Advertisements

ಒಂದು ವರ್ಷದ ನಂತರ ಸಿಹಿ ಸುದ್ದಿ ಹಂಚಿಕೊಂಡ ಯುವ ವಿಜ್ಞಾನಿ ಡ್ರೋನ್ ಪ್ರತಾಪ್.! ಡ್ರೋನ್ ಪ್ರತಾಪ್ ಮತ್ತೆ….

Entertainment Kannada News

ನಮಸ್ತೆ ಸ್ನೇಹಿತರೆ, ಭಾರತದ ಕಂಡ ಹೆಮ್ಮೆಯ ಯುವ ವಿಜ್ಞಾನಿ, ಕನ್ನಡಿಗರ ಹೆಮ್ಮೆಯ ಮಗ, ಮಂಡ್ಯದ ಗಂಡು, ಡ್ರೋಣಾಚಾರ್ಯ ಹೀಗೆಲ್ಲಾ ಸಾಕಷ್ಟು ಫೇಮಸ್ ಆಗಿದ್ದವರು ಡ್ರೋನ್ ಪ್ರತಾಪ್. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಗೆ ಪ್ರತಾಪ, ಪುಂಗಿ ಪ್ರತಾಪ ಅಂತ ಕರೆಯಲು ಶುರು ಮಾಡಿದ್ದಾರೆ. ಸುಮಾರು ಎರಡು ವರ್ಷಗಳಿಂದ ಕನ್ನಡಿಗರಿಗೆ ಕಾಗೆ ಹಾಗೂ ಕಿವಿಗೆ ಹೂವು ಇಡುತ್ತಾ ಬಂದಿದ್ದ ಅಂತರಾಷ್ಟ್ರೀಯ ಈ ಯುವ ವಿಜ್ಞಾನಿಯ ಅಸಲಿ ಮುಖ ಬೆಳಕಿಗೆ ಬಂದಿದೆ. ಇನ್ನು ಈತ ತನ್ನ ಸು’ಳ್ಳಿನ ಸೆರಮಾಲೆಯಿಂದ ಸಿನಿಮಾ ಕ್ಷೇತ್ರ ಹಾಗೂ ರಾಜಕೀಯ ವಲಯದಲ್ಕೂ ಸಂಬಂದ ಹಾಗೂ ಸ್ನೇಹವನ್ನು ಸಹ ಬೆಳೆಸಿಕೊಂಡಿದ್ದ. ಇದರ ಜೊತೆಗೆ ರಾಜಕೀಯ ವರ್ಗದಿಂದ ಹಾಗೂ ಮಠಗಳಿಂದ ಕೂಡ ಬಹಳಷ್ಟು ಜನರಿಂದ ಹಣ ಕೊಟ್ಟಿದ್ದರು ಎಂಬುದು ಬೆಳಕಿಗೆ ಬರುತ್ತಿದೆ.

Advertisements
Advertisements

ಇನ್ನು ಮೊದಲ ಬಾರಿಗೆ ಡ್ರೋನ್ ಪ್ರತಾಪ್ ಅನ್ನು ವಾಹಿನಿಯೊಂದರಲ್ಲಿ ಪರಿಚಯಿಸಿದ್ದು ನವರಸನಾಯಕ ಜಗ್ಗೇಶ್ ಅವರು. ಜಗ್ಗೇಶ್ ಅವರು ಇದರ ಜೊತೆಗೆ ಆರ್ಥಿಕವಾಗಿಯೂ ಕೂಡ ಸಾಕಷ್ಟು ಸಹಾಯ ಮಾಡಿದ್ದು, ಸಂಪೂರ್ಣವಾಗಿ ಆತನ ಮಾತಿಗೆ ಮ’ರುಳಾಗಿ ಹೋಗಿದ್ದರು. ಇನ್ನು ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡರಿಗೂ ಕೂಡ ಪ್ರತಾಪ್ ನನ್ನು ಪರಿಚಯಿಸಿ ನಗದು ಸಿಗುವಂತೆಯೂ ಮಾಡಿದ್ದರು. ಪ್ರತಾಪನ ನಿಜ ವಿಚಾರವಿಲ್ಲ ತಿಳಿದಮೇಲೆ ಅ’ಸಮಾಧಾನವನ್ನು ವ್ಯಕ್ತಪಡಿಸಿದ ನವರಸ ನಾಯಕ ಜಗ್ಗೇಶ್ ಅವರು ಇನ್ನು ನನ್ನ ಜೀವನದಲ್ಲಿ ಇಂಥವರಿಗೆ ಯಾರಿಗೂ ಕೂಡ ಸಹಾಯ ಮಾಡುವುದಿಲ್ಲ ಎಂದು ತಿಳಿಸಿದ್ದರು.

ಇನ್ನೂ ಸೋಶಿಯಲ್ ಮೀಡಿಯಾಗಳಲ್ಲಂತೂ ಪ್ರತಾಪನ ವಿ’ರುದ್ಧ ದೊಡ್ಡ ಟ್ರೋಲ್ ಗಳು ಕೂಡ ಪ್ರಾರಂಭವಾಗಿತ್ತು , ಇನ್ನು ಆತ ಯಾರ ಕೈಗೂ ಸಿಗದೇ ತಪ್ಪಿಸಿಕೊಂಡದ್ದು ಕೊನೆಯಲ್ಲಿ ಮೈಸೂರಿನಲ್ಲಿ ಸಿಕ್ಕಿ ಬಿ’ದ್ದಿದ್ದ. ನಂತರದ ದಿನಗಳಲ್ಲಿ ಈತನ ಸಾಮಾಜಿಕ ಜಾಲತಾಣದಲ್ಲಿ ಎಪ್ಪತ್ತೆರೆಡು ಲಕ್ಷ ಫಾಲೋವರ್ಸ್ ಗಳು ಮೂವತ್ತೆರೆಡು ಸಾವಿರಕ್ಕೆ ಇಳಿದು ಬಂದು ನಿಂತಿದೆ. ಇನ್ನೂ ಕಳೆದ ವರ್ಷ ಆತ ಸ್ಪಷ್ಟನೆ ನೀಡುವ ಸಲುವಾಗಿ ವೀಡಿಯೋ ಮಾಡಿದ್ದನ್ನು ಬಿಟ್ಟರೆ ಮತ್ತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆಗಾಗ ಆತನ ಫೋಟೋಗಳು ಟ್ರೋಲ್ ಗಳಲ್ಲಿ ಕಾಣಿಸುತ್ತಿತ್ತು ಅಷ್ಟೇ. ಇದೀಗ ಒಂದು ವರ್ಷದ ಬಳಿಕ ಡ್ರೋನ್ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾನೆ. ಹೌದು ವಿಮಾನದಲ್ಲಿ ಕೂತು, ನಾನು ಲಂಡನ್‌ ನ ವಿಮಾನ ನಿಲ್ದಾಣದಲ್ಲಿದ್ದೇನೆ ಅಂತ ಬರೆದುಕೊಂಡಿದ್ದಾನೆ. ಡ್ರೋನ್ ಪ್ರತಾಪ್ ಯುವ ವಿಜ್ಞಾನಿ ಅಂತ ನೀವು ನಂಬುತ್ತೀರಾ.? ಕಮೆಂಟ್ ಮಾಡಿ ತಿಳಿಸಿ.