ನಮಸ್ತೆ ಸ್ನೇಹಿತರೆ, ಮಹೇಂದ್ರ ಸಿಂಗ್ ಧೋನಿ ನಮ್ಮ ಭಾರತ ಕ್ರಿಕೆಟ್ ನ ಲೆ’ಜೆಂಡ್ ಎಂದರೆ ತ’ಪ್ಪಲ್ಲ. ಧೋನಿ ಅವರು ಈಗ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ವಿ’ದಾಯ ಹೇಳಿದ್ದಾರೆ. ಧೋನಿಯವರಿಗೆ ಒಂದು ಮುದ್ದಾದ ಪುಟ್ಟ ಐದು ವರ್ಷದ ಮಗಳು ಸಹ ಇದ್ದಾಳೆ. ಧೋನಿ ಅವರ ಮಗಳ ಹೆಸರು ಝೀ’ವ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಪುತ್ರಿ ಝೀ’ವ ಕೂಡ ತಮ್ಮ ಅಪ್ಪನಂತೆ ಮಹತ್ತರ ಹೆಜ್ಜೆಗಳನ್ನು ಅನುಸರಿಸಲು ಶುರುಮಾಡಿದ್ದಾಳೆ. ಝೀ’ವ ಇನ್ನೂ ಕ್ರಿಕೆಟ್ ಮೈದಾನಕ್ಕೆ ಇಳಿದು ಬ್ಯಾಟ್ ಬೀ’ಸಲು ಸಾಧ್ಯವಾಗುವುದಿಲ್ಲ, ಆದರೆ ಆಕೆ ಕಮರ್ಷಿಯಲ್ ಜಾಹೀರಾತು ಚಿತ್ರೀಕರಣವನ್ನು ಶುರುಮಾಡಿದ್ದಾಳೆ.

ದೊಡ್ಡ ಬ್ರಾಂಡ್ ಪ್ರಚಾರಕ್ಕಾಗಿ ತಂದೆ ಧೋನಿಯ ಜೊತೆ 5 ವರ್ಷದ ಝೀ’ವ ಸೇರಿಕೊಂಡು ಒಪ್ಪಂದ ಮಾಡಿಕೊಂಡಿದ್ದಾಳೆ. ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಎಂ.ಎಸ್.ಧೋನಿ ಈಗ ಹತ್ತಕ್ಕೂ ಹೆಚ್ಚು ದೊಡ್ಡ ಬ್ರಾಂಡ್ಗಳ ಪ್ರೊಮೋಷನ್ ಮಾಡುತ್ತಿದ್ದಾರೆ. ಆದರೆ ಈಗ ಧೋನಿ ಅವರು ತಮ್ಮ ಮಗಳು ಝೀ’ವಾ ಜೊತೆ ತಮ್ಮ ಮುಂದಿನ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಧೋನಿ ಮತ್ತು ಅವರ ಪುತ್ರಿ ಝೀ’ವಾ ಬ್ರ್ಯಾಂಡ್ ಪ್ರೊಮೋಷನ್ ಮಾಡಲು ಮುಂದಾಗಿದ್ದು, ಧೋನಿಯ ಜೊತೆ ಕೆರೆ ಹಂಚಿಕೊಳ್ಳಲು ಝೀವ ಸಿದ್ದಳಾಗಿದ್ದಾಳೆ. ಬ್ರಾಂಡ್ ಪ್ರಮೋಷನ್ ಗಳ ಮೂಲಕ ಝೀ’ವಾಳ ನಟನೆ ಪ್ರಾರಂಭವಾಗಲಿದೆ.

ರೋಡ್ ಮ್ಯಾಪ್ ಜಾಹಿರಾತಿನಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸಹಿ ಮಾಡಿದ ಧೋನಿ ಮತ್ತು ಝೀ’ವಾ ಜೋಡಿ ಓರಿಯೊ ಬಿಸ್ಕತ್ತುಗಳನ್ನು ಪ್ರಮೋಟ್ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಬಿಸ್ಕತ್ತಿನ ಪ್ರಚಾರಕ್ಕಾಗಿ ಶೀಘ್ರದಲ್ಲೇ ಇಬ್ಬರ ಫೋಟೊಗಳು ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿವೆ. ಇದರೊಂದಿಗೆ ಓರಿಯೊ ಕಂಪನಿಯವರು ಧೋನಿ ಮತ್ತು ಝೀ’ವಾ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಟ್ಯಾಗ್ ಮಾಡಿದ್ದಾರೆ. ಝೀ’ವಾ ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಬಹಳ ಫೇಮಸ್ ಆದ ಬಾಲಕಿಯಾಗಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಈಕೆಯ ಖಾತೆಗೆ ಸುಮಾರು 18 ಲಕ್ಷ ಜನ ಫಾಲೊ ಮಾಡುತ್ತಿದ್ದಾರೆ. ಈಕೆ ಬ್ರಾಂಡ್ ಪ್ರಮೋಷನ್ ಗಳ ಮೂಲಕ ಸುಮಾರು ಹತ್ತು ಲಕ್ಷ ಪಡೆಯುತ್ತಾಳೆ ಎಂದು ಮೂಲಗಳ ಮೂಲಕ ತಿಳಿದುಬಂದಿದೆ.