ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಕೂಡ ತಾನು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ತುಂಬಾನೇ ಕಷ್ಟ ಪಟ್ಟು ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ.. ಈಗೆ ವಿದ್ಯಾಭ್ಯಾಸ ಮುಗಿಸಿದ ಬಳಿಕ ತಮ್ಮ ಜೀವನದಲ್ಲಿ ತಂದೆ ತಾಯಿಯನ್ನು ಚನ್ನಾಗಿ ನೋಡಿಕೊಳ್ಳಲು ಕೆಲಸವನ್ನು ಹುಡುಕಿಕೊಂಡು ಹೋಗುತ್ತಾರೆ, ಹಲವು ಕಡೆ ಕೆಲಸವನ್ನು ಹುಡುಕಿಕೊಂಡು ಹೋಗಿ ಎಲ್ಲಿಯೂ ಸಿಗದೆ ಬೇಸತ್ತು ಮನೆಯಲ್ಲಿಯೇ ಇದು ಬಿಡುತ್ತಾರೆ.. ಆದರೆ ಇಲ್ಲೊಬ್ಬ ವ್ಯಕ್ತಿ ಮನೆಯಲ್ಲಿಯೇ ಕುಳಿತು ಸುಮಾರು ೧ ಕೋಟಯಷ್ಟು ಹಣವನ್ನು ಸಂಪಾದನೆ ಮಾಡಿದ್ದಾನೆ..

ಹೌದು ಈ ಹುಡುಗನ ಹೆಸರು ಯುವರಾಜ್ ಎಂದು ಇವನ ವಯಸ್ಸು ೧೮ ವರ್ಷ ಇವರು ಮನೆಯಲ್ಲಿ ತುಂಬಾ ಬಡತನ ಇನ್ನು ಕೋ’ರೋನ ಸಮಯದಲ್ಲಿ ಹಣಕ್ಕೆ ತುಂಬಾನೇ ತೊಂದರೆಯಾಗಿತ್ತು ಹಾಗು ಇವರ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದರು.. ದಿನದ ಸಂಪಾದನೆಯಿಂದಲೇ ಇವರ ಜೀವನ ನಡೆಯುತ್ತಿತ್ತು.. ಕೋ’ರೋನ ಸಮಯದಲ್ಲಿ ಯುವರಾಜ ಅವರ ತಂಗಿ ಒಂದು ಮೊಬೈಲ್ ಫೋನ್ ಖರೀದಿ ಮಾಡಲು ತುಂಬಾನೇ ಕಷ್ಟ ಪಟ್ಟರು ಈಗೆ ಮೊಬೈಲ್ ಫೋನ್ ಖರೀದಿಸಲು ಪ್ರತಿ ನಿತ್ಯ ಇಬ್ಬರೂ ಸೇರಿ ಹಣವನ್ನು ಕೂಡಿಟ್ಟು ಕೊನೆಗೆ ಒಂದು ದಿನ ಹೊಸ ಮೊಬೈಲ್ ಫೋನ್ ಅನ್ನು ಖರೀದಿ ಮಾಡಿದರು ಈಗೆ ಯುವರಾಜ ಮೊಬೈಲ್ ತಂದ ಬಳಿಕ ಬಿಡುವಿನ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತಾನು ಮಾಡುತ್ತಿದ್ದ ತಮಾಷೆ ವಿಡಿಯೋವನ್ನು ಶೇರ್ ಮಾಡುತ್ತಿದ್ದರು ಈಗೆ ಯುವರಾಜ ಕಲೆಗೆ ಯಾರು ಕೂಡ ಪ್ರೋತ್ಸಾಹ ಮಾಡಲಿಲ್ಲ, ಆದರೆ ಯುವರಾಜ ತಂಗಿ ಸದಾ ತನ್ನ ಬೆಂಗಾವಲಾಗಿ ಇರುವಳು ಎಂದು ನಂಬಿ ತನ್ನ ಪ್ರಯತ್ನವನ್ನು ಬಿಡಲಿಲ್ಲ..

ಈಗೆ ಯುವರಾಜ ಸತತ ೭ ತಿಂಗಳುಗಳ ಕಾಲ ತಮಾಷೆ ನೃತ್ಯವನ್ನು ಮಾಡುತ್ತಿದ್ದರು.. ಆದರೆ ಒಂದು ದಿನ ನೃತ್ಯ ಮಾಡುತ್ತಿದಂತೆ ಮೈಕೆಲ್ ಜಾಕ್ಸನ್ ರೀತಿ ಡ್ಯಾನ್ಸ್ ಮಾಡುವುದನ್ನು ಕಲಿತು ಬಿಟ್ಟರು.. ನಂತರ ಹಲವು ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು ನಂತರ ಯುವರಾಜ ಮಾಡುವ ಮೈಕೆಲ್ ಜಾಕ್ಸನ್ ರೀತಿಯ ನೃತ್ಯ ನೋಡಿ ಜನರು ತುಂಬಾ ಇಷ್ಟ ಪಟ್ಟು ಯುವರಾಜ ನನ್ನ ಹೊಗಳುತ್ತಿದ್ದರು, ಇವನನ್ನು ‘ಬಾಬಾ ಜಾಕ್ಸನ್’ ಎಂದು ಕರೆಯುತ್ತಿದ್ದರು.. ತನ್ನ ನೃತ್ಯದಿಂದಲೇ ತುಂಬಾನೇ ಫೇಮಸ್ ಹಾಗಿದ್ದರೂ… ಫೇಮಸ್ ಆದಾ ಬಳಿಕ ‘ಫ್ಲಿಪ್ಕಾರ್ಟ ಕಂಪನಿ ‘ಸ್ಟೇ ಹೋಮ್’ ಎಂಬ’ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪರ್ಧೆ ಆಯೋಜಿಸಿದರು.

ಇನ್ನು ಈ ಸ್ಪರ್ಧೆಯಲ್ಲಿ ತಮ್ಮ ಮನೆಯಲ್ಲಿಯೇ ಕುಳಿತು ರಂಜಿಸಿದವರಿಗೆ ೧೦ ಲಕ್ಷ ರೂಪಾಯಿ ಹಾಗೂ ಕೊನೆಯದಾಗಿ ಇದರಲ್ಲಿ ಗೆದ್ದವರಿಗೆ ೧ ಕೋಟಿ ರೂಪಾಯಿಯಷ್ಟು ಬಹುಮಾನವನ್ನು ನೀಡಲಾಯಿತು.. ಇನ್ನು ಈ ಸ್ಪರ್ಧೆಯಲ್ಲಿ ಯುವರಾಜ ಪ್ರಥಮ ಸ್ಥಾನ ಪಡೆದು ಕೊನೆಯದಾಗಿ ನೀಡಬೇಕಾದ ೧ ಕೋಟಿ ಬಹುಮಾನ ಯುವರಾಜಗೆ ಸಿಕ್ಕಿತ್ತು, ತಾನು ಕಲಿತ ನೃತ್ಯದಿಂದ ೧ ಕೋಟಿ ಹಣವನ್ನು ಸಂಪಾದನೆ ಮಾಡಿ ಒಬ್ಬ ಸೆಲೆಬ್ರಿಟಿಯಾಗಿ ಕೋಟ್ಯಾಧೀಶ್ವರನಾದ.. ಫ್ರೆಂಡ್ಸ್ ಇದರಲ್ಲಿ ನಾವು ಅರ್ಥಮಾಡಿಕೊಳ್ಳ ಬೇಕಾಗಿರುವುದು ಜೀವನದಲ್ಲಿ ಯಾರು ಬೇಕಾದರೂ ಕೈ ಕೊಡಬಹುದು ಆದರೆ ನಾವು ಕಲಿತ ವಿದ್ಯೆ ಎಂದಿಗೂ ಕೂಡ ಕೈ ಬಿಡುವುದಿಲ್ಲ ಒಂದಲ್ಲ ಒಂದು ದಿನ ನಾವು ಕಲಿತ ವಿದ್ಯೆಯೇ ನಮ್ಮನ್ನು ದೊಡ್ಡ ಮಟ್ಟಿಗೆ ತರುತ್ತದೆ…