Advertisements

ಡಾ.ರಾಜಕುಮಾರ್ ಅವರ ಹೆಸರಿನಲ್ಲಿ ಇವರು ಮಾಡುತ್ತಿರುವ ಕೆಲಸ ಏನು ಗೊತ್ತಾ..? ನಿಜಕ್ಕೂ ಗ್ರೇಟ್ ಅಂತೀರಾ…

Inspiration

ನಮಸ್ತೆ ಸ್ನೇಹಿತರೆ, ಡಾ. ರಾಜಕುಮಾರ್ ಅವರ ಕೀರ್ತಿ ಕರ್ನಾಟಕದ ತುಂಬೆಲ್ಲಾ ಹ’ರಡಿದೆ. ಅಣ್ಣಾವ್ರನ್ನು ಆರಾಧಿಸುವ ಅದೆಷ್ಟು ಅಭಿಮಾನಿಗಳು ನಮ್ಮ ಕರ್ನಾಟಕದಲ್ಲಿ ಇದ್ದಾರೆ. ಅದೇ ರೀತಿ ಅಣ್ಣಾವ್ರ ಹೆಸರಿನಲ್ಲಿ ಅದೆಷ್ಟೋ ಸೇವಾಕಾರ್ಯಗಳು ಸಹ ನಮ್ಮ ರಾಜ್ಯದಲ್ಲಿ ನಡೆದಿವೆ. ಅದೇ ರೀತಿ ಅಣ್ಣಾವ್ರ ಹೆಸರನ್ನು ಬಳಸಿಕೊಂಡು ಲರ್ನಿಂಗ್ ಅಪ್ಲಿಕೇಶನ್ ಒಂದನ್ನು ಈಗ ಬಿಡುಗಡೆ ಮಾಡಿದ್ದಾರೆ. ಅಷ್ಟಕ್ಕೂ ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದವರು ಯಾರು ಅಂತ ಗೊತ್ತಾ. ಮುಂದೆ ಓದಿ..

Advertisements
Advertisements

ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದವರು ಬೇರೆ ಯಾರು ಅಲ್ಲ, ಅಣ್ಣಾವ್ರ ಕಿರಿಯಮಗ ಪುನೀತ್ ರಾಜಕುಮಾರ್ ಅವರು. “ಬಡತನ ಓದಿಸುವವರಿಗೆ ಇರುತ್ತೆ. ಓದುವವರಿಗೆ ಅಲ್ಲ.’’ ಈ ಮಾತು ಹೇಳೋ ಪುನೀತ್ ರಾಜ್ ಕುಮಾರ್ ಹೊಸದೊಂದು ಬದಲಾವಣೆಗೆ ಶ್ರೀಕಾರ ಬರೆದ ಹಾಗಿದೆ. ಇದಾಗಲೇ ಸಾಕಷ್ಟು ಲರ್ನಿಂಗ್ ಅಪ್ಲಿಕೇಷನ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೈಜು’ಸ್, ಅನಕಾಡೆಮಿಯಂಥಾ ಲರ್ನಿಂಗ್ ಅಪ್ಲಿಕೇಶನ್ಗಳು ಜನರ ಮನಗಳಲ್ಲಿ ಗ’ಟ್ಟಿಯಾಗಿ ಬೇ’ರೂ’ರಿವೆ. ಇವುಗಳ ಮಧ್ಯೆ, ಹಳ್ಳಿ ಹಳ್ಳಿಗೂ ಆನ್​ಲೈನ್ ಕೋರ್ಸ್ ಮೂಲಕ, ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲಲು ಅನುಕೂಲ ಕಲ್ಪಿಸುವ ‘‘ರಾಜ್ ಕುಮಾರ್ ಲರ್ನಿಂಗ್ ಆಪ್’’ ಅನ್ನು ಗುಣಮಟ್ಟದ ಶಿಕ್ಷಣ ಎಲ್ಲರಿಗಾಗಿ ಅನ್ನೋ ಉದ್ದೇಶ ಇಟ್ಕೊಂಡು ಬಿಡುಗಡೆ ಮಾಡಿದ್ದಾರೆ. ಉಚಿತವಾಗಿ, ಹಾಗೂ ಹಣಕ್ಕೆ ತಕ್ಕಂತೆ ಎರಡೂ ಬಗೆಯಲ್ಲೂ ಕೋರ್ಸ್​ಗಳು ಇದ್ದ ಹಾಗೆ ಕಾಣ್ತಿದೆ. ಈಗ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ..

ಇದರಲ್ಲಿ KPSC, SSC, UPSC ಎಲ್ಲಕ್ಕೂ ಅನುಕೂಲವಾಗುವಂತಹ ಸ್ಟಡಿ ಮೆಟೀರಿಯಲ್ಸ್ ಲಭ್ಯವಿದೆ. ಕನ್ನಡ ಕಲಿಯಲು ಉಚಿತ ಕೋರ್ಸ್ ಕೂಡ ಇದೆ. ಇದರಲ್ಲಿ ವಿ’ಚಿತ್ರ ಏನಂದರೆ, ರಾಜ್ ಕುಮಾರ್ ಅವರು ಓದಿದ್ದು ಬರೀ ನಾಲ್ಕನೇ ಕ್ಲಾಸ್ ಮಾತ್ರ, ಆದರೆ ಅವರ ಜೀವನ ಶೈಲಿ, ಜೀವನದಲ್ಲಿ ಗೆದ್ದ ಶೈಲಿ ಎಂಥವರಿಗೂ ಮಾದರಿ. ರಾಜಕುಮಾರ್ ಅವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕ. ಈಗ ಅವರ ಹೆಸರಲ್ಲೇ ಲಗ್ಗೆ ಇಟ್ಟಿರೋ ಈ ಅಪ್ಲಿಕೇಷನ್ ಸಾಕಷ್ಟು ಜನಕ್ಕೆ ಮಿ’ತಿಮೀರಿ ಸಹಾಯ ಮಾಡುವಂತಾಲಿ ಅಂತಹ ಆಶಿಸೋಣ. ಈ ಲರ್ನಿಂಗ್ ಅಪ್ಲಿಕೇಶನ್ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ….