Advertisements

ಸ್ಟಾರ್ ನಟ ಧನುಷ್ ರನ್ನು ತರಾಟೆಗೆ ತೆಗೆದುಕೊಂಡು ಹೈಕೋರ್ಟ್..! ಕಾರಣ ತಿಳಿದರೆ ನೀವು ಛೀ ಅಂತೀರಾ..

Cinema Kannada News

ನಮಸ್ತೆ ಸ್ನೇಹಿತರೆ, ಧನುಶ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಧನುಷ್ 28 ಜುಲೈ 1983 ರಲ್ಲಿ ತಮಿಳುನಾಡಿನ ಚೆನೈನಲ್ಲಿ ಜನಿಸಿದರು. ಇವರ ತಂದೆ ಕಸ್ತೂರಿ ರಾಜ್ ಮತ್ತು ತಾಯಿ ವಿಜಯಲಕ್ಷ್ಮಿ. ಇವರ ಪತ್ನಿ ರಾಜಿನಿಕಾಂತ್ ರವರ ಪುತ್ರಿಯಾದ ಐಶ್ವರ್ಯ ಧನುಶ್, ಹಾಗೂ ಇವರಿಗೆ ಇಬ್ಬರು ಮಕ್ಕಳು. ಧನುಶ್ ರವರ ಅಣ್ಣ ಸೆಲ್ವರಾಘವನ್.‌ ಧನುಶ್ ರವರು ಭಾರತೀಯ ಪ್ರಸಿದ್ಧ ಚಿತ್ರ ನಟರು, ತಮಿಳು ಚಿತ್ರರಂಗದಲ್ಲಿ ಹೆಸರಾಂತ ನಟರಾಗಿದ್ದಾರೆ. ಧನುಶ್ ಅವರು ಕೇವಲ ತಮಿಳು ಮಾತ್ರವಲ್ಲದೆ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ನಟಿಸಿದ್ದಾರೆ. ಇಂತಹ ಸೂಪರ್ ನಟನಿಗೆ ಚೆನ್ನೈ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕಾರಣ ಏನು ಗೊತ್ತಾ.. ಮುಂದೆ ಓದಿ..

Advertisements
Advertisements

ನಟ ಧನುಶ್ ಅವರು ತಾವು ಖರೀದಿ ಮಾಡಿದ್ದ ಐಷಾರಾಮಿ ರೋಲ್ಸ್ ರಾಯ್ ಘೋಷ್ ಕಾರಿಗೆ ಆಮದು ತೆರಿಗೆ ವಿನಾಯಿತಿ ಕೇಳಿ ಕೋರ್ಟ್ನಲ್ಲಿ ಮನವಿ ಮಾಡಿದ್ದರು. ನಟ ಧನುಶ್ ಮೂವತ್ತು ಲಕ್ಷ ತೆರಿಗೆ ಪಾವತಿಯ ವಿಚಾರವಾಗಿ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಅವರು ಸಿನಿಮಾ ನಟರು ತಮ್ಮ ನಿಜ ಜೀವನದಲ್ಲಿಯೂ ಕೂಡ ಹೀರೋ ರೀತಿಯಾಗಿ ವರ್ತಿಸಬಾರದು. ಸಮಾಜದಲ್ಲಿ ನಿಮ್ಮನ್ನು ಒಂದಷ್ಟು ವರ್ಗದ ಯುವ ಸಮುದಾಯ ನಿಮ್ಮನ್ನು ಆದರ್ಶವಾಗಿ ಇಟ್ಟುಕೊಂಡು ಫಾಲೋ ಮಾಡುತ್ತಾರೆ. ಹಾಗಾಗಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಇರುವ ಸಿನಿಮಾ ನಟರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಅಂತ ಮದ್ರಾಸ್ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ.

ತೆರಿಗೆ ವಂಚನೆಯು ರಾಷ್ಟ್ರ ವಿರೋಧಿ ಎಂದು ನೆನಪಿನಲ್ಲಿಟ್ಟುಕೊಂಡು ವರ್ತಿಸಬೇಕು. ಇನ್ನು ನಟ ಧನುಶ್ ಅವರು ಅರ್ಜಿಯಲ್ಲಿ ತಾನು ನಟ ಎಂದು ನಮೂದಿಸಿರಲಿಲ್ಲ, ಇದರ ಬಗ್ಗೆಯೂ ಸಹ ನ್ಯಾಯಮೂರ್ತಿಗಳು ಪ್ರಶ್ನೆ ಹಾಕಿದ್ದರು. ಇದಕ್ಕೆ ಧನುಶ್ ಅವರ ವಕೀಲರು ಈ ರೀತಿ ಉತ್ತರ ನೀಡಿದ್ದಾರೆ, ಧನುಶ್ ಅವರ ಮೊದಲಿನ ವಕೀಲರಾದ ವಿಜಯನ್ ಸುಬ್ರಮಣಿಯನ್ ಅವರು ನಿಧನರಾದ ಕಾರಣ ಇದರ ಬಗ್ಗೆ ಧನುಶ್ ಅವರಿಗೆ ಮಾಹಿತಿ ಇಲ್ಲ. ಜೊತೆಗೆ ನಟ ಧನುಶ್ ಅವರು ಸಂಪೂರ್ಣವಾಗಿ ತೆರಿಗೆ ಪಾವತಿಸುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧನುಶ್ ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಗೆ ಮದ್ರಾಸ್ ಹೈ ಕೋರ್ಟ್ ತರಾಟೆ ತೆಗೆದುಕೊಂಡಿದೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.