Advertisements

ದಿನಸಿ ಅಂಗಡಿಯಲ್ಲಿ ನಡೆದ ಸತ್ಯ ಘಟನೆ, ಎಲ್ಲಾ ಕೆಲಸ ಬಿಟ್ಟು ನೋಡಿ ಕಣ್ಣೀರು ಬರುತ್ತೆ! ಈ ಮಹಿಳೆ ಮಾಡಿದ್ದೇನು ಗೊತ್ತೆ?

Kannada News

ಒಬ್ಬೊಬ್ಬರ ಜೀವನದಲ್ಲಿ ಕನಸಿನಲ್ಲಿಯೂ ನೆನೆದಿರದ ಅಚ್ಚರಿಗಳು ನಡೆದು ಹೋಗುತ್ತದೆ. ಮುಂದೆ ಒಂದು ದಿನ ಜೀವನದಲ್ಲಿ ಈ ರೀತಿ ನಡೆಯಬಹುದು ಎಂದು ಊಹೆ ಕೂಡ ಮಾಡಿರುವುದಿಲ್ಲ. ಇದಕ್ಕೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ. ಹೌದು, ತಮಿಳುನಾಡಿನ ಒಂದು ಸಣ್ಣ ಹಳ್ಳಿಯಲ್ಲಿ ಶರವಣ ಅನ್ನುವ ದಿನಸಿ ವ್ಯಾಪಾರಿ ಇದ್ದ. ಒಂದು ದಿನ ಎಂದಿನಂತೆ ವ್ಯಾಪಾರ ಮಾಡುತ್ತಿರಬೇಕಾದರೆ ಒಬ್ಬ ೭ ವರ್ಷದ ಹುಡುಗ ಅಂಗಡಿ ಮುಂದೆ ಬಂದು ಏನೂ ಮಾತನಾಡದೆ ಹಾಗೇ ನಿಂತಿದ್ದ. ಇದನ್ನು ಗಮನಿಸಿದ ಶರವಣ ಈತ ಭಿಕ್ಷುಕ ಆಗಿರಬೇಕು ಎಂದು ಅವನಿಗೆ ೧೦ ರುಪಾಯಿ ತೆಗೆದು ಕೊಡುತ್ತಾನೆ.

Advertisements
Advertisements

ಆದರೆ ಆ ಹುಡುಗ ನನಗೆ ದುಡ್ಡು ಬೇಡ , ತಿನ್ನಲು ಏನಾದರೂ ಕೊಡಿ ಅಂತಾನೆ. ಆಗ ಶರವಣನಿಗೆ ಅಯ್ಯೋ ಪಾಪ ಅನ್ನಿಸಿ ಬಿಸ್ಕೆಟ್ ಹಾಗೂ ನೀರು ಕೊಟ್ಟು, ಆ ಹುಡುಗನ ಬಳಿ ಯಾಕೆ ಈ ವಯಸ್ಸಲ್ಲಿ ಭಿಕ್ಷೆ ಬೇಡುತ್ತಿಯಾ ಎಂದು ಕೇಳುತ್ತಾನೆ. ಆಗ ಬಾಲಕ, ನನ್ನ ಹೆಸರು ಬಾಲು ನಾನು ಹುಟ್ಟುವಾಗಲೇ ಅಮ್ಮನ ಕಳೆದುಕೊಂಡೆ, ಇದೀಗ ಕೆಲ ದಿನಗಳ ಹಿಂದೆ ಅಪ್ಪನನ್ನೂ ಕಳೆದುಕೊಂಡೆ. ಹೀಗಾಗಿ ತಿನ್ನಲು ಏನೂ ಇಲ್ಲ ಅದಕ್ಕಾಗಿ ಭಿಕ್ಷೆ ಬೇಡುತ್ತಿದ್ದೇನೆ ಅನ್ನುತ್ತಾನೆ. ಆಗ ಶರವಣ , ಬಾಲು ಜೊತೆ , ಇನ್ನು ನೀನು ಭಿಕ್ಷೆ ಬೇಡುವ ಅಗತ್ಯ ಇಲ್ಲ. ನನ್ನ ಜೊತೆ ಅಂಗಡಿಯಲ್ಲಿ ಕೆಲಸ ಮಾಡು ಅನ್ನುತ್ತಾನೆ. ಅದರಂತೆ ಬಾಲು , ಶರವಣ ಅಂಗಡಿಯ ಎಲ್ಲಾ ಕೆಲಸವನ್ನೂ ನಿಭಾಯಿಸುತ್ತಾನೆ.

ಶರವಣ ಸಂಬಳ ಕೊಟ್ಟರೂ ಅದನ್ನು ಬಾಲು ಪಡೆಯುತ್ತಿರಲಿಲ್ಲ. ಹೀಗಾಗಿ ಶರವಣ ಆ ದುಡ್ಡನ್ನು ಬಾಲು ಹೆಸರಲ್ಲಿ ಕೂಡಿಡುತ್ತಿದ್ದ. ಹೀಗೆ ೧೫ ವರ್ಷ ಸಾಗಿತ್ತು. ಒಂದು ದಿನ ಬಾಲು ನನಗೆ ಚೆನ್ನೈಗೆ ಹೋಗಬೇಕು ಎಂದು ಶರವಣನಿಗೆ ಹೇಳಿ ಹೋಗುತ್ತಾನೆ. ಆದರೆ ಬಾಲು ಹಾಗೆ ಹೋಗಿ ತಿಂಗಳು ಉರುಳಿದರೂ ವಾಪಾಸ್ ಬರುವುದಿಲ್ಲ. ಇದರಿಂದ ಶರವಣ ತುಂಬಾ ನೊಂದಕೊಳ್ಳುತ್ತಾನೆ. ಇದೇ ಸಮಯದಲ್ಲಿ ಎದುರುಗಡೆ ಪಾತ್ರೆ ಅಂಗಡಿಯವನು ತನ್ನ ಅಂಗಡಿಯನ್ನು ಶರವಣನಿಗೆ ಮಾರುತ್ತಾನೆ, ಅದೇ ಸಮಯದಲ್ಲಿ ಶರವಣನ ಗೆಳೆಯನೊಬ್ಬ ತಾನು ಪಾತ್ರೆಗಳನ್ನು ಕಡಿಮೆ ಹಣಕ್ಕೆ ಮಾರೋದಾಗಿ ಹೇಳುತ್ತಾನೆ. ಆಗ ಶರವಣ ಬಾಲು ಹೆಸರಲ್ಲಿ ಕೂಡಿಟ್ಟ ಹಣದಲ್ಲಿ ಅಂಗಡಿ ಹಾಗೂ ಪಾತ್ರೆ ಖರೀದಿಸುತ್ತಾನೆ.

ಅದೃಷ್ಟ ಅನ್ನುವಂತೆ ಶರವಣ ಲಾಭದ ಮೇಲೆ ಲಾಭ ಗಳಿಸಿ ಶ್ರೀಮಂತನಾಗುತ್ತಾನೆ. ಬೇರೆ ಬೇರೆ ಕಡೆ ಪಾತ್ರೆ ಹಾಗೂ ಫರ್ನೀಚರ್ ಅಂಗಡಿ ತೆರೆಯುತ್ತಾನೆ. ಆದರೆ ಶರವಣ ಮಾತ್ರ ದಿನಸಿ ಅಂಗಡಿಯಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿರುತ್ತಾನೆ. ಹೀಗೆ ಸುಮಾರು ವರ್ಷಗಳೇ ಆಗುತ್ತದೆ. ಆಗ ಒಂದು ದಿನ ಒಬ್ಬ ಯುವಕ ಶರವಣ ಬಳಿ ಬರುತ್ತಾನೆ, ಅದು ನೋಡಿದರೆ ಬಾಲು. ಖುಷಿ ತಡೆಯಲಾರದೆ ಶರವಣ ಬಾಬುವನ್ನು ಬಿಗಿ ದಪ್ಪಿ ಎಲ್ಲಿ ಹೋಗಿದ್ದೆ ನನ್ನ ಬಿಟ್ಟು ಎಂದು ಕೇಳುತ್ತಾನೆ. ಆಗ ಬಾಲು, ನಾನು ನಿಮ್ಮಲ್ಲಿ ಸುಳ್ಳು ಹೇಳಿ ಮೋಸ ಮಾಡಿದೀನಿ, ನಾನು ಒಂದು ಹೆಣ್ಣಿನ ಮಾನ ಕಾಪಾಡಲು ಹೋಗಿ ಒಬ್ಬನ ಕೊಲೆ ಮಾಡಿ ಜೈಲಿಗೆ ಹೋಗಿದ್ದೆ.

ಇವತ್ತು ಬಿಡುಗಡೆ ಆಗಿ ಬಂದಿದ್ದೇನೆ. ನಾನು ಕೊಲೆಗಾರ , ನಿಮ್ಮ ಜೊತೆ ಇರಬಾರದು ಎಂದು ಹೇಳಿ ಅಳುತ್ತಾ ಹೊರಡಲು ಮುಂದಾಗುತ್ತಾನೆ. ಆಗ ಶರವಣ, ನೀನು ಒಳ್ಳೆಯ ಹುಡುಗ, ಎಲ್ಲೂ ಹೋಗಬೇಡ, ಒಮ್ಮೆ ತಿರುಗಿ ನೋಡು ಅನ್ನುತ್ತಾನೆ. ಅಲ್ಲಿ ನೋಡಿದರೆ ಬಾಲು ಪ್ರಾವಿಷನ್ ಸ್ಟೋರ್ ಆಂಡ್ ಫರ್ನಿಚರ್ ಶಾಪ್ ಅಂತ ಬೋರ್ಡ್ ಇರುವ ಅಂಗಡಿ ಇರುತ್ತದೆ. ಇದು ನಿನ್ನದೇ ಅಂಗಡಿ, ನಿನ್ನ ಸಂಬಳದ ಹಣದಲ್ಲಿ ಮಾಡಿರುವುದು ಅನ್ನುತ್ತಾನೆ. ಆಗ ಬಾಲು, ಇದು ನನ್ನದು ಮಾತ್ರ ಅಲ್ಲ ಇಬ್ಬರೂ ಸೇರಿಕೊಂಡು ನಡೆಸಿಕೊಂಡು ಹೋಗೋಣ ಅನ್ನುತ್ತಾನೆ. ಹೀಗೆ ಒಬ್ಬ ಅನಾಥ ಭಿಕ್ಷುಕ ತನ್ನ ಒಳ್ಳೆಯ ನಡತೆಯಿಂದ ಇದೀಗ ಹತ್ತು ಹಲವಾರು ಅಂಗಡಿಗಳ ಮಾಲೀಕನಾಗಿಬಿಟ್ಟಿದ್ದಾನೆ. ಇದು ಅಲ್ಲವೇ ಅದೃಷ್ಟ ಅಂದರೆ.