Advertisements

ಈ ನಾಯಿ ಪ್ರತಿದಿನ 25 ಲೀಟರ್ ಹಾಲನ್ನು ಪೂರ್ತಿ ಹಳ್ಳಿಗೆ ಹಂಚಿಕೊಂಡು ಬರುತ್ತೆ ಕಾರಣ ನೋಡಿದ್ರೆ ದಂಗಾಗ್ತೀರಾ..

Kannada News

ನಮಸ್ತೆ ಸ್ನೇಹಿತರೆ, ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ತಕ್ಷಣ ನೆನಪಾಗುವುದು ನಾಯಿ.. ಹೌದು ನಾಯಿಗೆ ನಿಯತ್ತಿನ ಪ್ರಾಣಿ ಎಂದೇ ಬಿರುದು ನೀಡಲಾಗಿದೆ.. ನಾಯಿಗಳನ್ನು ಸಾಕಿದರೆ ಅವು ನಮಗೆ ಪ್ರೀತಿ ಕೊಡುವುದಲ್ಲದೇ ಕೆಲವು ಸಂದರ್ಭಗಳಲ್ಲಿ ನಮ್ಮನ್ನು ರಕ್ಷಿಸುತ್ತವೆ.. ನಾಯಿಗಳ ಬಗ್ಗೆ ಹಲಾವರು ನೈಜ ಘಟನೆಗಳು ಈಗಾಗಲೇ ಕೇಳಿರುತ್ತೀರಾ.. ಇಲ್ಲಿಯೂ ಕೂಡ ಒಂದು ನಾಯಿಯ ನೈಜ ಘಟನೆ ನಡೆದಿದ್ದು ಅದರ ಬಗ್ಗೆ ತಿಳಿದುಕೊಳ್ಳೋಣ.. ಈ ನಾಯಿಯೊಂದು ತನ್ನ ಮಾಲೀಕನು ಕೊಡುವ ಹಾಲನ್ನು ಊರಿನ ಹೊಳಗಡೆ ಹೋಗಿ ಎಲ್ಲಾ ಮನೆಗೆ ಹಾಲನ್ನು ಅಂಚಿಕೊಂಡು ಬರುತ್ತದೆ. ಈ 8 ವರ್ಷದ ಮಣಿಯ ನಾಯಿ ಇರುವುದು ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ..

ಇನ್ನು ಈ ನಾಯಿ ತನ್ನ ಮಾಲೀಕನು ಹೇಳುವ ಮಾತನ್ನು ಚಾಚು ತಪ್ಪದೇ ಪಾಲಿಸುತ್ತದೆ.. ತಮಿಳುನಾಡಿನ ಕೃಷ್ಣಗಿರಿಯಲ್ಲಿ ವಾಸವಾಗಿರುವ ತಂಗವೇಲು ಎಂಬ ವ್ಯಕ್ತಿ ಈ ನಾಯಿಯನ್ನು ಸಾಕಿದ್ದಾರೆ.. ತಂಗವೇಲು ಅವರು ಆರು ವರ್ಷಗಳ ಹಿಂದೆ ರಸ್ತೆಯ ಮೇಲೆ ತನ್ನ ಪಾಡಿಗೆ ತಾನು ಹೋಗುತ್ತಿರುವ ಸಂದರ್ಬದಲ್ಲಿ ಈ ಬೀದಿ ನಾಯಿ ಅನಾಥವಾಗಿ ಮಲಗಿರುವುದನ್ನ ನೋಡಿ ಅದನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ.. ಮನೆಗೆ ಕರೆತಂದ ನಂತರ ಈ ನಾಯಿಗೆ ಮಣಿ ಎಂದು ಹೆಸರಿಟ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ.. ಇನ್ನು ತಂಗವೇಲು ಅವರು ಹಸುಗಳನ್ನು ಕೂಡ ಸಾಕಾಣಿಕೆ ಮಾಡುತ್ತಿದ್ದರು.. ಹಸುಗಳು ಕೊಡುತ್ತಿದ್ದ ಹಾಲನ್ನು ಐದು ಕಿಲೋಮೀಟರ್ ದೂರದಲ್ಲಿರುವ ಡೈರಿಗೆ ತಾನೆ ನಡೆದುಕೊಂಡು ಹೋಗಿ ಪ್ರತಿದಿನ ಹಾಲನ್ನು ಹಾಕುತ್ತಿದ್ದರು..

ಮಣಿ ನಾಯಿ ಸ್ವಲ್ಪ ದೊಡ್ಡದಾದ ನಂತರ ತನ್ನ ಜೊತೆ ಅದನ್ನು ಕೂಡ ಕರೆದುಕೊಂಡು ಹಾಲಿನ ಡೈರಿಗೆ ಹೋಗುತ್ತಿದ್ದ.. ದಿನದ ಎರಡು ಬಾರಿ ಬೆಳಗ್ಗೆ ಸಾಯಂಕಾಲ ತಂಗವೇಲು ಮತ್ತು ಮಣಿ ಇಬ್ಬರು ನಡೆದುಕೊಂಡು ಹಾಲಿನ ಡೈರಿಗೆ ಹೋಗುತ್ತಿದ್ದರು.. ಕೆಲವು ದಿನಗಳು ಕಳೆದಂತೆ ತಂಗವೇಲು ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.. ಇದರಿಂದ ಅವರಿಗೆ ಐದು ಕಿಲೋಮೀಟರ್ ಹಾಲನ್ನು ಎತ್ತಿಕೊಂಡು ಹೋಗಲು ಕಷ್ಟವಾಗುತ್ತದೆ.. ನಂತರ ತಂಗವೇಲು ಅಲೋಚನೆ ಮಾಡಿ ಒಂದು ಕಬ್ಬಿಣದ ಗಾಡಿಯನ್ನು ನಿರ್ಮಿಸುತ್ತಾನೆ.. ಈ ಗಾಡಿಯ ಮೇಲೆ 20 ಲೀಟರ್ ಹಾಲಿನ ಕ್ಯಾನ್ ಗಳನ್ನು ಇಟ್ಟು ಆ ನಾಯಿಯ ಕುತ್ತಿಗೆಯ ಮೇಲೆ ಬೆಲ್ಟ್ ನಿಂದ ಜಾಯಿಂಟ್ ಮಾಡಿ ಆ ನಾಯಿಗೆ ತರಬೇತಿ ನೀಡುತ್ತಾನೆ..

ಇದಾದ ಮೇಲೆ ತನ್ನ ಮಗಳ ಜೊತೆಗೆ ನಾಯಿಯ ಗಾಡಿ ಮೇಲೆ ಹಾಲಿನ ಕ್ಯಾನ್ ಗಳನ್ನು ಇಟ್ಟು ಡೈರಿಗೆ ಹೋಗಿ ಹಾಲನ್ನು ಕೊಟ್ಟು ಬರಲು ಹೇಳುತ್ತಾನೆ.. ಮಾಲಿಕ ಹೇಳುವ ಮಾತನ್ನು ಚಾಚು ತಪ್ಪದೇ ಮಾಡುತ್ತಿದ್ದ ಮಣಿ ಪ್ರತಿದಿನ ತನ್ನ ಮಾಲೀಕನ ಮಗಳ ಜೊತೆ ಡೈರಿಗೆ ಹೋಗಿ ಹಾಲು ನೀಡಿ ಬರುತ್ತಿತ್ತು.. ಈಗೆ ದಿನಗಳು ಕಳೆದಂತೆ ಮಣಿ ನಾಯಿ ಒಂದನ್ನೇ ಡೈರಿಗೆ ಹೋಗಿ ಬರುತ್ತದೆ ಎಂದು ಮಣಿಯನ್ನು ಕಳಿಸುತ್ತಾನೆ.. ಮಣಿ ನಾಯಿ ಆ ದಿನದಿಂದ ಒಬ್ಬನೇ ಬೆಳಗ್ಗೆ ಸಾಯಂಕಾಲ ಡೈರಿಗೆ ಐದು ಕಿಲೋಮೀಟರ್ ದೂರ  ಹೋಗಿ ಸುಮಾರು 25 ಲೀಟರ್ ನಷ್ಟು ಹಾಲನ್ನು ಡೈರಿಗೆ ನೀಡಿ ಬರುತ್ತದೆ..

ತಂಗವೇಲು ಮನೆಯಿಂದ ಡೈರಿಗೆ ಹೋಗುವ ಮತ್ತು ವಾಪಸ್ ಬರುವ ದಾರಿಯನ್ನು ಗುರುತಿಸಿಕೊಂಡಿರುವ ಮಣಿ ನಾಯಿ ಒಂದು ದಿನ ಡೈರಿಗೆ  ಹಾಲು ಹಾಕುವುದನ್ನ ಮರೆತಿಲ್ಲ.. ಈಗೆ ಸುಮಾರು ಆರು ವರ್ಷಗಳಿಂದ ಪ್ರತಿದಿನ ಊಟ ಹಾಕುವ ಮಾಲೀಕನಿಗಾಗಿ ಈ ಮಣಿ ನಾಯಿ 25 ಲೀಟರ್ ಹಾಲು ತುಂಬಿದ ಕ್ಯಾನ್ ಗಳನ್ನು ಗಾಡಿಯ ಮೇಲೆ ಹೊತ್ತು ಡೈರಿಗೆ ಕೊಟ್ಟು ಬರುತ್ತಿದೆ, ಬರೀ ಡೈರಿಗೆ ಮಾತ್ರವಲ್ಲದೇ ಹಳ್ಳಿಯಲ್ಲಿ ಯಾರಾದರೂ ಹಾಲು ಕೇಳಿದರೆ ಈ ಮಣಿ ನಾಯಿ ಮೂಲಕವೇ ಅವರ ಮನೆಗೆ ತಂಗವೇಲು ಹಾಲು ಕೊಟ್ಟು ಕಳುಹಿಸುತ್ತಾನೆ.. ಸ್ನೇಹಿತರೆ ಈ ಮಣಿ ನಾಯಿ ಮಾಡುತ್ತಿರುವ ಕೆಲಸ ನಿಜಕ್ಕೂ ಕೆಲವು ಸೋಮಾರಿತನ ಮನುಷ್ಯರಿಗೆ ಸ್ಪೂರ್ತಿ.. ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..