನಾಡು ಚಂದು ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಈ ವ್ಯಕ್ತಿ ಮೂಲತಃ ಚಿಕ್ಕಮಗಳೂರಿನವರು. ಮೂಡಗೆರೆ ಭಾಗದ ಊರಿನ ಭಾಗಮನೆ ಕಡೆಯವರು. ಇದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಊರು ಆಗಿದೆ. ಇದೇ ಊರಿನಲ್ಲಿ ಹುಟ್ಟಿ ಬೆಳೆದವರು ಕಾಫಿ ನಾಡು ಚಂದು. ಇವರು ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾರೆ. ಚಂದು ಅವರು ಹೆಚ್ಚು ಫೇಮಸ್ ಆಗಿದ್ದು, ಸ್ನೇಹಿತರಿಗೆ ಬರ್ತ್ ಡೇ ವಿಶ್ ಗಳನ್ನು ಮಾಡುವ ಮೂಲಕ. ಸ್ನೇಹಿತರಿಗೆ ಬರ್ತ್ ಡೇ ವಿಶ್ ಮಾಡಿ, ಹಾಡು ಹೇಳುತ್ತಿದ್ದರು.

ಈ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನಸ್ಸಿಗೆ ಬಂದಂತಹ ಹಾಡುಗಳನ್ನು ಹಾಡಿ, ಮನಸ್ಸಿಗೆ ಇಷ್ಟವಾದ ಹಾಗೆ ಸಾಹಿತ್ಯಗಳನ್ನು ಹಾಡಿ, ಅವುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಫೇಮಸ್ ಆಗಿದ್ದಾರೆ. ಕಾಫಿ ನಾಡು ಚಂದುಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 1 ಲಕ್ಷದ 24 ಸಾವಿರ ಫಾಲೋವರ್ಸ್ ಇದ್ದಾರೆ. ಶಿವಣ್ಣ ಅವರ ಬರ್ತ್ ಡೇ ವಿಡಿಯೋ ನಂತರ ಇವರು ಹೆಚ್ಚಿಗೆ ಫೇಮಸ್ ಆಗಿದ್ದಾರೆ. ಆಟೋ ಡ್ರೈವರ್ ಆಗಿರುವ ಚಂದು, ಒಳ್ಳೆಯ ಕೆಲಸಗಳನ್ನು ಸಹ ಮಾಡುತ್ತಾ ಬಂದಿದ್ದಾರೆ.

ರಸ್ತೆಯಲ್ಲಿ ಯಾರಿಗಾದರೂ ಆಕ್ಸಿಡೆಂಟ್ ಆದರೆ, ಅಥವಾ ಅನಾರೋಗ್ಯ ಉಂಟಾದರೆ ಅಂಥವರನ್ನು ಆಸ್ಪತ್ರೆಗೆ ಸೇರಿಸಿ ಸಹಾಯ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದಾರೆ. ಈಗ ಕಾಫಿ ನಾಡು ಚಂದು ಅವರ ಹವಾ ಹೇಗಿದೆ ಅಂದ್ರೆ, ಅವರು ಬಿಗ್ ಬಾಸ್ ಗೆ ಹೋಗೋದು ಫಿಕ್ಸ್ ಎನ್ನುತ್ತಿವೆ ಮೂಲಗಳು. ಸೋಷಿಯಲ್ ಮೀಡಿಯಾ ಇಂದ ಫೇಮಸ್ ಆದವರು ಅಷ್ಟೇ ಬೇಗ ಅದನ್ನು ಕಳೆದುಕೊಳ್ಳಲುಬಹುದು. ಕಾಫಿ ನಾಡು ಚಂದ್ರು ವಿಚಾರ ಏನಾಗುತ್ತದೆ ಎಂದು ಕಾದು ನೋಡಬೇಕಷ್ಟೇ..