ನಮಸ್ತೆ ಸ್ನೇಹಿತರೆ, ಸ್ಟಾರ್ಗಳು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸ್ಟಾರ್ಗಳು ಏನೇ ಮಾಡಿದ್ರೂ ಅದ್ರ ನಡುವೆ ಒಂದು ಕಾಂಪಿಟೇಷನ್ ಇದ್ದೇ ಇರಿತ್ತೆ . ಅಂದ್ಹಾಗೆ ಸಿನಿಮಾ ವಿಚಾರದಲ್ಲಿ ಸ್ಟಾರ್ಗಳ ನಡುವೆ ಕಾಂಪಿಟೇಷನ್ ಇರುವುದು ಕಾಮನ್ ಆದ್ರೆ ಸದ್ಯ ಟಾಲಿವುಡ್ನ ಸ್ಟಾರ್ ನಟರ ಕ್ಯಾರಾವಾನ್ ಖರೀದಿಯಲ್ಲೂ ಕಾಂಪಿಟೇಷನ್ ಶುರುವಾಗಿದೆ. ಯಾರ ನಡುವೆ ಕಾಂಪಿಟೇಶನ್ ನೋಡೋಣ ಬನ್ನಿ.

ಅಂದ್ಹಾಗೆ ಕಾಂಪಿಟೇಷನ್ ಅಭಿಮಾನಿಗಳ ಮಧ್ಯೆ ಮಾತ್ರವಲ್ಲ ಸ್ಟಾರ್ಗಳ ನಡುವೆಯೂ ಇದ್ದೇ ಇರುತ್ತದೆ. ಹೀಗಾಗಿ ಅವ್ರು ಅವರದ್ದೇ ರೀತಿಯಲ್ಲಿ ತಾವು ಗ್ರೇಟ್ ಅನ್ನೋದನ್ನ ತೋರಿಸಿಕೊಳ್ಳೋ ಘ’ಟನೆಗಳು ನಮ್ಮ ಮುಂದೆ ನಡೀತಾನೆ ಇರ್ತವೆ. ಸದ್ಯ ಟಾಲಿವುಡ್ನಲ್ಲಿ ಹಾಗೆಯೇ.. ಅಲ್ಲು ಅರ್ಜುನ್ಗಿಂತ ಮಹೇಶ್ ಬಾಬು ಮೇಲು ಅನ್ನೋ ಸುದ್ದಿ ಹರಿದಾಡ್ತಿದೆ. ಅಂದ್ಹಾಗೆ ಈ ಸುದ್ದಿ ಹರಿದಾಡ್ತಿರೋದು ಸಿನಿಮಾ ವಿಚಾರಕ್ಕಲ್ಲ ಸ್ನೇಹಿತರೆ. ಬದಲಾಗಿ ಮಹೇಶ್ ಬಾಬು ಅತಿಹೆಚ್ಚು ಬೆಲೆಬಾಳೋ ಕ್ಯಾರಾವ್ಯಾನ್ ಬಳಕೆ ಮಾಡ್ತಿದ್ದಾರಂತೆ.

ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 7 ಕೋಟಿ ಮೊತ್ತದ ಕ್ಯಾರಾವ್ಯಾನ್ ಹೊಂದಿದ್ದರು. ಅದು ಎಲ್ಲಾ ರೀತಿಯ ವಿಶೇಷ ಸೌಲಭ್ಯಳನ್ನ ಹೊಂದಿರುವ ಕ್ಯಾರಾವ್ಯಾನ್ ಆಗಿದೆ. ಬಾಲಿವುಡ್ ನಟರೂ ಸಹ ಬಳಸದ ರೀತಿಯಲ್ಲಿ ಮಾರ್ಪಾಡು ಮಾಡಿಸಿ ಮಾಡಲಾಗಿದೆ. ಅದು ಹೆಚ್ಚು ಬೆಲೆ ಬಾಳೋ ಕ್ಯಾರಾವ್ಯಾನ್ ಎನ್ನಲಾಗಿತ್ತು. ಆದರೆ ಈಗ ಮಹೇಶ್ ಬಾಬು ಬಳಸುವ ಕ್ಯಾರಾವ್ಯಾನ್ ಬೆಲೆ ಬರೋಬ್ಬರಿ 8 ಕೋಟಿಯಂತೆ. ಹಲವು ವಿಶೇಷ ಸೌಲಭ್ಯಗಳನ್ನ ಒಳಗೊಂಡಿರೋ ರೀತಿ ವಿನ್ಯಾಸ ಮಾಡಿಸಲಾಗಿದೆಯಂತೆ. ಹೀಗಾಗಿ ಅಲ್ಲು ಅರ್ಜುನ್ಗಿಂತ ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಒಂದು ಹೆಜ್ಜೆ ಮುಂದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಮಹೇಶ್ ಬಾಬು ಬಳಸೋ ಕ್ಯಾರಾವ್ಯಾನ್ ಹೇಗಿದೆ ಅನ್ನೋ ಕುತೂಹಲ ಹೆಚ್ಚಿಸಿದೆ. ಒಟ್ಟಿನಲ್ಲಿ ಸ್ಟಾರ್ಗಳ ನಡುವಿನ ಕಾಂಪಿಟೇಷನ್ ಕೇವಲ ಸಿನಿಮಾಗಳಿಗೆ ಸೀಮಿತವಾಗಿಲ್ಲ. ಕೆಲವೊಮ್ಮೆ ಅವ್ರು ಬಳಸೋ ವಸ್ತುಗಳ ದರಗಳಲ್ಲಿ ಕೂಡ ಸುದ್ದಿಯಾಗುತ್ತೆ ಅನ್ನೋದಕ್ಕೆ ಈ ಘ’ಟನೆಯೇ ಸಾಕ್ಷಿಯಾಗಿದೆ. ನಿಮಗೆ ಈ ಸುದ್ದಿ ಇಷ್ಟವಾದಲ್ಲಿ ಶೇರ್ ಮಾಡಿ ಲೈಕ್ ಮಾಡಿ.