Advertisements

ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನೇ ಖರೀದಿ ಮಾಡಿದ್ರೂ! ಡಿಬಾಸ್ ಗೆ ಇದೊಂದು ಕಾರು ಖರೀದಿಸುವ ಆಸೆ ಇದೆಯಂತೆ! ಯಾವುದು ಗೊತ್ತಾ?

Cinema

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರುಗಳು ಎಂದರೆ ಸಿಕ್ಕಾಪಟ್ಟೆ ಇಷ್ಟ ಹಾಗೂ ದೊಡ್ಡ ಮಟ್ಟದ ಕ್ರೇಜ್ ಹೊಂದಿದ್ದಾರೆ. ಹೊಸದಾಗಿ ಯಾವುದಾದರೂ ಕಾರು ಬಂದಿದೆ ಅಂದರೆ ಆ ಕಾರನ್ನ ಡ್ರೈವ್ ಮಾಡಬೇಕು ಅಥವಾ ಆ ಕಾರನ್ನ ಖರೀದಿ ಮಾಡಬೇಕು ಎಂಬ ಆಸೆ ಅವರಿಗಿರುತ್ತದೆ.ಅದರಂತೆ ಹೊಸ ಹೊಸ ಕಾರುಗಳನ್ನ ಖರೀದಿ ಮಾಡುತ್ತಲೇ ಇರುವ ಡಿ ಬಾಸ್ ಈಗಾಗಲೇ ಮನೆಯಲ್ಲಿ ಹಲವು ದುಬಾರಿ ಕಾರು ಇದ್ದರೂ ಕೂಡ ಮಾರುಕಟ್ಟೆಯಲ್ಲಿ ಬರುವ ಹೊಸ ಹೊಸ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ.

Advertisements
Advertisements

ಡಿ ಬಾಸ್ ಬಳಿ ಈಗಾಗಲೇ ಲಂಬೋರ್ಗಿನಿ ಕಾರು ಒಂದಿದ್ದು ಇದೀಗ ಇದರ ಬೆನ್ನಲ್ಲೇ ಮತ್ತೊಂದು ಲಂಬೋರ್ಗಿನಿ ಕಾರನ್ನ ಕೂಡ ಖರೀದಿಸಿದ್ದರು. ಹೌದು ಬಿಳಿ ಬಣ್ಣದ ಲಂಬೋರ್ಗಿನಿ ಅವೆಂಟೆಡರ್ ಇಟ್ಟುಕೊಂಡಿದ್ದ ದರ್ಶನ್ ಲಂಬೋರ್ಗಿನಿ ಉರುಸ್ ಕಾರು ಕೂಡ ಖರೀದಿ ಮಾಡಿದ್ದರು. ಅಂದ್ಹಾಗೆ ಲಂಬೋರ್ಗಿನಿ ಅವೆಂಟೆಡರ್ 5 ಕೋಟಿ ಬೆಲೆ ಹೊಂದಿದ್ದು ದರ್ಶನ್ ಖರೀದಿ ಮಾಡಿರುವ ಮತ್ತೊಂದು ಕಾರಿನ ಬೆಲೆ ಸುಮಾರು 3 ಕೋಟಿ ಎಂದೇ ಹೇಳಲಾಗುತ್ತಿದೆ. ಹಳದಿ ಬಣ್ಣ ಕಾರು ಈಗ ತೂಗುದೀಪ ನಿಲಯಕ್ಕೆ ಮತ್ತಷ್ಟು ಮೆರಗು ನೀಡಿದ್ದು ಅಭಿಮಾನಿಗಳು ಕೂಡ ದಚ್ಚು ಅವರ ಕಾರುಗಳನ್ನು ನೋಡಿ ಸಂತಸ ಪಟ್ಟಿದ್ದಾರೆ.

ಸಹಜವಾಗಿ ದರ್ಶನ್ ಹೊಸ ಕಾರು ಖರೀದಿಸಿದಾಗ ಕೆಲವು ಸ್ನೇಹಿತರು ಆತ್ಮೀಯರು ಅವರ ಮನೆಗೆ ಹೋಗುವುದು ಸಾಮಾನ್ಯ ಹಾಗೂ ವಿಚಾರಗಳು ಎಲ್ಲರಿಗೂ ತಿಳಿದಿದೆ. ಇನ್ನೂ ಇತ್ತೀಚೆಗೆ ಡಿ ಬಾಸ್ ಖರೀದಿ ಮಾಡಿದ್ದ ಹೊಸ ಕಾರಿನ ಬಳಿ ಡಿ ಬಾಸ್ ಜೊತೆ ಬಜಾರ್ ಖ್ಯಾತಿಯ ಧನ್ವೀರ್ ಫೋಟೋ ತೆಗೆಸಿಕೊಂಡಿದ್ದು ಈ ಫೋಟೋ ಕೂಡ ವೈರಲ್ ಆಗಿತ್ತು.ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಕಳೆದ ವರುಷ ಮಾರ್ಚ್ ತಿಂಗಳಲ್ಲಿ ಲಂಬೋರ್ಗಿನಿ ಉರುಸ್ ಕಾರು ಖರೀದಿ ಮಾಡಿದ್ದು ನೀಲಿ ಬಣ್ಣದ ಕಾರನ್ನ ಪುನೀತ್ ದಂಪತಿ ತೆಗೆದುಕೊಂಡಿದ್ದರು.

ಸದ್ಯ ಈಗ ದರ್ಶನ್ ರವರು ಡ್ರೀಮ್ ಕಾರ್ ಬಗ್ಗೆ ಮಾತನಾಡಿತ್ತು ಸದ್ಯಕ್ಕೆ ನಾನು ಆ ಕಾರನ್ನು ಇಳಿಸಬೇಕು ಎಂಬ ಆಸೆಯಿದೆ. ಇಷ್ಟೊತ್ತಿಗಾಗಲೇ ಇಳಿಸಿ ಬಿಡುತ್ತಿದ್ದೆ ಆದರೆ ನಮ್ಮ ಬೆಂಗಳೂರಿನಲ್ಲಿ ಅದರದ್ದು ಶೋರೂಂ ಇಲ್ಲ. ಮುಂಬೈನಲ್ಲಿ ಇದೆ ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಹಮ್ಮರ್ ಕ್ರೇಸ್ ನಲ್ಲಿ ನಾನು ಹಮ್ಮರ್ ಕಾರೊಂದನ್ನ ತೆಗೆದುಕೊಂಡೆ. ಹೊರಗಡೆಯಿಂದ ಹಮ್ನರ್ ಅಷ್ಟೆ ಒಳಗಡೆ ನೋಡಿದರೆ 800 ಗಿಂತ ಕಚಡಾ ಗಾಡಿ.ಎಸಿ ಇಲ್ಲ ಸೀಟ್ ಅಡ್ಜೆಸ್ಟ್ ಆಗಲ್ಲ . ಇನ್ನು ಇದರ ಶೋರೂಮ್ ಇಲ್ಲೆಲ್ಲೂ ಇಲ್ಲ ದುಬೈಯಿಂದ ಬರಬೇಕಿತ್ತು ನಾವೆಲ್ಲರೂ ಸೇರಿ ಹಮ್ಮರ್ ಗ್ರೂಪ್ ಎಂದು ಮಾಡಿಕೊಂಡೆವು.

ಯಾರದೇ ಕಾರು ತೊಂದರೆ ಬಂದರೂ ಕೂಡ ಎಲ್ಲರೂ ಗ್ರೂಪ್ ನಲ್ಲಿ ಮೆಸೇಜ್ ಹಾಕಿ ಹಣ ಕಲೆಕ್ಟ್ ಮಾಡಿ ಅವನನ್ನು ಕರೆಸುತ್ತಿದ್ದೆವು. ಈ ಕಷ್ಟ ನೋಡೆ ನಾನು ಆ ಗಾಡಿಯನ್ನ ಕೊಟ್ಟುಬಿಟ್ಟೆ. ಅವತ್ತಿಂದ ಒಂದು ಅನಿಸಿತು ಯಾವುದೇ ಇಂಪೋರ್ಟೆಡ್ ಕಾರ್ ತೆಗೆದುಕೊಂಡರು ಕೂಡ ಅದು ನಮ್ಮ ಇಂಡಿಯದಲ್ಲಿ ಶೂರೂಂ ಇರಬೇಕು. ಇಲ್ಲ ಅದರ ಸಹವಾಸವೇ ಬೇಡ . ಸದ್ಯ ನನ್ನ ಡ್ರೀಮ್ ಬೆಂಟ್ಲಿ ಆಗಿದ್ದು ಅದರ ಶೋರೂಮ್ ದೆಹಲ್ಲಿಯಲ್ಲಿದೆ. ಇದರ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ ಆದಷ್ಟು ಬೇಗ ತೆಗೆದುಕೊಳ್ಳುತ್ತದೆಯೆಂದು ಡಿ ಬಾಸ್ ಹೇಳಿದ್ದಾರೆ .