Advertisements

ಅಭಿಮಾನಿಗಳಿಗೆ ಮದುವೆ ಬಗ್ಗೆ ಸಿಹಿ ಸುದ್ದಿ ನೀಡಿದ ಡಾಲಿ ಅಮೃತ! ನೋಡಿ..

ನಮ್ಮ ಕನ್ನಡ ಚಿತ್ರರಂಗದ ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವವರು ನಟ ಡಾಲಿ ಧನಂಜಯ್. ಹೌದು ಪುಟ್ಟ ಗ್ರಾಮದಲ್ಲಿ ಹುಟ್ಟಿ ಸಾವಿರಾರು ಕನಸುಗಳನ್ನು ಕಂಡು ಇಂದು ಈ ಎತ್ತರಕ್ಕೆ ಏರಿರುವವರು ನಟ ಧನಂಜಯ್. ಸದ್ಯ ನಟನಾಗಿ ಯಶಸ್ಸು ಪಡೆಯಲು ಹರಸಾಹಸ ಪಟ್ಟು ಅವಮಾನಗಳನ್ನು ಸಹಿಸಿ ತದ ನಂತರ ವಿಲ್ಲನ್ ಆಗಿ ಹೆಸರು ಮಾಡಿದರು. ಟಗರು ಸಿನಿಮಾ ಇವರ ಕೆರಿಯರ್ ಸ್ಥಿತಿ ಗತಿಯನ್ನೇ ಬದಲಾಯಿಸಿದ್ದು ಎಂಥದ್ದೇ ಪಾತ್ರ ಕೊಟ್ಟರು ಕೂಡ ಧನಂಜಯ್ ಅದ್ಭುತವಾಗಿ ನಟಿಸುತ್ತಾರೆ ಎನ್ನುವುದು ಎಲ್ಲರಿಗೂ ಅರ್ಥವಾಯಿತು. ಹೌದು ಬಡವ ರಾ-ಸ್ಕಲ್ ಸಿನಿಮಾ ಮೂಲಕ ನಟ ಧನಂಜಯ್ ಅವರು ನಿರ್ಮಾಪಕ ಸಹ ಆಗಿದ್ದು ಸದ್ಯ ಇತ್ತೀಚೆಗೆ ತೆರೆಕಂಡ ಬಡವ ರಾಸ್ಕಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಹೌದು ಯುವಕ ಯುವತಿಯರು ಈ ಸಿನಿಮಾ ಭಾರಿ ಮೆಚ್ಚುಗೆಯಾಗಿದೆ ಎನ್ನಬಹುದು.

Advertisements
Advertisements

ಇನ್ನು ಎಲ್ಲೆಲ್ಲೂ ಈಗ ಡಾಲಿ ಹವಾ ಎಂದರೆ ತಪ್ಪಾಗುವುದಿಲ್ಲ. ಹೌದು ಮೊದಲಿಗೆ ರತ್ನನ್ ಪ್ರಪಂಚ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದು ತದನಂತರ ಈಗ ಬಡವ ರಾಸ್ಕಲ್ ಸಿನಿಮಾ ಸೂಪರ್ ಹಿಟ್ ಆಗಿದೆ. ಹೌದು ಈ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ಸ್ ಗಳ ಜೊತೆಗೆ ಜನರಿಗೆ ಇಷ್ಟವಾಗಿರುವುದು ಧನಂಜಯ್ ಅಮೃತಾ ಅಯ್ಯಂಗಾರ್ ಲವ್ ಸ್ಟೋರಿ. ಹೌದು ಇವರಿಬ್ಬರ ಮುದ್ದಾದ ಲವ್ ಸ್ಟೋರಿಯನ್ನು ಈಗಿನ ಜೆನೆರೇಷನ್ ಬಹಳ ಇಷ್ಟಪಟ್ಟಿದ್ದು ಬಡವ ರಾಸ್ಕಲ್ ಸಕ್ಸಸ್ ಇಂದಾಗಿ ನಟ ಧನಂಜಯ್ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಜೀಕನ್ನಡ ವಾಹಿನಿಯ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಧನಂಜಯ್ ಮತ್ತು ಅವರ ಸ್ನೇಹಿತರು ಬಂದಿದ್ದು ನಟಿ ಅಮೃತಾ ಅಯ್ಯಂಗಾರ್ ಅವರು ಸಹ ಶೋಗೆ ಬಂದಿದ್ದರು.

ಇನ್ನು ಶೋನಲ್ಲಿ ನಟ ಗಣೇಶ್ ಅವರು ರೊಮ್ಯಾಂಟಿಕ್ ಆಗಿ ಅಮೃತಾ ಅವರಿಗೆ ಪ್ರೊಪೋಸ್ ಮಾಡಬೇಕು ಎಂದು ಹೇಳಿದ್ದು ಧನಂಜಯ್ ಅವರು ಸುಂದರವಾಗಿ ಅಮೃತಾ ಅವರಿಗೆ ಪ್ರೊಪೋಸ್ ಮಾಡಿದರು. ಹೌದು ಅಮೃತಾ ಅವರು ಧನಂಜಯ್ ಅವರಿಗೆ ಕವಿತೆ ಹೇಳುವ ಮೂಲಕ ಮುದ್ದಾಗಿ ಪ್ರೊಪೋಸ್ ಮಾಡಿದ್ದು ಅವರಿಬ್ಬರು ಪ್ರೊಪೋಸ್ ಮಾಡಿದ ಆ ಸನ್ನಿವೇಶ ಬಹಳ ನೈಜವಾಗಿತ್ತು. ಹಾಗಾಗಿ ವೀಕ್ಷಕರು ಡಾಲಿ ಧನಂಜಯ್ ಮತ್ತು ಅಮೃತಾ ಇಬ್ಬರು ನಿಜ ಜೀವನದಲ್ಲಿ ಪ್ರೀತಿ ಮಾಡುತ್ತಿದ್ದು ಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಇದರ ಬಗ್ಗೆ ಖುದ್ದು ಅಮೃತಾ ಅವರು ಹೇಳುವುದೇ ಬೇರೆ. ಹೌದು ಈ ಜೋಡಿ ಹೇಳುವ ಹಾಗೆ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದು ಬೇರೆ ಏನು ಇಲ್ಲ ಎಂದು ಹೇಳಿದ್ದಾರೆ

ಇನ್ನು ಕಾರ್ಯಕ್ರಮದಲ್ಲಿ ಟಾಸ್ಕ್ ಗಾಗಿ ಪ್ರೊಪೋಸ್ ಮಾಡಿದ್ದು ಜೊತೆಗೆ ನಾವು ಹೆಚ್ಚಿನ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸುತ್ತಿರುವ ಕಾರಣ ಈ ರೀತಿಯ ಸುದ್ದಿ ಹಬ್ಬಿದೆ ಅನಿಸುತ್ತದೆ ಆದರೆ ಅವುಗಳನ್ನು ನೋಡಿ ನಾವು ಲವರ್ಸ್ ಎಂದು ಹೇಳುವುದು ಸರಿಯಲ್ಲ ಆ ರೀತಿ ಏನು ಇಲ್ಲ ಎಂದು ಹೇಳಿದ್ದಾರೆ ಅಮೃತಾ. ಆದರೆ ಅಭಿಮಾನಿಗಳು ಈ ಮಾತನ್ನು ನಂಬಲು ತಯಾರಿಲ್ಲ. ಇನ್ನು ಡಾಲಿ ಧನಂಜಯ್ ಅವರು ಈ ವಿಚಾರದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೌದು ಹಾಗಾಗಿ ಧನಂಜಯ್ ಅವರು ಇದರ ಬಗ್ಗೆ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದ್ದು ಒಂದು ಮೂಲದ ಪ್ರಕಾರ ಡಾಲಿ ಧನಂಜಯ್ ಹಾಗು ಅಮೃತ ಅಯಂಗಾರ್ ಅವರು ಸದ್ಯ ಪ್ರೇಮಿಗಳಾಡಿದ್ದು ಮುಂದಿನ ವರ್ಷ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ.