Advertisements

ಈ ನಾಯಿ ವಿಷಯ ಕೇಳಿದ್ರೆ ಮೈಂಡ್ ಬ್ಲಾಕ್! ಏನಾಗಿತ್ತು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೆ ರಸ್ತೆಯೊಂದರಲ್ಲಿ ಶ್ರೀಮಂತ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ಒಂದು ಬಡವನ ಗುಡಿಸಲಿನಿಂದ ಘಮ ಘಮ ಅಂತಾ ಮೊಲದ ಮಾಂಸದ ಸಾಂಬಾರಿನ ವಾಸನೆ ಶ್ರೀಮಂತ ವ್ಯಕ್ತಿಯ ಮೂಗಿಗೆ ಬಡಿಯುತ್ತೆ ಈ ವಾಸೆನೆನ ಬಿಟ್ಟು ಮುಂದೆ ಹೋಗಲು ಶ್ರೀಮಂತನ ಮನಸ್ಸು ಒಪ್ಪಲಿಲ್ಲ ಅಲ್ಲೆ ನಿಂತುಬಿಟ್ಟ ಸ್ವಲ್ಪ ಸಮಯದ ನಂತರ ಗುಡಿಸಲಿನಿಂದ ಹೊರಬಂದ ಬಡ ವ್ಯಕ್ತಿ ಮನೆ ಎದುರಿಗೆ ಶ್ರೀಮಂತ ವ್ಯಕ್ತಿ ನಿಂತಿರೋದು ನೋಡಿ ಬನ್ನಿ ಅಣ್ಣ ಮನೆಯೊಳಗೆ ಬನ್ನಿ ಅಂತ ಶ್ರೀಮಂತರನ್ನು ಬಡವ ಕರೆದ ಬಡವನ ಗುಡಿಸಲಿನ ಹೊಳಗೆ

ಹೋಗೋಕ್ಕೆ ಇಷ್ಟವಿಲ್ಲದಿದ್ದರೂ ಮಾಂಸದ ಸಾಂಬಾರಿನ ವಾಸನೆ ಶ್ರೀಮಂತ ಬಡವನ ಮನೆಯೊಳಗೆ ಹೋಗುವಂತೆ ಮಾಡಿತ್ತು ಏನು ನಿಮ್ಮ ಮನೆಯ ಮಾಂಸದ ಸಾರು ರಸ್ತೆಯವರೆಗೂ ಘಮ್ ಅಂತಾ ಸುವಾಸನೆ ಬರುತ್ತಿದೆಯಲ್ಲ ಅಂತ ಶ್ರೀಮಂತ ಕೇಳಿದ ಹೌದು ಅಣ್ಣ ಸ್ವಲ್ಪ ಚಕ್ಕೆ ಪಲಾವ್ ಸಾಮಾನು ತುಪ್ಪ ಎಲ್ಲಾ ಹಾಕಿ ಮಾಡಿದ್ದೀನಿ ಹೀಗಾಗಿ ವಾಸನೆ ಬರುತ್ತಿರಬಹುದು ನೀವು ಊಟ ಮಾಡಿ ಅಣ್ಣ ಅಂತ ಬಡ ವ್ಯಕ್ತಿ ಕೇಳಿದ ಶ್ರೀಮಂತ ಊಟ ಮಾಡ್ತೀನಿ ಎಂದು ತಲೆ ಅಲ್ಲಾಡಿಸಿದ ಮೊಲದ ಮಾಂಸದ ಕರಿ ಒಂದು ಕಪ್ ನಲ್ಲಿ ಹಾಕಿ ಬಿಸಿ ಮುದ್ದೆ ಊಟವನ್ನು ಶ್ರೀಮಂತನಿಗೆ ಬಡವ ಬಡಿಸಿದ

Advertisements
Advertisements

ಒಂದು ಪೀಸ್ ಮಾಂಸವನ್ನು ಎತ್ತಿಕೊಂಡು ಟೇಸ್ಟ್ ಮಾಡಿದ ಶ್ರೀಮಂತ ಇದು ಯಾವ ಪ್ರಾಣಿಯ ಮಾಂಸ ಇಷ್ಟೊಂದು ರುಚಿಯಾಗಿದೆ ಅಲ್ವಾ ಕೇಳಿದ ಅಣ್ಣ ಇದು ಮೊಲದ ಮಾಂಸ ಅಂತ ಬಡವ ಹೇಳಿದ ಏನು ಮೊಲದ ಮಾಂಸನಾ ಏನು ಹಣಕೊಟ್ಟು ತಂದಿದ್ದ ಮೊಲದ ಮಾಂಸನಾ ಅಂತ ಆಸೆಯಿಂದ ತುಂಬಾ ಇಷ್ಟಪಟ್ಟು ಊಟ ಮಾಡಿದ ಶ್ರೀಮಂತ ಊಟ ಆದ ನಂತರ ಬಡವನಿಗೆ ಥ್ಯಾಂಕ್ಸ್ ಹೇಳಿ ಆಚೆ ಬರುವಾಗ ಒಂದು ಬೀದಿ ನಾಯಿ ಬಾಗಿಲ ಬಳಿ ಮಲಗಿರುವುದನ್ನು ಶ್ರೀಮಂತ ನೋಡಿದ ಛೇ ಬೀದಿ ನಾಯಿ ನೀನು ಇಲ್ಲಿಗೂ ಬಂದು ಬಿಟ್ಟೆಯಾ ಈ ಶನಿಗೆ ನಾನು

ಪ್ರತಿದಿನ ನಾನು ತಿಂದುಬಿಟ್ಟ ಎಂಜಲಿನ ಊಟ ಹಾಕ್ತೀನಿ ನಮ್ಮ ಮನೆಯ ಕಾವಲು ಕಾಯುತ್ತೆ ಈ ನಾಯಿ ಅಂತಾ ಶ್ರೀಮಂತ ವ್ಯಕ್ತಿ ಹೇಳಿದ ಅಣ್ಣ ನೀವು ಈಗ ತಾನೇ ತಿಂದು ಸೂಪರ್ ಆಗಿದೆ ಅಂತಾ ಹೇಳಿದರಲ್ಲ ಆ ಮೊಲದ ಮಾಂಸದ ಸಾಂಬಾರು ಮಾಡಲು ಈ ನಾಯಿನೆ ಮೊಲವನ್ನು ಹಿಡಿದುಕೊಂಡು ಬಂದು ನನಗೆ ಕೊಟ್ಟಿತು ಒಂದು ದಿನ ಕಾಡಿನಲ್ಲಿ ಈ ನಾಯಿ ತಿರುಗಾಡುತ್ತಿದ್ದಾಗ ಮೊಲ ಈ ನಾಯಿಗೆ ಕಾಣಿಸಿದೆ ಕೂಡಲೇ ಮೊಲ ಹಿಡಿದ ನಾಯಿ ತಾನು ತಿನ್ನದೇ ನಮ್ಮ ಮನೆಗೆ ಎತ್ತುಕೊಂಡು ಬಂತು ಅಂತಾ ಬಡ ವ್ಯಕ್ತಿ ಹೇಳಿದ ಈ ಮಾತು ಕೇಳಿಸಿಕೊಂಡ ಶ್ರೀಮಂತ ವ್ಯಕ್ತಿ ಆ ನಾಯಿಯನ್ನೇ ಗುರಾಯಿಸಿ ನೋಡಿ
ಏನು ಮಾತನಾಡದೆ ಅಲ್ಲಿಂದ ಹೊರಟುಹೋದ

ಮಾರನೆಯದಿನ ಮೀನು ತಿಂದ ಶ್ರೀಮಂತ ಮೂಳೆಗಳನ್ನು ಆಚೆ ಎಸೆಯಲು ಹೋದಾಗ ಅದೇ ಬೀದಿನಾಯಿ ಬಂದು ಮೂಳೆ ತಿನ್ನಲು ಕಾಯುತ್ತ ನಿಂತಿತ್ತು ಥೂ ನಿಯತ್ತಿಲ್ಲದ ನಾಯಿ ಎಂಜಲು ಆಹಾರನ ನಾನು ನಿನಗೆ ಕೊಡಬೇಕು ಆದರೆ ನಿಯತ್ತಿಲ್ಲದ ನೀನು ಮೊಲ ಹಿಡಿದು ಆ ಬಡವನಿಗೆ ತಗೊಂಡು ಹೋಗಿ ಕೊಡುತ್ತೀಯಾ
ಈಗ ಮಾತ್ರ ತಿನ್ನೋಕೆ ಇಲ್ಲಿಗೆ ಬಂದಿದ್ದೀಯಾ ಅಂತಾ ಶ್ರೀಮಂತ ಆ ನಾಯಿಗೆ ಚೆನ್ನಾಗಿ ಬೈದ ಹಸಿವು ತಡೆಯಲಾಗದೆ ನಾಯಿ ಆ ಮೀನಿನ ಮೂಳೇನೇ ನೋಡುತ್ತಾ ನಿಂತಿತ್ತು ನಿನಗೆ ಕೊಡಲ್ಲ ಹೋಗು ಅಂತ ಕಲ್ಲು ಎತ್ತಿ ನಾಯಿ ಮೇಲೆ ಎಸೆದು ಕಾಗೆಗಳಿಗೆ ಮೀನಿನ ಮೊಳೆಗಳನ್ನು ಹಾಕಿದ

ಈ ಘಟನೆ ನಡೆಯೋದಕ್ಕೂ ಅದೇ ಬಡ ವ್ಯಕ್ತಿ ಅಲ್ಲಿಗೆ ಬರಲು ಸರಿಯಾಯಿತು ನಾಯಿನ ನೋಡಿದ ಬಡವ ಬಾರೋ ಚಿನ್ನ ಎರಡು ಮೊಟ್ಟೆ ತಂದಿದ್ದೀನಿ ನೀನೊಂದು ನಾನೊಂದು ತಿನ್ನೋಣ ಅಂತ ಎಂದು ಹೇಳಿ ಆ ನಾಯಿನ ಜೊತೆಯಲ್ಲಿ ಕರೆದುಕೊಂಡು ಬಡವ ತನ್ನ ಗುಡಿಸಲಿಗೆ ಹೋದ ಬಾಗಿಲಿನಿಂದ ಇಣುಕಿ ನೋಡಿದಾಗ ಬಡವ ಮತ್ತು ನಾಯಿ ಒಟ್ಟಿಗೆ ಕೂತು ಒಂದೊಂದು ಮೊಟ್ಟೆ ತಿನ್ನೋದು ಶ್ರೀಮಂತನಿಗೆ ಕಾಣಿಸಿತು ನಾಯಿ ಬಡವ ಒಟ್ಟಿಗೆ ಜೊತೆಯಲ್ಲೇ ಕೂತು ಮೊಟ್ಟೆ ತಿಂದರೂ ಬಡವ ನಾಯಿಗೆ ಮೊಟ್ಟೆ ನಾ ದೂರದಿಂದ ತಾನು ತಿಂದ ನಂತರ ಎಸೆಯಲಿಲ್ಲ

ಬದಲಿಗೆ ಬದಲಿಗೆ ತನ್ನ ಸರಿಸಮಾನವಾಗಿ ನಾಯಿನ ಕೂರಿಸಿ
ಮೊಟ್ಟೆ ತಿನ್ನಿಸಿದ ತಾನು ತಿಂದ ನಂತರ ಮಿಕ್ಕಿದ್ದನ್ನು ಬೇರೆಯವರಿಗೆ
ಎತ್ತಿ ಬಿಸಾಕೋದನ್ನು ದಾನ ಅನ್ನೋದಿಲ್ಲ ತನ್ನ ಜೊತೆ ತನ್ನ ಊಟವನ್ನು ಹಂಚಿಕೊಂಡು ತಿನ್ನೋಣ ಎಂದು ಹೇಳಿ ಪ್ರೀತಿಯಿಂದ ಕೊಡೋದೇ ನಿಜವಾದ ದಾನ ಎಂಬುದನ್ನು ಶ್ರೀಮಂತ ಅರ್ಥಮಾಡಿಕೊಂಡ ಆ ನಾಯಿಯನ್ನು ಬಡವ ಪ್ರೀತಿಯಿಂದ ತನ್ನ ಸರಿಸಮಾನವಾಗಿ ನೋಡಿಕೊಂಡಿದ್ದ ರಿಂದಲೇ ತನ್ನ ಬೇಟೆಯ ಮೊಲವನ್ನು ಬಡವನಿಗೆ ಆ ನಾಯಿ ತಂದುಕೊಟ್ಟಿದೆ ಎಂದು ಶ್ರೀಮಂತ ತಿಳಿದುಕೊಂಡ ಸ್ನೇಹಿತರೆ ಮೊದಲು ನಾವು ದಾನ ಕೊಡೋದು ಹೇಗೆ ಅಂತ ಮೊದಲು ಕಲಿಯಬೇಕು
ಒಂದು ನಾಯಿಗೆ ತಾನು ತಿಂದು ಬಿಟ್ಟಿದ್ದನ್ನು ದೂರದಿಂದ ಎಸೆಯುವುದು ಪ್ರೀತಿಯಲ್ಲ ಈ ರೀತಿ ಮಾಡೋದನ್ನು ದಾನ ಅಂತ ಹೇಳಕ್ಕಾಗಲ್ಲ ತನಗೆ ಸಿಕ್ಕ ಊಟವನ್ನು ಸರಿಸಮಾನವಾಗಿ ಅಂಚು ತಿನ್ನುವುದನ್ನು ನಿಜವಾದ ಪ್ರೀತಿ ದಾನ ಎನ್ನುತ್ತಾರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ