Advertisements

ರೆಕ್ಕೆ ಪುಕ್ಕ ಅಲ್ಲ, ತಲೆ ತೆಗಿಯೋನು ನಾನು.! ಅಂತ ಡಿ ಬಾಸ್ ಹೇಳಿದ್ದೇಕೆ ಗೊತ್ತಾ..?

Cinema Kannada News

ನಮಸ್ತೆ ಸ್ನೇಹಿತರೆ, ಡಿ ಬಾಸ್ ದರ್ಶನ್ ಅವರ ಹೆಸರನ್ನು ಬಳಸಿಕೊಂಡು ನಡೆದಿರುವ ಒಂದು ಕೋಟಿ ರೂ. ವಂಚನೆಯ ಪ್ರಕರಣದ ವಿಷಯವಾಗಿ ಇತ್ತೀಚಿಗೆ ಡಿ ಬಾಸ್ ಅವರು ತಮ್ಮ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಎಸಿಪಿ ಆಫೀಸ್ ನಿಂದ ಆಚೆ ಬಂದ ಡಿ ಬಾಸ್ ಅವರು ಈ ಪ್ರಕರಣದ ವಿಚಾರವಾಗಿ ಮಾದ್ಯಮಗಳ ಸಮ್ಮುಖದಲ್ಲಿ ಮಾತನಾಡಿದ್ದಾರೆ. ಡಿ ಬಾಸ್ ಅವರು ಮಾತನಾಡುತ್ತಾ ಪ್ರಕರಣದಲ್ಲಿ ಯಾರೇ ಬಾಗಿಯಾಗಿರಲಿ ನಾನು ನಾನು ಮಾತ್ರ ಅವರನ್ನು ಬಿಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಪ್ರಶ್ನೆಯಾಗಿ ಒಂದು ಮಾಧ್ಯಮದವರು ನೀವು ಆ ಕಿಡಿಗೇಡಿಗಳ ರೆಕ್ಕೆ-ಪುಕ್ಕ ವನ್ನು ಯಾವಾಗ ತೆಗೆಯುತ್ತೀರಾ.? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಡಿ ಬಾಸ್ ಕೊಟ್ಟ ಉತ್ತರ ಏನು ಗೊತ್ತಾ..? ಮುಂದೆ ಓದಿ

Advertisements
Advertisements

ಡಿ ಬಾಸ್ ಅವರು, ನನಗೂ ಸಹಾ ಇದು ಯಕ್ಷ ಪ್ರಶ್ನೆಯಾಗಿದೆ‌. ಪೋಲೀಸರ ಬಳಿ ಮಾತು ಮುಗಿಸಿದ್ದೇನೆ, ವಿಚಾರಣೆ ಸಕ್ರಿಯವಾಗಿ ನಡೆಯುತ್ತಿದೆ. ಈ ಬಗ್ಗೆ ಮಾತನಾಡಲು ನನಗೆ ಸ್ವಲ್ಪ ಸಮಯ ಕೊಡಿ” ಎಂದಿದ್ದಾರೆ.‌ ಸುಮ್ಮನೆ ನನ್ನ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡಲಾಗುತ್ತಿದೆ. ವಿಚಾರಣೆ ಬಳಿಕ ನಿಮಗೆಲ್ಲರಿಗೂ ಸಂಪೂರ್ಣ ಮಾಹಿತಿ ನಾನೆ ನೀಡುತ್ತೇನೆ” ಎಂದಿದ್ದಾರೆ. ಅಲ್ಲದೇ ಅವರು ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ “ರೆಕ್ಕೆ-ಪುಕ್ಕ ಅಲ್ಲ ನಾನು ತಲೆನೇ ಕಟ್ ಮಾಡೋನು, ಯಾರೆ ಆದರು ನಾನು ಬಿಡಲ್ಲ” ಎಂದು ಆ ಕಿಡಿಗೇಡಿಗಳಿಗೆ ವಾರ್ನಿಂಗ್ ಮಾಡಿದ್ದಾರೆ.

ನಿರ್ಮಾಪಕ ಉಮಾಪತಿ ಈ ವಿಷಯದ ಅಂಗವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ, ಈ ಪ್ರಕರಣ ಸುಮಾರು ಎರಡು ತಿಂಗಳಿನಿಂದ ನಡೆಯುತ್ತಿದೆ, ಮಹಿಳೆ ಇಬ್ಬರು ಫೋನ್ ಮಾಡಿ ನೀವು ಮತ್ತು ದರ್ಶನ್ ಅವರು ಲೋನ್ ಪಡೆಯುತ್ತಿದ್ದೀರಾ? ಅಥವಾ ಶ್ಯೂರಿಟಿ ಸಹಿ ಹಾಕಿದ್ದೀರಾ? ಎಂದು ಪ್ರಶ್ನೆ ಕೇಳಿದರು. ಅದಾದ ನಂತರ ವಿಚಾರಿಸಿದಾಗ ಯಾರೂ ಲೋನ್ ಪಡೆದಿಲ್ಲ ಎಂದು ತಿಳಿದಿದೆ, ಎಲ್ಲರೂ ಮಾತನಾಡಿದ ನಂತರ ಜೂನ್ 16 ರಂದು ಬೆಂಗಳೂರಿನ ಜಯನಗರದಲ್ಲಿ ದೂರನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.