Advertisements

ರವಿಚಂದ್ರನ್ ಅವರು ತಮ್ಮ ಹೆಂಡತಿಯನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆದುಕೊಂಡು ಬರುವುದಿಲ್ಲ ಯಾಕೆ.? ಕಾರಣ ಇಲ್ಲಿದೆ ನೋಡಿ…

Cinema Entertainment

ನಮಸ್ತೆ ಸ್ನೇಹಿತರೆ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಂದರೆ ನಮ್ಮ ಮನದಲ್ಲಿ ಮೂಡುವುದು ಕನ್ನಡ ಸಿನಿಮಾಗಳ ಪ್ರೇಮಲೋಕದ ದೊರೆ ಎಂದು. ಈ ಪ್ರೇಮಲೋಕ ದೊರೆಯ ಕನಸಿನಲ್ಲಿ ಮೂಡಿಬಂದ ಪ್ರೇಮ ಕಥೆಗಳೆಷ್ಟೋ ಮತ್ತು ಸಾಹಿತ್ಯ ರೂಪದಲ್ಲಿ ಬಂದ ಲವ್ ಮಂತ್ರಗಳೂ ಮತ್ತೆಷ್ಟೋ..! ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಹೇಗೆ ಹಣವನ್ನು ಖರ್ಚು ಮಾಡುವುದು ಅಂತ ಹೇಳಿಕೊಟ್ಟವರೇ ಕ್ರೇಜಿಸ್ಟಾರ್ ರವಿಚಂದ್ರನ್. ಸಿನಿಮಾಗೆ ಹೊಡಿದ ಬಂಡವಾಳವನ್ನು ಹೇಗೆ ದೋಚುವುದು ಅಂತ ಹೇಳಿಕೊಟ್ಟವರೇ ನಮ್ಮ ಈ ಪ್ರೇಮಲೋಕದ ದೊರೆ. ಅಂದು 1987, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಂತಹ ದಿಗ್ಗಜರು ಕನ್ನಡ ಸಿನಿಮಾ ರಂಗವನ್ನು ಆಳುತ್ತಿದ್ದ ಕಾಲ..

Advertisements
Advertisements

ಇಂತಹ ದಿಗ್ಗಜರ ನಡುವೆಯೂ ಕನ್ನಡ ಸಿನಿಮಾಗಳು ಅಷ್ಟು ಪರಿಚಯವಿಲ್ಲದಿದ್ದರು, ತನ್ನ ಪ್ರೇಮ ಸಿನಿಮಾ ಮತ್ತು ನಟನೆಯ ಮೂಲಕ ಚಿತ್ರರಂಗದಲ್ಲಿ ಬೇರೂರಿ ಯಶಸ್ಸು ಕಾಣುತ್ತೀನಿ ಎಂದು ಧೈರ್ಯ ಮಾಡಿದವರು ಇದೇ ಕ್ರೇಜಿಸ್ಟಾರ್. ಕ್ರೇಜಿಸ್ಟಾರ್ ಒಬ್ಬ ನಟನಲ್ಲದೆ ಕನ್ನಡದ ಒಬ್ಬ ಅದ್ಭುತ ನಿರ್ದೇಶಕರು ಹೌದು. ರವಿಚಂದ್ರನ್ ಅವರು ದಶಕಗಳ ಹಿಂದೆಯೇ ಕನ್ನಡ ಸಿನಿಮಾಗಳನ್ನು ದಕ್ಷಿಣ ಭಾರತದ ಚಿತ್ರರಂಗವಲ್ಲದೆ ಬಾಲಿವುಡ್ ಚಿತ್ರರಂಗ ಕೂಡ ಒಮ್ಮೆ ಕನ್ನಡ ಸಿನಿಮಾಗಳ ಕಡೆ ತಿರುಗಿ ನೋಡುವಂತೆ ಮಾಡಿದ್ದರು. ಪ್ರೇಮಕಥೆಗಳನ್ನು ಹೀಗೂ ಕೂಡ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರೇ ರವಿಚಂದ್ರನ್.

ರವಿಚಂದ್ರನ್ ಅವರು 1986 ಫೆಬ್ರವರಿ 14 ರಂದು ಸುಮತಿ ಎಂಬವರನ್ನು ಅವರನ್ನು ಮದುವೆಯಾಗುತ್ತಾರೆ. ರವಿಚಂದ್ರನ್ ಅವರ ಎಲ್ಲಾ ಏಳು- ಬೀಳು, ಸುಖ-ದುಃಖ ಎಲ್ಲಾ ಸಮಯದಲ್ಲೂ ಸುಮತಿ ಅವರು ಇವರ ಜೊತೆ ನಿಂತು ಧೈರ್ಯ ನೀಡಿದ್ದಾರೆ. ಈ ದಂಪತಿಗೆ ಮನೋರಂಜನ್, ವಿಕ್ರಂ, ಗೀತಾಂಜಲಿ, ಎಂಬ ಮೂವರು ಮಕ್ಕಳು ಇದ್ದಾರೆ. ನಾವೆಲ್ಲರೂ ನೋಡಿರುವಂತೆ ರವಿಚಂದ್ರನ್ ಅವರು ತಮ್ಮ ಹೆಂಡತಿಯನ್ನು ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಮತ್ತು ಟಿವಿ ಚಾನೆಲ್ ಗಳ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರುವುದಿಲ್ಲ. ಯಾಕೆ ಗೊತ್ತಾ.? ಮುಂದೆ ನೋಡಿ..

ನೀವು ಯಾಕೆ ಟಿವಿ ಚಾನಲ್ ಗಳ ಕಾರ್ಯಕ್ರಮಗಳಿಗೆ ಹಾಗೂ ಯಾವುದೇ ಕಾರ್ಯಕ್ರಮಗಳಿಗೆ ನಿಮ್ಮ ಹೆಂಡತಿ ಸುಮತಿ ಅವರನ್ನು ಕರೆದುಕೊಂಡು ಬರುವುದಿಲ್ಲ ಎಂದು ಯಾರೋ ಒಬ್ಬರು ಕೇಳಿದಾಗ ರವಿಚಂದ್ರನ್ ಅವರು ಹೀಗೆ ಉತ್ತರಿಸಿದರು.. “ನಾನು ಆಚೆಕಡೆ ಬಂದಾಗ ನನ್ನ ಅಭಿಮಾನಿಗಳೆಲ್ಲಾ ಸಾಮಾನ್ಯವಾಗಿ ನನ್ನನ್ನು ಸುತ್ತಮುತ್ತುತ್ತಾರೆ. ಆಗ ಸಾಕಷ್ಟು ಗದ್ದಲ ವಾತಾವರಣ ಉಂಟಾಗಿರುತ್ತದೆ. ಅಂತಹ ಸಮಯದಲ್ಲಿ ನಾನು ನನ್ನ ಹೆಂಡತಿಯ ಕಡೆ ಹೆಚ್ಚು ಗಮನ ಕೊಡಲು ಆಗುವುದಿಲ್ಲ ಅಲ್ಲದೇ ಆಕೆಗೂ ಕೂಡ ಗಜಿಬಿಜಿಯ ವಾತಾವರಣ ಎಂದರೆ ಇಷ್ಟವಾಗುವುದಿಲ್ಲ” ಉತ್ತರಿಸಿದ್ದಾರೆ. ಇದರ ಬಗ್ಗೆ ನೀವೇನಂತೀರಿ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ..