Advertisements

ಶಾಲೆ ಬಿಟ್ಟು ಸೈಕಲ್ ನಲ್ಲಿ ರಹಸ್ಯ ವಸ್ತು ಮಾರುತ್ತಿದ್ದ ಹುಡುಗ ಅಸಲಿ ಸತ್ಯ ತಿಳಿದು ಜನಗಳು ಬೆಚ್ಚಿ ಬಿದ್ದರು.!

Kannada News

ನಮಸ್ಕಾರ ವೀಕ್ಷಕರೇ ತಮಿಳುನಾಡಿನ ತಂಜಾವೂರ್ ಜಿಲ್ಲೆಯ ಉಪ್ಪರಗಿ ಎಂಬ ಹಳ್ಳಿಯಲ್ಲಿ ವರದರಾಜನ್ ಎಂಬ ವ್ಯಕ್ತಿ ಗಾರೆ ಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದ, ವರದರಾಜನ್ ಹೆಂಡತಿ ಹೆಸರು ಸುಮತಿ ಈ ದಂಪತಿಗಳಿಗೆ ಹತ್ತನೇ ಕ್ಲಾಸ್ ಓದುತ್ತಿರುವ ಮಗಳು ಮತ್ತು ಆರನೇ ಕ್ಲಾಸ್ ಓದುತ್ತಿರುವ ಮಗ ಇದ್ದ ಕೆಲವರ್ಷಗಳ ಹಿಂದೆ ನರರೋಗ ಸಮಸ್ಯೆಯಿಂದ ವರದರಾಜನ್ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿಬಿಟ್ಟ ಗಂಡ ವರದರಾಜನ್ ಸಂಪಾದನೆ ಮಾಡುವುದನ್ನು ನಿಲ್ಲಿಸಿದ್ದರಿಂದ ಇವರ ಕುಟುಂಬಕ್ಕೆ ಮೂರು ಹೊತ್ತು ಊಟ ಮಾಡಲು ಕೂಡ ಹಣ ಇಲ್ಲದಂತಹ ಪರಿಸ್ಥಿತಿ ಎದುರಾಯಿತು… ಸುಮತಿ ಮನೆಯಿಂದಲೇ ಬಟ್ಟೆ ಹೊಲಿಯುವ ಕೆಲಸ ಮಾಡಿ ಇದರಲ್ಲಿ ಬರುತ್ತಿದ್ದ ಅಲ್ಪ ಆದಾಯದಿಂದಲೇ ತನ್ನ ಗಂಡ ಮತ್ತು ಮಕ್ಕಳನ್ನು ಸಾಕುತ್ತಿದ್ದಳು ಆದರೆ ಕೊರೋನಾ ಲಾಕ್ಡೌನ್ ನಿಂದ ಸುಮತಿ ಬಟ್ಟೆ ಹೊಲಿಯೋ ಕೆಲಸ ಕೂಡ ನಿಂತುಹೋಯಿತು ಒಂದು ಕಡೆ ಕಾಯಿಲೆಯಿಂದ ಮೂಲೆ ಸೇರಿರುವ ಗಂಡ ಮತ್ತೊಂದು ಕಡೆ ಇಬ್ಬರೂ ಶಾಲೆಗೆ ಹೋಗುತ್ತಿರುವ ಮಕ್ಕಳನ್ನು ಸಾಕಲಾಗದೆ ಸುಮತಿ ಒದ್ದಾಡುತ್ತಿದ್ದಳು ಅಮ್ಮನ ಕಷ್ಟ ನೋಡಿ ಸಹಿಸಲಾಗದೆ ಆರನೇಯ ಕ್ಲಾಸ್ ಓದುತ್ತಿದ್ದ ಸುಮತಿ ಮಗ ವಿಷ್ಣು ಅಮ್ಮ ನಾನು ನಾಳೆಯಿಂದ ಕೆಲಸಕ್ಕೆ ಹೋಗಿ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೀನಿ ಎಂದು ತನ್ನ ತಾಯಿಗೆ ಹೇಳಿದ ಮಗನ ಮಾತು ಕೇಳಿ ತಾಯಿ ಸುಮತಿ ಕಣ್ಣಲ್ಲಿ ಕಣ್ಣೀರು ಬರಲು ಶುರುವಾಯಿತು

Advertisements
Advertisements

ಮಗನನ್ನು ಬಾಚಿ ತಬ್ಬಿಕೊಂಡ ಸುಮತಿ ಮಗನೇ ನೀನು ಕೆಲಸಕ್ಕೆ ಹೋಗೋದು ಬೇಡ ನಾನು ನಿನಗೆ ಸಮೋಸ ಬೋಂಡಾ ವಡೆ ಮಾಡಿಕೊಡುತ್ತೀನಿ ಇದನ್ನು ಮಾರಿಕೊಂಡು ಬರುತ್ತೀಯ ಅಂತ ಸುಮತಿ ಕೇಳಿದಳು ಆಯ್ತು ಅಮ್ಮ ಮಾರುತೀನಿ ಎಂದು ವಿಷ್ಣು ಹೇಳಿದ ಅಂದಿನಿಂದ ಅಮ್ಮ ಮಾಡಿಕೊಡುತ್ತಿದ್ದ ಸಮೋಸ ಬೋಂಡ ವಡೆಯನ್ನು ಸೈಕಲ್ ನಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಮಾರಾಟ ಮಾಡಲು ಶುರು ಮಾಡಿದ ವಿಷ್ಣು ಈ ವ್ಯಾಪಾರದಲ್ಲಿ ವಿಷ್ಣುಗೆ ನೂರು ರೂಪಾಯಿ ಆದಾಯ ಪ್ರತಿದಿನ ಬರುತ್ತಿತ್ತು ಮಗ ಸಂಪಾದನೆ ಮಾಡಿ ಕೊಡುತ್ತಿದ್ದ ಇದೆ ನೂರು ರೂಪಾಯಿಯಿಂದಲೇ ಅಮ್ಮ ಸುಮತಿ ಸಂಸಾರ ನಡೆಸುತ್ತಿದ್ದಳು ಪರಿಚಯಸ್ಥರು ವಿಷ್ಣುನ ಶಾಲೆಗೆ ಹೋಗೋದು ಬಿಟ್ಟು ಈ ಸಮೋಸ ಮಾರಲು ಯಾಕೆ ಹೋಗುತ್ತಿದ್ದೀಯಾ ಎಂದು ಕೇಳಿದಾಗ ವಿಷ್ಣು ಈ ರೀತಿ ಉತ್ತರ ಕೊಡುತ್ತಿದ್ದ ಅಪ್ಪ ಗಾರೆ ಕೆಲಸ ಮಾಡುತ್ತಿದ್ದರು ಆದರೆ ಅಪ್ಪನಿಗೆ ಅನಾರೋಗ್ಯ ಆಗಿದ್ದರಿಂದ ಅಪ್ಪ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರು ನಂತರ ಅಮ್ಮ ಮನೆಯಲ್ಲೇ ಬಟ್ಟೆ ಹೊಲಿದು ನಮ್ಮನ್ನೆಲ್ಲ ಸಾಕುತ್ತಿದ್ದರು ಆದರೆ ಕೊರೋನ ಲಾಕ್ಡೌನ್ ಕಾರಣದಿಂದ ಅಮ್ಮನ ಕೆಲಸ ಕೂಡ ನಿಂತುಹೋಯಿತು

ನಾವು ನಾಲ್ಕು ಜನ ಪ್ರತಿದಿನ ಮೂರು ಟೈಮ್ ಊಟ ಮಾಡಬೇಕಲ್ವಾ ಹಸಿವು ಕೇಳಲ್ಲ ಅಣ್ಣ ನನಗೂ ಈಗ ಕಷ್ಟ ಅರ್ಥ ಮಾಡಿಕೊಳ್ಳುವ ವಯಸ್ಸು ಬಂದಿದೆ ತಾನೇ ಅಮ್ಮ ತಿಂಡಿಗಳನ್ನು ಮಾಡಿಕೊಡುತ್ತಾರೆ ನಾನು ಸೈಕಲ್ ನಲ್ಲಿ ಪ್ರತಿದಿನ ಇಪ್ಪತ್ತೈದು ಕಿಲೋಮೀಟರ್ ಸುತ್ತಮುತ್ತ ಇರುವ ಹಳ್ಳಿಗಳಿಗೆ ಸೈಕಲ್ ತುಳಿದುಕೊಂಡು ಹೋಗಿ ವ್ಯಾಪಾರ ಮಾಡಿ ಬರುತ್ತೀನಿ
ಬೆಳಗ್ಗೆ ಎಂಟು ಗಂಟೆಗೆ ಮನೆಬಿಟ್ಟು ವ್ಯಾಪಾರಕ್ಕೆ ಬಂದರೆ ಮತ್ತೆ ಮಧ್ಯಾಹ್ನದ ಮೇಲೆನೆ ವಾಪಸ್ ಮನೆಗೆ ಹೋಗುತ್ತೀನಿ ನನಗಾಗಿ ಅಮ್ಮ ಕಾತುರದಿಂದ ಕಾಯುತ್ತಿರುತ್ತಾರೆ ಕೆಲದಿನ ತಗೊಂಡು ಬಂದ ಎಲ್ಲಾ ತಿಂಡಿಗಳು ಮಾರಾಟವಾಗುತ್ತೆ ಇನ್ನೂ ಕೆಲ ದಿನ ತಗೊಂಡು ಬಂದಿರೋದೆಲ್ಲಾ ಆಗೇ ಇರುತ್ತೆ ಇಂತಹ ದಿನಗಳಲ್ಲಿ ಅಮ್ಮನನ್ನು ನೆನಪಿಸಿಕೊಂಡರೆ ಅಳು ಬರುತ್ತೆ ವಡೆ ಬೋಂಡ ಸಮೋಸ ಅಂತಾ ಜೋರಾಗಿ ಕೂಗಿಕೊಂಡು ಹೋಗುವುದರಿಂದ ಗಂಟಲು ನೋವು ಬರುತ್ತೆ ಸೈಕಲ್ ತುಳಿಯುವುದರಿಂದ ಕಾಲುಗಳು ಭಯಂಕರವಾಗಿ ನೋವಾಗುತ್ತೆ ಇದರ ಬಗ್ಗೆ ಯೋಚಿಸಿದರೆ ನಾಲ್ಕು ಜನಕ್ಕೆ ಅಂದಿನ ದಿನ ಊಟ ಸಿಗೋಲ್ಲ ಎಂದು ಹೇಳಿ ವಿಷ್ಣು ಅವಸರ ಅವಸರವಾಗಿ ಅಲ್ಲಿಂದ ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದ


ವಿಷ್ಣು ತಾಯಿ ಸುಮತಿ ತನ್ನ ಮಗ ಶಾಲೆ ಬಿಟ್ಟು ಸಮೋಸ ವ್ಯಾಪಾರ ಮಾಡಿ ತಮ್ಮನ್ನು ಸಾಕುತ್ತಿರುವುದರ ಬಗ್ಗೆ ಈ ರೀತಿ ಹೇಳುತ್ತಾರೆ, ನನ್ನ ಮಗ ಚೆನ್ನಾಗಿ ಓದಬೇಕು ದೊಡ್ಡ ಆಫೀಸರ್ ಆಗಬೇಕು ಅಂತ ನನಗೆ
ತುಂಬಾ ಆಸೆ ಇತ್ತು ಆದರೆ ಮನೆಯ ಕಷ್ಟಗಳು ಮಗನನ್ನು ಶಾಲೆಗೆ ಹೋಗದಂತೆ ಮಾಡಿದೆ ಹೇಗೋ ನಾನು ಮನೆಯಿಂದಲೆ ಬಟ್ಟೆ ಹೊಲಿದು ಸಂಪಾದನೆ ಮಾಡುತ್ತಿದ್ದೆ ಆದರೆ ಈ ಲಾಕ್ಡೌನ್ ಅದಕ್ಕೂ ಬೆಂಕಿ ಇಟ್ಟಿತು ನನ್ನ ಮಗ ತಂದು ಕೊಡೋ ನೂರು ರೂಪಾಯಿಯಿಂದಲೇ ನನ್ನ ಮನೆ ದೀಪ ಉರಿಯುತ್ತಿದೆ ಶಾಲೆಗೆ ಹೋಗಿ ಓದಬೇಕಾದ ನನ್ನ ಮಗ ವಿಷ್ಣು ಇಂದು ಹಳ್ಳಿಹಳ್ಳಿಗೆ ತಿರುಗಿ ತಿಂಡಿ ವ್ಯಾಪಾರ ಮಾಡಬೇಕಿದೆ ಎಂದು ಹೇಳಿ ಜೋರಾಗಿ ಸುಮತಿ ಅಮ್ಮ ಅಳುತ್ತಾರೆ ಸ್ನೇಹಿತರೆ ಓದಬೇಕಾದ ವಯಸ್ಸಲ್ಲಿ ಮನೆಯ ಕಷ್ಟ ನೋಡಿ ತಾಳಲಾಗದೆ 25 ಕಿಲೋಮೀಟರ್ ಪ್ರತಿದಿನ ಸೈಕಲ್ ತುಳಿದು ವ್ಯಾಪಾರ ಮಾಡಿ ಸಂಸಾರ ಸಾಕುತ್ತಿರುವ ವಿಷ್ಣುವಿನ ಗುಣ ನಿಮಗೆ ಇಷ್ಟವಾಗಿದ್ದಾರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ