ನಮಸ್ತೆ ಸ್ನೇಹಿತರೆ, ಅದೃಷ್ಟ ಯಾರ ಬಳಿ ಬರುತ್ತದೆ ಅನ್ನೋದು ಯಾರಿಗೂ ಸಹ ಗೊತ್ತಾಗುವುದಿಲ್ಲ, ಕೆಲವು ಬಾರಿ ಅದೃಷ್ಟ ನಮ್ಮ ಪಕ್ಕದಲ್ಲಿ ಇದ್ದರೂ ಕೂಡ ನಮಗೆ ತಿಳಿಯುವುದಿಲ್ಲ. ಯಾಕೆಂದರೆ ಯಾವುದಕ್ಕೂ ಕಾಲ ಕೂಡಿ ಬರಬೇಕು ಅಷ್ಟೇ, ಸಮಯ ಬಂದಾಗ ಯಾರು ಕೂಡ ಊಹಿಸಲಾಗದ ಘ’ಟನೆಗಳು ಜೀವನದಲ್ಲಿ ನಡೆದು ಹೋಗುತ್ತವೆ. ಇನ್ನು ನೀವು ಈ ವಿಷಯವನ್ನು ತಿಳಿದರೆ ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತೀರಾ’ ಹೌದು ಅದು ಹೇಗೆ ಸಾಧ್ಯ ಅನ್ನೋದು ಇಲ್ಲಿ ನೋಡೋಣ ಬನ್ನಿ.. ಕ್ಯಾಲಿಫೋರ್ನಿಯಾಗೆ ಸೇರಿದ ಜಾನ್ ಮತ್ತು ಮೇರಿ ಎನ್ನುವ ಇಬ್ಬರು ದಂಪತಿಗಳು, ಬೆಟ್ಟದ ಪಕ್ಕದಲ್ಲಿ ಇದ್ದ ಒಂದು ಸಾಧಾರಣ ಮನೆಯನ್ನು ಖರೀದಿ ಮಾಡಿ, ಜೀವನ ನಡೆಸುತ್ತಿದ್ದರು.

ದಿನಾ ಕೆಲಸದಿಂದ ವಾಪಸ್ ಬಂದ ಮೇಲೆ ಈ ದಂಪತಿಗಳು ಒಂದು ಹವ್ಯಾಸ ಬೆಳೆಸಿಕೊಂಡಿದ್ದರು, ಅದೇನೆಂದರೆ ಈ ದಂಪತಿಗಳು ಸಂಜೆಯ ವೇಳೆ ತಾವು ಸಾಕಿದ ನಾಯಿಯನ್ನು ಕರೆದುಕೊಂಡು ಮನೆಯ ಪಕ್ಕದಲ್ಲಿ ಇರುವ ಬೆಟ್ಟಕ್ಕೆ ವಾಕಿಂಗ್ ಹೋಗುತ್ತಿದ್ದರು.. ಒಂದು ದಿನ ಎಂದಿನಂತೆ ಸಾಕಿದ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದ ಈ ದಂಪತಿಗೆ ದಾರಿಯ ಪಕ್ಕದಲ್ಲಿ ಭೂಮಿಯ ಒಳಗೆ ಹೂತಿಟ್ಟಿದ್ದ ಕಬ್ಬಿಣದ ರೀತಿ ಇರುವ ಒಂದು ಕ್ಯಾನ್ ಮೇಲ್ಬಾಗ ಅವರಿಗೆ ಕಾಣಿಸಿತ್ತು, ಅದನ್ನು ನೋಡಿದ ಮೇರಿಗೆ ಇದು ಏನು ಇರಬಹುದು ಎಂದು ಕುತೂಹಲದಿಂದ ಆ ಕಬ್ಬಿಣದ ಕ್ಯಾನ್ ಅನ್ನು ತೆಗೆದು ನೋಡಲು ಮುಂದಾದರು, ಆದರೆ ಗಂಡ ಜಾನ್ ಮಾತ್ರ ಆ ಕ್ಯಾನ್ ಗಲೀಜು ಆಗಿದೆ ಅದನ್ನು ಮುಟ್ಟಬೇಡ ಎಂದು ಹೇಳಿದರು..

ಆ ಕಬ್ಬಿಣದ ಕ್ಯಾನ್ ಬಗ್ಗೆ ಕುತೂಹಲ ಬೆಳೆಸಿಕೊಂಡ ಮೇರಿ, ಆ ಕ್ಯಾನ್ ಬಳಿ ಹೋಗಿ ಭೂಮಿಯಿಂದ ಅದನ್ನು ಹೊರತೆಗೆದಳು.. ಅನಂತರ ಆ ಕ್ಯಾನ್ ತುಂಬಾ ತೂಕ ಇದ್ದ ಕಾರಣ ಅದನ್ನು ಓಪನ್ ಮಾಡಲು ಆಗದೆ ಆ ಕ್ಯಾನ್ ಅನ್ನು ಮನೆಗೆ ತೆಗೆದುಕೊಂಡು ಬಂದರು.. ಇನ್ನೂ ಮನೆಗೆ ಬಂದ ದಂಪತಿ ಈ ಕ್ಯಾನ್ ಒಳಗೆ ಏನು ಇರಬಹುದು ಎಂದು ಓಪನ್ ಮಾಡಿ ನೋಡಿದಾಗ ಆ ದಂಪತಿಗಳಿಗೆ ದೊಡ್ಡ ಶಾ’ಕ್.! ಏನೆಂದರೆ ಅದರ ಒಳಗಡೆ ಇದ್ದದ್ದು ಬೆಲೆ ಬಾಳುವ ಚಿನ್ನದ ನಾಣ್ಯಗಳು.. ಆ ಚಿನ್ನದ ನಾಣ್ಯಗಳನ್ನು ನೋಡಿ ಶಾ’ಕ್ ಆದ ದಂಪತಿಗಳು ಮತ್ತೆ ಈ ಕ್ಯಾನ್ ಇದ್ದ ಜಾಗದಲ್ಲಿ ಮತ್ತಷ್ಟು ಕ್ಯಾನ್ ಗಳು ಇರಬಹುದು ಎಂದು ಭಾವಿಸಿ ಆ ಜಾಗಕ್ಕೆ ಹೋಗಿ ಅಗೆದು ನೋಡಿದಾಗ ಮತ್ತಷ್ಟು ಕಬ್ಬಿಣದ ಕ್ಯಾನ್ ಗಳು ಸಿಕ್ಕಿದವು.. ನೋಡಿ ಇರಲ್ವ ಸ್ನೇಹಿತರೆ ಅದೃಷ್ಟ ಯಾವ ಸಮಯದಲ್ಲಿ ಯಾರಿಗೆ ಖುಲಾಯಿಸುತ್ತೋ ಹೇಳಲು ಸಾಧ್ಯವಿಲ್ಲ. ಇದರ ಬಗ್ಗೆ ನೀವೇನಂತಿರಾ. ಕಮೆಂಟ್ ಮಾಡಿ ತಿಳಿಸಿ.
